ಚಾಮರಾಜನಗರದಲ್ಲಿ ನೂತನ ಸಂಸದರ ಕಚೇರಿ ಉದ್ಘಾಟನೆ

KannadaprabhaNewsNetwork |  
Published : Nov 23, 2024, 12:31 AM IST
ಚಾಮರಾಜನಗರ  ನಗರದ ಜಿಲ್ಲಾಡಳಿತ ಭವನದ ಎರಡನೆಯ ಮಹಡಿಯಲ್ಲಿರುವ ನೂತನ ಸಂಸದರ ಸುನೀಲ್ ಬೋಸ್ ಅವರ  ಕಚೇರಿಯನ್ನು ಮಾಜಿ ಸಚಿವ, ಹಾಲಿ ಶಾಸಕ ಸಿ.ಪುಟದ ಉದ್ಘಾಟಿಸಿ ಶುಭ ಕೋರಿದರು. | Kannada Prabha

ಸಾರಾಂಶ

ಚಾಮರಾಜನಗರದ ಜಿಲ್ಲಾಡಳಿತ ಭವನದ ಎರಡನೆಯ ಮಹಡಿಯಲ್ಲಿರುವ ನೂತನ ಸಂಸದರ ಸುನೀಲ್ ಬೋಸ್ ಅವರ ಕಚೇರಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿ ಶುಭ ಕೋರಿದರು. ಇದಕ್ಕೂ ಮೊದಲು ನಗರಕ್ಕೆ ಆಗಮಿಸಿದ ಸಂಸದರನ್ನು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.

ಸಂಸದ ಸುನೀಲ್‌ ಬೋಸ್‌ಗೆ ಅದ್ಧೂರಿ ಸ್ವಾಗತ । ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಷಣೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಜಿಲ್ಲಾಡಳಿತ ಭವನದ ಎರಡನೆಯ ಮಹಡಿಯಲ್ಲಿರುವ ನೂತನ ಸಂಸದರ ಸುನೀಲ್ ಬೋಸ್ ಅವರ ಕಚೇರಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿ ಶುಭ ಕೋರಿದರು.

ಇದಕ್ಕೂ ಮೊದಲು ನಗರಕ್ಕೆ ಆಗಮಿಸಿದ ಸಂಸದರನ್ನು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಸಂಸದರು, ಶಾಸಕರು ಜೊತೆಯಾಗಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಷಣೆ ಮಾಡಿದರು.

ನಂತರ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಂಸದರ ಕಚೇರಿ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಸಂಸದರ ಕಚೇರಿಯನ್ನು ತೆರೆಯಲಾಗಿದೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಸಂಸದ ಸುನೀಲ್ ಬೋಸ್ ಮಾತನಾಡಿ, ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸಂಸದರ ಕಚೇರಿ ತೆರೆದಿದ್ದು, ಜಿಲ್ಲೆಯ ಜನತೆ ಕೇಂದ್ರ ಪುರಸ್ಕೃತ ಯೋಜನೆಗಳ ಸದ್ಬಳಕೆ ಹಾಗೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಚೇರಿ ತೆರೆಯಲಾಗಿದೆ. ಜಿಲ್ಲೆಯ ಜನತೆ ಕಚೇರಿಯಲ್ಲಿ ಸಮಸ್ಯೆಗಳನ್ನು ಕುರಿತು ಆಹವಾಲು ಸಲ್ಲಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಎಚ್.ಎಸ್.ಗಣೇಶ್‌ ಪ್ರಸಾದ್, ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಲಕ್ಷ್ಮಿನಾರಾಯಣ. ಟಿ ನರಸಿಪುರ ಬಸವರಾಜ್. ಅಯ್ಯನಪುರ ಶಿವಕುಮಾರ್. ಕೆ ಪಿ ಸದಾಶಿವ ಮೂರ್ತಿ, ಆಲೂರು ಪ್ರದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಸೈಯದ್ ರಫಿ. ಮಹೇಶ್ ಕುದರ್. ನಲ್ಲೂರು ಮಹದೇಸ್ವಾಮಿ. ಕಮಲ್ ಖಾನ್. ವೀರಭದ್ರ ಸ್ವಾಮಿ. ಎಪಿಎಂಸಿ ಅಧ್ಯಕ್ಷ ಸೋಮೇಶ್. ಮುಡಿಗುಂಡ ಶಾಂತರಾಜ್. ಸೋಮಣ್ಣ ಬ್ಲಾಕ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ, ಉಮೇಶ್ ಎಸ್‌ಪಿಕೆ, ಕಾಗಲವಾಡಿ ಚಂದ್ರು, ಇತರರು ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...