ಸಂತ ಸೆಬಾಸ್ಟಿಯನ್ ಚರ್ಚ್ ಕಡೆಗೆ ತೆರಳುವ ರಸ್ತೆ ಲೋಕಾರ್ಪಣೆ

KannadaprabhaNewsNetwork |  
Published : Oct 12, 2026, 02:45 AM IST
ರಸ್ತೆ ಲೋಕಾರ್ಪಣೆ ಸಂದರ್ಭ | Kannada Prabha

ಸಾರಾಂಶ

ಕುಶಾಲನಗರ ಮೈಸೂರು ರಸ್ತೆಯಿಂದ ಸಂತ ಸೆಬಾಸ್ಟಿಯನ್ ಚರ್ಚ್ ಕಡೆಗೆ ತೆರಳುವ ರಸ್ತೆಯನ್ನು ಮಡಿಕೇರಿ ಶಾಸಕ ಡಾ ಮಂತರ್ ಗೌಡ ಲೋಕಾರ್ಪಣೆ ಗೊಳಿಸಿದರು.

ಕುಶಾಲನಗರ : ಕುಶಾಲನಗರ ಮೈಸೂರು ರಸ್ತೆಯಿಂದ ಸಂತ ಸೆಬಾಸ್ಟಿಯನ್ ಚರ್ಚ್ ಕಡೆಗೆ ತೆರಳುವ ರಸ್ತೆಯನ್ನು ಮಡಿಕೇರಿ ಶಾಸಕ ಡಾ ಮಂತರ್ ಗೌಡ ಲೋಕಾರ್ಪಣೆ ಗೊಳಿಸಿದರು.

ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆ ಪಟ್ಟಣದ ಬಡಾವಣೆಗಳಿಗೆ ಸಂಪರ್ಕ ರಸ್ತೆಯಾಗಿದೆ ಎಂದು ಶಾಸಕರು ತಿಳಿಸಿದರು.

ಈ ಸಂದರ್ಭ ಸಂತ ಸೆಬಾಸ್ಟಿಯನ್ ದೇವಾಲಯದಲ್ಲಿ ಸರಳ ಕಾರ್ಯಕ್ರಮದಲ್ಲಿ ಧರ್ಮ ಗುರುಗಳಾದ ಫಾ. ಜ್ಞಾನ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು ಪಟ್ಟಣದ ವಿವಿಧ ಬಡಾವಣೆಗಳ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಕಾಮಗಾರಿ ನಡೆದಿದೆ. ಪಕ್ಷ ಭೇದ ಮರೆತು ಪಟ್ಟಣದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು.

ಈ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ಕಾಂಗ್ರೆಸ್ ನಗರ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಕೆಪಿಸಿಸಿ ಸದಸ್ಯ ಮಂಜುನಾಥ ಗುಂಡುರಾವ್, ಚರ್ಚ್ ಸಲಹಾ ಸಮಿತಿ ಪ್ರಮುಖರಾದ, ಹ್ಯೂಬರ್ಟ್, ಫಿಲಿಪ್ ವಾಸ್, ಎನ್ ಡಿ ಜೋಸೆಫ್, ಕೃಜ್ವೆಲ್ ಕೋಟ್ಸ್ ಜೇಮ್ಸ್ ಪಿಂಟೋ, ಸಲಿನಾ ಡಿ ಕುನ್ನ, ರೋಷನ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಿಲಾಗ್ರಿಸ್ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ
ಸಿಎಂ ಮಂಗಳೂರು, ಉಡುಪಿ ಪ್ರವಾಸ ರದ್ದು