ಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣದ ಆಶೀರ್ವಾದ ಗ್ಲೋಬಲ್ ಶಾಲೆಯಲ್ಲಿ ಮಕ್ಕಳಿಂದ ವಿಜ್ಞಾನ ಮೇಳ- ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ತಯಾರಿಸಿದ ಚಂದ್ರಯಾನ-3, ರಾಮ ಮಂದಿರ, ಮಳೆ ನೀರು ಕೊಯ್ಲು, ಹವಾಮಾನ ವೈಪರಿತ್ಯ, ಹೃದಯ ಹಾಗೂ ಹೃದಯಕ್ಕೆ ಸಂಬಂಧಿಸಿದ ರೋಗಗಳು, ವಾಯು ಮಾಲಿನ್ಯ, ಪ್ರಕೃತಿಕ ವಿಕೋಪಗಳು, ಹನಿ ನೀರಾವರಿ ಸೇರಿ ಇನ್ನಿತರ ವಸ್ತುಗಳ ಪ್ರದರ್ಶನ ನೋಡಿ ಮಕ್ಕಳ ಕ್ರಿಯಾಶೀಲತೆಯನ್ನು ಪ್ರಶಂಷಿಸಿ, ಪ್ರೋತ್ಸಾಹಿಸಿದರು.
ಸಂಸ್ಥೆ ಅಧ್ಯಕ್ಷ ಡಾ. ವೀರಭದ್ರಗೌಡ ಹೊಸಮನಿ, ಕಾರ್ಯದರ್ಶಿ ಡಾ. ಆಶಾ ಹೊಸಮನಿ, ಉಪಾಧ್ಯಕ್ಷ ಡಾ. ಚನ್ನಬಸನಗೌಡ, ಮುಖ್ಯ ಗುರು ಸೌದಾಗರ್ ಪವಾರ್, ಮಲ್ಲಿಕಾರ್ಜುನಯ್ಯ, ಆಡಳಿತ ಅಧಿಕಾರಿ ಬಸವನಗೌಡ ವಠಾರ ಸೇರಿದಂತೆ ಇತರರಿದ್ದರು.