0ಕ್ಕೆ ನೂತನ ಸಂಚಾರಿ ನ್ಯಾಯಾಲಯ ಉದ್ಘಾಟನೆ

KannadaprabhaNewsNetwork |  
Published : Apr 18, 2024, 02:17 AM IST
 ಹುನಗುಂದದಲ್ಲಿ ಸಂಚಾರಿ ಜಿಲ್ಲಾ ಸತ್ರ ನ್ಯಾಯಾಲಯದ ಉದ್ಘಾಟನೆ ಕುರಿತು ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಂ. ಉಪ್ಪಾರ ವಿ.ಬಿ. ದಮ್ಮೂರಮಠ, ಉಮಾ ಎಸ್ ಬಳ್ಳೊಳ್ಳಿ, ಎಂ.ಎಸ್. ಸಂಗಮಕರ, ಪಿ.ಬಿ.ಹುಲ್ಯಾಳ ಇದ್ದರು.  | Kannada Prabha

ಸಾರಾಂಶ

ಹುನಗುಂದ: ತಾಲೂಕು ನ್ಯಾಯಾಲಯದ ಆವರಣದಲ್ಲಿರುವ ನೂತನ ಕಟ್ಟಡದಲ್ಲಿ ಏ.20ರಂದು ಸಂಜೆ 5ಕ್ಕೆ ಹುನಗುಂದ ಮತ್ತು ಇಲಕಲ್ಲ ಅವಳಿ ತಾಲೂಕಿನ ವಕೀಲರ ಸಂಘ ಸಹಯೋಗದಲ್ಲಿ ನೂತನವಾಗಿ ಸೃಜಿಸಲ್ಪಟ್ಟ ಜಿಲ್ಲಾ ಮತ್ತು ಸತ್ರ ಸಂಚಾರಿ ನ್ಯಾಯಾಲಯ ಉದ್ಘಾಟನೆಗೊಳ್ಳಲಿದೆ ಎಂದು ವಕೀಲ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ತಾಲೂಕು ನ್ಯಾಯಾಲಯದ ಆವರಣದಲ್ಲಿರುವ ನೂತನ ಕಟ್ಟಡದಲ್ಲಿ ಏ.20ರಂದು ಸಂಜೆ 5ಕ್ಕೆ ಹುನಗುಂದ ಮತ್ತು ಇಲಕಲ್ಲ ಅವಳಿ ತಾಲೂಕಿನ ವಕೀಲರ ಸಂಘ ಸಹಯೋಗದಲ್ಲಿ ನೂತನವಾಗಿ ಸೃಜಿಸಲ್ಪಟ್ಟ ಜಿಲ್ಲಾ ಮತ್ತು ಸತ್ರ ಸಂಚಾರಿ ನ್ಯಾಯಾಲಯ ಉದ್ಘಾಟನೆಗೊಳ್ಳಲಿದೆ ಎಂದು ವಕೀಲ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ ಹೇಳಿದರು.

ಪಟ್ಟಣದ ನ್ಯಾಯಾಲಯದ ವಕೀಲ ಸಂಘದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಹುದಿನಗಳ ಕನಸು ಈಗ ನನಸಾಗುತ್ತಿದೆ. ಈ ಜಿಲ್ಲಾ ಸತ್ರ ಸಂಚಾರಿ ನ್ಯಾಯಾಲಯ ಮಂಜೂರಿಯಾಗಿದ್ದು ನಮಗೆಲ್ಲ ಸಂತಸದ ಸಂಗತಿ. ಈ ಭಾಗದ ಬಹುತೇಕ ಕಕ್ಷಿದಾರರು ಜಿಲ್ಲೆಗೆ ತಿರುಗುವುದು ತಪ್ಪಿ, ಇನ್ನುಂದೆ ವಾರಕ್ಕೆ 2ದಿನ ಶುಕ್ರವಾರ ಮತ್ತು ಶನಿವಾರ ಜಿಲ್ಲಾ ಸತ್ರ ಸಂಚರಿ ನ್ಯಾಯಾಲಯ ಹುನಗುಂದದಲ್ಲಿ ಕಾರ್ಯನಿರ್ವಹಿಸುವುದು. ಇದರಿಂದ ನಮ್ಮ ಅವಳಿ ತಾಲೂಕಿನ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ. ಈ ಭಾಗಕ್ಕೆ ಸಂಬಂಧಪಟ್ಟ ಜಿಲ್ಲಾ ನ್ಯಾಯಾಲಯದಲ್ಲಿರುವ ಪ್ರಕರಣಗಳು ಇನ್ಮುಂದೆ ಇದೆ ತಾಲೂಕಿನ ನ್ಯಾಯಾಲದಲ್ಲಿ ನಡೆಯುವುದು ಎಂದು ತಿಳಿಸಿದರು.

ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಸಚಿನ್ ಶಂಕರ್‌ ಮಗದುಮ್ ಜಿಲ್ಲಾ ಸಂಚಾರಿ ನ್ಯಾಯಾಲಯ ಉದ್ಘಾಟಿಸುವರು. ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಹಂಚಾಟೆ ಸಂಜೀವಕುಮಾರ, ರಾಜೇಂದ್ರ ಎಂ ಬದಾಮಿಕರ್ ಗೌರವಾನ್ವಿತ ಅಥಿತಿಗಳಾಗಿ ಪಾಲ್ಗೊಳ್ಳುವರು. ಪ್ರಧಾನ ಜಿಲ್ಲಾ ಸತ್ರ ಮತ್ತು ನ್ಯಾಯಾಧೀಶರಾದ ಎನ್.ವಿ. ವಿಜಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್.ಮಿಟ್ಟಲಕೋಡ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಿವಿಲ್ ನ್ಯಾಯಾಧೀಶ ಬಸವರಾಜ ನೇಸರಗಿ, ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಹನಮಂತರಾವ್ ಕುಲಕರ್ಣಿ, ಇಲಕಲ್ಲ ವಕೀಲ ಸಂಘದ ಅಧ್ಯಕ್ಷ ಬಿ.ವಿ. ಆವಟಿ, ಕಾರ್ಯಪಾಲ ಅಭಿಯಂತರ ರಾಜಶೇಖರ ಕಡಿವಾಳ, ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಂ. ಉಪ್ಪಾರ ವಿ.ಬಿ. ದಮ್ಮೂರಮಠ, ಉಮಾ ಎಸ್ ಬಳ್ಳೊಳ್ಳಿ, ಎಂ.ಎಸ್. ಸಂಗಮಕರ, ಪಿ.ಬಿ.ಹುಲ್ಯಾಳ, ಮಹಾಂತೇಶ ಬಿಜಕಲ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ