ಸಹೋದರಿ ಸಂಜೀವಿನಿ ಸೂಪರ್ ಮಾರ್ಕೇಟ್ ಉದ್ಘಾಟನೆ

KannadaprabhaNewsNetwork |  
Published : Aug 17, 2025, 04:02 AM IST
ಅಕ್ಕ, ಅಸ್ಮಿತ್ ಬ್ರ್ಯಾಂಡ್ ಹೆಸರಿನಲ್ಲಿ ಉತ್ಪನ್ನಗಳ ಮಾರಾಟಸಹೋದರಿ ಸಂಜೀವಿನಿ ಸೂಪರ್ ಮಾರ್ಕೇಟ್ಉದ್ಘಾಟನೆ | Kannada Prabha

ಸಾರಾಂಶ

ಬಾಗಲಕೋಟೆ ನವನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರಾರಂಭಿಸಲಾದ ಸಹೋದರಿ ಸಂಜೀವಿನಿ ಸೂಪರ್ ಮಾರ್ಕೇಟ್‌ ಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನವನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರಾರಂಭಿಸಲಾದ ಸಹೋದರಿ ಸಂಜೀವಿನಿ ಸೂಪರ್ ಮಾರ್ಕೇಟ್‌ ಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಿದರು.

ಜಿಪಂಎನ್.ಆರ್.ಎಲ್.ಎಂ ಯೋಜನೆಯಡಿ ಸ್ವ-ಸಹಾಯ ಸಂಘಗಳು ಪ್ರಾರಂಭಿಸಲಾದ ಸಹೋದರಿ ಸಂಜೀವಿನಿ ಸೂಪರ್ ಮಾರ್ಕೆಟ್‌ ಗೆ ಚಾಲನೆ ನೀಡಿ ಮಾಡನಾಡಿದ ಅವರು, ಸಮುದಾಯ ಆಧಾರಿತ ಸಂಸ್ಥೆಗಳ ಮೂಲಕ ಲಾಭದಾಯಕ ವೇತನ ಮತ್ತು ಸ್ವ-ಉದ್ಯೋಗ ಅವಕಾಶಗಳನ್ನು ಒದಗಿಸುವ ಹಾಗೂ ಜೀವನೋಪಾಯಗಳನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಬಡತನವನ್ನು ಹೋಗಲಾಡಿಸಲು ಡೇ-ಎನ್.ಆರ್.ಎಲ್.ಎಂ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯ ಸದುಪಯೋಗವನ್ನು ಸ್ವ-ಸಹಾಯ ಸಂಘಗಳು ಮುಂದೆ ಬರಬೇಕು ಎಂದು ಹೇಳಿದರು.

ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಎನ್.ಆರ್.ಎಲ್. ಎಂ ಯೋಜನೆಯಡಿ ಸ್ವ-ಸಹಾಯ ಸಂಘಗಳ ಸದಸ್ಯರು ಸಮುದಾಯ ಬಂಡವಾಳ ನಿಧಿ ಹಾಗೂ ಬ್ಯಾಂಕ ಲಿಂಕೇಜ್ ಮೂಲಕ ಸಾಲ ಸೌಲಭ್ಯ ಹಾಗೂ ಸ್ವ-ಉದ್ಯೋಗಕೌಶಲ್ಯತರಬೇತಿ ಪಡೆದುಕೊಂಡು ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.ಸದಸ್ಯರುತಯಾರಿಸುತ್ತಿರುವ ಉತ್ಪನ್ನಗಳಿಗೆ ಅಕ್ಕ, ಅಸ್ಮಿತೆ ಹೆಸರಿನ ಬ್ರ್ಯಾಂಡ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಲುಒಂದು ವೇದಿಕೆ ಕಲ್ಪಿಸಿ ಕೊಡುವಉದ್ದೇಶದಿಂದ ಮತ್ತು ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆಕಲ್ಪಿಸಲು ಸಹೋದರಿ ಸಂಜಿವೀನಿ ಸೂಪರ್ ಮಾರ್ಕೆಟ್‌ ಲ್ಲಿ ಕಲ್ಪಿಸಲಾಗುತ್ತಿದೆ ಎಂದರು.

ಸೂಪರ್ ಮಾರ್ಕೆಟ್‌ ನ್ನು ಗ್ರಾಮ ಪಂಚಾಯಿತಿ ಒಕ್ಕೂಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಆರ್.ಎಲ್.ಎಂ ಸ್ವ-ಸಹಾಯ ಗುಂಪುಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಇದೇ ರೀತಿ ಜಿಲ್ಲೆಯ ಜಮಖಂಡಿ ನಗರ, ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಮತ್ತು ಬೀಳಗಿ ತಾಲೂಕಿನ ಬಾಡಗಿ ಪಟ್ಟಣದಲ್ಲಿ ಸಂಜೀವಿನಿ ಮಾರ್ಟ್‌, ಕಿಯೋಸ್ಕ್‌ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ . ಮೇಟಿ, ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಸ್.ಎನ್.ರಾಂಪೂರ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿಪಂ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಸಹಾಯಕಯೋಜನಾಧಿಕಾರಿ ಭೀಮಪ್ಪ ತಳವಾರ, ತಾಲೂಕು ಪಂಚಾಯಿತಿ ಇಒ ಸುಭಾಷ ಸಂಪಗಾವಿ ಇತರರು ಇದ್ದರು.

ಪ್ರಾರಂಭದಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು ಸಚಿವರಿಗೆ, ಶಾಸಕರಿಗೆಆರತಿ ಮಾಡುವ ಮೂಲಕ ಸೂಪರ್ ಮಾಕರ್ೆಟಗೆ ಸ್ವಾಗತಕೋರಿದರು.ನಂತರ ಮಾರ್ಕೆಟ್‌ ನಲ್ಲಿ ಇಡಲಾದ ವಿವಿಧ ಉತ್ಪನ್ನಗಳನ್ನು ವೀಕ್ಷಣೆ ಮಾಡಲಾಯಿತು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌