ಕನ್ನಡಪ್ರಭ ವಾರ್ತೆ ಮೂಲ್ಕಿ
ಎಚ್ ಭಾಸ್ಕರ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಕಟ್ಟಡದ ಒಂದನೇ ಮಹಡಿಯ ಉದ್ಘಾಟನೆಯನ್ನು ಸ್ಟುಡೆಂಟ್ ವೆಲ್ಫೇರ್ ಎಬಿಎಸ್‌ಎಂಐಡಿಎಸ್ ನಿಟ್ಟೆಯ ಅಸೋಸಿಯೇಟೆಡ್ ಡೀನ್ ಡಾ. ಅಮರಶ್ರೀ ಅಮರನಾಥ್ ಶೆಟ್ಟಿ ನೆರವೇರಿಸಿದರು.ಕಟ್ಟಡದ ನೂತನ ವೇದಿಕೆಯ ನಾಮಫಲಕ ಕಮಲ ಮುದ್ದು ಸಾಲ್ಯಾನ್ ಕಲಾವೇದಿಕೆಯನ್ನು ಉದ್ಯಮಿ ಶಶಿಂದ್ರ ಎಂ ಸಾಲಿಯಾನ್ ಅನಾವರಣಗೊಳಿಸಿದರು, ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ನೂತನ ವೇದಿಕೆ ಉದ್ಘಾಟಿಸಿದರು.
ನೆಲಮಹಡಿಯ ಉದ್ಘಾಟನೆಯನ್ನು ಪಾವಂಜೆಯ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಸೂರ್ಯ ಕುಮಾರ್ ನೆರವೇರಿಸಿದರು. ಕಟ್ಟಡ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಿದ ಮಹಾಪೋಷಕರನ್ನು, ದಾನಿಗಳಾದ , ಎಚ್ ಶಕುಂತಲಾ ಭಟ್, ಮೀರಾಬಾಯಿ ಕೆ, ವೀಣಾ ಡಿ. ಕಾಮತ್, ರೋಹಿಣಿ ಶೆಟ್ಟಿ, ರಾಜೇಶ್ವರಿ ಸೂರ್ಯ ಕುಮಾರ್, ರೇಣುಕಾ, ತಾರಾವತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಹಳೆಯಂಗಡಿಯ ಪಿಸಿಎ ಬ್ಯಾಂಕ್ ಕಾರ್ಯ ನಿರ್ವಹಣಾಧಿಕಾರಿ ಹಿಮಾಕರ್ ಶುಭ ಹಾರೈಸಿದರು. ಮಂಗಳೂರು ನೆಹರು ಯುವ ಕೇಂದ್ರದ ಆಡಳಿತ ಅಧಿಕಾರಿ ಜಗದೀಶ್, ಸ್ಟ್ಯಾನಿ ಡಿ.ಕೋಸ್ತ, ನಾಗೇಶ್ ಟಿ.ಜಿ., ಮೋಹನ್ ಬಂಗೇರ, ರಶ್ವಿತಾ ಉಪಸ್ಥಿತರಿದ್ದರು.
ವಿದುಷಿ ಧನ್ಯಶ್ರೀ ಭಟ್ ಇವರ ಕಲಾರಾಧನ ಭರತನಾಟ್ಯ ತಂಡದ ವತಿಯಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.ಮಹಿಳಾ ಮಂಡಲದ ಅಧ್ಯಕ್ಷೆ ರೇಷ್ಮಾ ಅಶ್ರಫ್ ಸ್ವಾಗತಿಸಿದರು.
ಮಹಿಳಾ ಮಂಡಲದ ಕಾರ್ಯದರ್ಶಿ ಪ್ರೇಮಲತಾ ಯೋಗಿಶ್ ವಂದಿಸಿದರು.ಯತೀಶ್ ಕುಡುಪು ಕಾರ್ಯಕ್ರಮ ನಿರೂಪಿಸಿದರು.