ಮಿನರ್ವ ಸ್ಟೇಷನ್ ಆವರಣದಲ್ಲಿ ವಿವಿಧ ಸವಲತ್ತು ಉದ್ಘಾಟನೆ

KannadaprabhaNewsNetwork |  
Published : Sep 12, 2026, 01:30 AM IST
11ಎಚ್.ಎಲ್.ಐ1.:ಹೊನ್ನಾಳಿ ಪಟ್ಟಣದ ಮಿನರ್ವ ಸರ್ವಿಸ್ ಸ್ಟೇಷನ್ ಆವರಣದಲ್ಲಿ ನೂತನವಾಗಿ ಸ್ಥಾಪಿತವಾದ ವಿವಿಧ ಸೌಲತ್ತುಗಳ ಉದ್ಘಾಟನಾ ಸಮಾರಂಭ ಜರುಗಿತು. | Kannada Prabha

ಸಾರಾಂಶ

ಪಟ್ಟಣದ ಮಿನರ್ವ ಸರ್ವಿಸ್ ಸ್ಟೇಷನ್‌ನಲ್ಲಿ ಪೆಟ್ರೊಲ್, ಡೀಸೆಲ್ ಸೇರಿದಂತೆ ಇ.ವಿ. ಫಾಸ್ಟ್ ಚಾರ್ಜಿಂಗ್, ನೈಟ್ರೋಜನ್ ಏರ್, ಹೊಗೆ ತಪಾಸಣೆ ವ್ಯವಸ್ಥೆಗಳು ಲಭ್ಯವಿದ್ದು, ಇದರೊಂದಿಗೆ ಪ್ರಯಾಣದ ರೀಪ್ರೆಶ್‌ಗಾಗಿ ಗ್ರಾಹಕರಿಗೆ ಕಾಫಿ ರೆಡಿ, ದಿನದ 24 ಗಂಟೆ ಕೆಲಸ ಮಾಡಿ ದಣಿದ ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ನೂತನ ವ್ಯವಸ್ಥೆ ಮಾಡಿದ್ದು, ಈ ಎಲ್ಲಾ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಿನರ್ವ ಸರ್ವಿಸ್ ಸ್ಟೇಷನ್ ಮಾಲೀಕ ಎಂ.ಸುರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಿನರ್ವ ಸರ್ವಿಸ್ ಸ್ಟೇಷನ್ ಆವರಣದಲ್ಲಿ ನೂತನವಾಗಿ ಸ್ಥಾಪಿತವಾದ ವಿವಿಧ ಸವಲತ್ತುಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಾಹನಗಳ ಸಂಚಾರಿಗಳು ನಮ್ಮ ಬಂಕ್‌ಗೆ ಬಂದರೆ ಎಲ್ಲಾ ಸವಲತ್ತುಗಳನ್ನು ಪಡೆದು ಮುಂದೆ ಹೋಗಬಹುದಾಗಿದೆ. ದೊಡ್ಡ ನಗರ ಪ್ರದೇಶಗಳಲ್ಲಿ ದೊರೆಯುವ ಕಾಫಿ ರೆಡಿ ವ್ಯವಸ್ಥೆಯನ್ನು ಸ್ಥಾಪಿಸಿದ್ದು,, ಟೀ, ಕಾಫಿ, ವಿವಿಧ ಪಾನೀಯಗಳು, ಡ್ರೈ ಪ್ರೂಟ್ಸ್ , ಐಸ್‌ಕ್ರೀಂ, ಬಿಸ್ಕೇಟ್‌ಗಳು, ಸ್ಯಾಂಡ್‌ವಿಚ್ ಹಾಗೂ ಇತರ ಆಹಾರ ಪದಾರ್ಥಗಳು ಲಭ್ಯವಿದ್ದು, ಇವುಗಳ ವಿನಿಯೋಗ ಮಾಡಿಕೊಳ್ಳಲು ಅವರು ಮನವಿ ಮಾಡಿದರು.

ನಮ್ಮ ಇಂಧನ ವಿತರಿಸುವ ಸಂಸ್ಥೆ ಕಳೆದ 52 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಅರಿತು ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.

ಎಸ್‌ಬಿಐ ವ್ಯವಸ್ಥಾಪಕ ರಾಮಕೃಷ್ಣ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಅಶೋಕ್, ಮಿನರ್ವ ಸರ್ವಿಸ್ ಸ್ಟೇಷನ್ ಪಾಲುದಾರೆ ಎಂ.ಬಿಂದು, ಕಾಪೀ ರೆಡಿ ಸಿಇಒ ಆಂಟೋನಿಕುಮಾರ್, ಕೋ ಫೌಂಡರ್ ಕಿಶೋರ್‌ಕುಮಾರ್ ಮಾತನಾಡಿದರು.

ಡಾ.ರೇಣುಕ ಸ್ವಾಗತಿಸಿ, ಪತ್ರಕರ್ತ ಯೋಗೀಶ್‌ಕೋರಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಸಾರಿಗೆ ಬಸ್‌ ಸಮಯ ಬದಲಿಸಲು ಆಗ್ರಹಿಸಿ ಧರಣಿ
ಹುತಾತ್ಮ ಅರಣ್ಯ ಅಧಿಕಾರಿಗಳ ತ್ಯಾಗ ಅಮೋಘ