ದಾಸೋಹ ಕೇಂದ್ರ ಉದ್ಘಾಟನೆ: ಸಿದ್ದೇಶ್ವರ ಶ್ರೀಗೆ ಆಹ್ವಾನ

KannadaprabhaNewsNetwork |  
Published : Jun 20, 2025, 12:34 AM IST
..೧೯ ಜೆಎಲ್ಆರ್ ೦೧ ಎರಡನೇ ವರ್ಷದ ಸಾಯಿಬಾಬಾ ಗುರುಪೂರ್ಣಿಮೆ ಅಂಗವಾಗಿ ಶ್ರೀ ಕರಿ ವೃಷಭ ದೇಶೀಕೇಂದ್ರ ಶಿವಯೋಗಿಶ್ವರ  ನೊಣವಿನಕೆರೆ ಶ್ರೀಗಳನ್ನು ಸೊಕ್ಕೆ ಗ್ರಾಮಸ್ಥರಿಂದ ಆಹ್ವಾನಿಸಲಾಯಿತು. | Kannada Prabha

ಸಾರಾಂಶ

ಕಾರ್ಯಕ್ರಮಕ್ಕೆ ಆಗಮಿಸುವಂತೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿ ವೃಷಭ ದೇಶೀಕೇಂದ್ರ ಶಿವಯೋಗಿಶ್ವರ ನೊಣವಿನಕೆರೆ ಶ್ರೀ ಸ್ವಾಮೀಜಿಯನ್ನು ಸೊಕ್ಕೆ ಗ್ರಾಮದ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಊರಿನ ಗ್ರಾಮಸ್ಥರು ಮನವಿ ಮಾಡಿದರು.

ಸೊಕ್ಕೆ ಗ್ರಾಮದಲ್ಲಿ ಜು.10ರಂದು ಕಾರ್ಯಕ್ರಮ । ಸೊಕ್ಕೆ ಗ್ರಾಮಸ್ಥರಿಂದ ಆಮಂತ್ರಣ

ಕನ್ನಡಪ್ರಭವಾರ್ತೆ ಜಗಳೂರು

ತಾಲೂಕಿನ ಸೊಕ್ಕೆ ಗ್ರಾಮದ ಜು.10ರಂದು ಗುರುವಾರ ಶ್ರೀ ಶಿರಡಿ ಸಾಯಿಬಾಬಾರ ಎರಡನೇ ವರ್ಷದ ಗುರುಪೂರ್ಣಿಮೆ ಹಾಗೂ ದಿವಂಗತ ಜೆಎಂ ಮದ್ದಾನಯ್ಯ, ಮಾಜಿ ಛೆರ್ಮನ್ ಮತ್ತು ದಿ, ಶ್ರೀಮತಿ ಕೊಟ್ರು ಬಸಮ್ಮನವರ ಸ್ಮಣಾರ್ಥವಾಗಿ ನಿರ್ಮಿಸಿರುವ ಶ್ರೀ ಶಿರಡಿ ಸಾಯಿಬಾಬಾ ದಾಸೋಹ ಮಂದಿರದ ಉದ್ಘಾಟನೆ, ಇತರ ಸಮಾರಂಭದ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿ ವೃಷಭ ದೇಶೀಕೇಂದ್ರ ಶಿವಯೋಗಿಶ್ವರ ನೊಣವಿನಕೆರೆ ಶ್ರೀ ಸ್ವಾಮೀಜಿಯನ್ನು ಸೊಕ್ಕೆ ಗ್ರಾಮದ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಊರಿನ ಗ್ರಾಮಸ್ಥರು ಮನವಿ ಮಾಡಿದರು.

ಸೊಕ್ಕೆ ಗ್ರಾಮದ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಸರೋಜಮ್ಮ ಮಲ್ಲಪ್ಪ ಮಾತನಾಡಿ, ಜು.10 ರಂದು ಗುರುವಾರ ಸೊಕ್ಕೆ ಗ್ರಾಮದಲ್ಲಿ ಶ್ರೀ ಶಿರಡಿ ಸಾಯಿಬಾಬಾ ದಾಸೋಹ ಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವಂತೆ ನೊಣವಿನಕೆರೆ ಶ್ರೀ ಗಳನ್ನು ಆಹ್ವಾನಿಸಲಾಯಿತು. ಸೊಕ್ಕೆಯಲ್ಲಿ ಶ್ರೀ ಸಾಯಿಬಾಬಾರವರ ಪ್ರತಿಮೆಯನ್ನು ನೊಣವಿನಕೆರೆ ಮಠದ ಶ್ರೀ ಲಕ್ಷ್ಮಿ ಎಂಬ ಆನೆಯ ಮೇಲೆ ಅಂಬಾರಿಯನಿಟ್ಟು ಮೆರವಣಿಗೆ ಮತ್ತು ಅಲಂಕೃತ ಬೆಳ್ಳಿ ರಥದೊಂದಿಗೆ ನೊಣವಿನಕೆರೆ ಶ್ರೀಗಳ ಮೆರವಣಿಗೆ ನಂತರ ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾಡು ಸಿದ್ದೇಶ್ವರ ಮಠದ ಶ್ರೀ ಕರಿ ವೃಷಭ ದೇಶೀಕೇಂದ್ರ ಶಿವಯೋಗಿಶ್ವರ ನೊಣವಿನಕೆರೆ ಶ್ರೀಗಳು ಅಭಿನಂದಿಸಿ ಮನವಿ ಸ್ವೀಕರಿಸಿ ಮಾತನಾಡಿ ಪ್ರೊ, ತಿಪ್ಪೇಸ್ವಾಮಿಯವರು ಸೇರಿದಂತೆ ಕುಟುಂಬದವರೂ ಸೇರಿ ಉತ್ತಮವಾದ ಸೇವೆಯನ್ನು ಮಾಡುತ್ತಿದ್ದಾರೆ. ಕೆಲವೊಂದು ಜಿಲ್ಲೆಗಳಲ್ಲಿರುವ ಸಾಯಿಬಾಬಾ ಮಂದಿರಗಳು. ತಮ್ಮ ಊರಿನಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ ನಿರ್ಮಾಣ ಮಾಡಿರುವುದು ಸುತ್ತು ಮುತ್ತಲ ಹಳ್ಳಿಯ ಜನರಿಗೆ ಒಳಿತಾಗಿದೆ. ಮುಂದಿನ ದಿನಗಳಲ್ಲಿ ಇವರು ಉತ್ತಮವಾದ ಸೇವೆಗಳು ಮುಂದುವರೆಯಲಿ ಎಂದರು.

ಸೊಕ್ಕೆ ಗ್ರಾಮದ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಸರೋಜಮ್ಮ ಮಲ್ಲಪ್ಪ, ಉಪಾಧ್ಯಕ್ಷ ಚೌಡಮ್ಮ , ತಿರಮಲೇಶ್, ಪಂಚಾಕ್ಷರಿಸ್ವಾಮಿ, ಬಸವರಾಜ್ ಪಾಟೀಲ್ ಹಾಲಸ್ವಾಮಿ, ಗಂಗಾದರಪ್ಪ, ವೀರಣ್ಣ, ಗ್ರಾಪಂ ಸದಸ್ಯರು, ಗ್ರಾಮ ಮುಖಂಡರು ಇದ್ದರು.

PREV

Recommended Stories

ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ
ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ