ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ 3ನೇ ಶಾಖೆ ಉದ್ಘಾಟನೆ

KannadaprabhaNewsNetwork |  
Published : Oct 05, 2024, 01:33 AM IST
ಮೂಡಲಗಿ: ತಾಲೂಕಿನ ಯಾದವಾಡ ಪಟ್ಟಣದಲ್ಲಿ ಕಲ್ಲೋಳಿ ಮಹಾಲಕ್ಷ್ಮೀ ಶಾಖೆ ಉದ್ಘಾಟಿಸುತ್ತಿರುವ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ. | Kannada Prabha

ಸಾರಾಂಶ

40 ವರ್ಷಗಳಿಂದ ಸಹಕಾರ, ಸಾಮಾಜಿಕ, ರಾಜಕೀಯ ಚಟುವಟಿಕೆಗಳ ಮೂಲಕ ಈ ಭಾಗದ ಜನರ ಸೇವೆ ಮಾಡುತ್ತ ಬಂದಿದ್ದೇನೆ. ಮುಂದುವರಿದ ಭಾಗವಾಗಿ ಸೇವೆಯನ್ನು ಇನ್ನಷ್ಟು ನಿಕಟಗೊಳಿಸುವ ಹಂಬಲದೊಂದಿಗೆ ಯಾದವಾಡ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ 3ನೇ ಶಾಖೆ ಪ್ರಾರಂಭಿಸುತ್ತಿದ್ದೇವೆ ಎಂದು ರಾಜ್ಯಸಭಾ ಸಂಸದ ಹಾಗೂ ಸಂಸ್ಥಾಪಕ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

40 ವರ್ಷಗಳಿಂದ ಸಹಕಾರ, ಸಾಮಾಜಿಕ, ರಾಜಕೀಯ ಚಟುವಟಿಕೆಗಳ ಮೂಲಕ ಈ ಭಾಗದ ಜನರ ಸೇವೆ ಮಾಡುತ್ತ ಬಂದಿದ್ದೇನೆ. ಮುಂದುವರಿದ ಭಾಗವಾಗಿ ಸೇವೆಯನ್ನು ಇನ್ನಷ್ಟು ನಿಕಟಗೊಳಿಸುವ ಹಂಬಲದೊಂದಿಗೆ ಯಾದವಾಡ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ 3ನೇ ಶಾಖೆ ಪ್ರಾರಂಭಿಸುತ್ತಿದ್ದೇವೆ ಎಂದು ರಾಜ್ಯಸಭಾ ಸಂಸದ ಹಾಗೂ ಸಂಸ್ಥಾಪಕ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.ಶುಕ್ರವಾರ ತಾಲೂಕಿನ ಯಾದವಾಡ ಗ್ರಾಮದ ಬಸವೇಶ್ವರ ಸರ್ಕಲ್ ಹತ್ತಿರ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ನೂತನ ಶಾಖೆಗೆ ಚಾಲನೆ ನೀಡಿ ಮಾತನಾಡಿದ ಅವರು, ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ, ಮಹಿಳೆಯರಿಗೆ ಸ್ವ ಸಹಾಯ ಗುಂಪುಗಳ ಮೂಲಕ ಸಾಲ ನೀಡಿ ಆರ್ಥಿಕವಾಗಿ ಸದೃಢರಾಗಿಸುವ ಉದ್ದೇಶವಿದೆ. ಜನರಿಗೆ ಠೇವಣಿ ಸೌಲಭ್ಯ ಇದ್ದು, ಇದರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಸಾನ್ನಿಧ್ಯ ವಹಿಸಿದ್ದ ಭಾಗೋಜಿಕೊಪ್ಪದ ಡಾ,ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಪ್ರತಿಯೊಂದು ಗ್ರಾಮಗಳಲ್ಲಿ ಸದೃಢ ಸೌಹಾರ್ದ ಸಹಕಾರಿ ಸಂಘಗಳು ಇದ್ದರೆ ಗ್ರಾಹಕರಿಗೆ, ರೈತರಿಗೆ, ಸಣ್ಣ ವ್ಯಾಪಾರಸ್ಥರಿಗೆ ಅನೂಕೂಲವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಹಲವು ಪೂಜ್ಯರನ್ನು ಸಂಸದ ಈರಣ್ಣ ಕಡಾಡಿ ಸನ್ಮಾನಿಸಿದರು. ಸಹಕಾರಿ ಉಪಾಧ್ಯಕ್ಷ ಶ್ರೀಶೈಲ ತುಪ್ಪದ, ಶ್ರೀಶೈಲ ಢವಳೇಶ್ವರ, ರಾಜಶೇಖರ ಕಲ್ಯಾಣಿ, ಆನಂದ ರೂಗಿ, ಬಸವರಾಜ ಹಿಡಕಲ್, ಸುರೇಶ ಒಣಕಿ, ಪ್ರಭು ಹಿರೇಮಠ, ಶ್ರೀಶೈಲ ಪೂಜೇರಿ, ತಮ್ಮಣ್ಣ ದೇವರ, ಸುಭಾಸ ಒಂಟಗೂಡಿ, ಈರಪ್ಪ ಧೇಯನ್ನವರ, ಬಸವರಾಜ ಕತ್ತಿ, ಹನುಮಂತ ಕಲಕುಟ್ರಿ, ಪರಪ್ಪ ಗಿರೆಣ್ಣವರ ಸೇರಿದಂತೆ ಸಹಕಾರಿ ಆಡಳಿತ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು ಹಾಗೂ ಸಹಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ