ಬಸವಾದಿ ಶರಣರ ಆಚರಣೆಗೆ ಇಂಚಗೇರಿ ಕೊಡುಗೆ ಅಪಾರ: ಗುರುಸಿದ್ಧೇಶ್ವರ ಶ್ರೀ

KannadaprabhaNewsNetwork |  
Published : Feb 22, 2025, 12:47 AM IST
ರಬಕವಿಯಲ್ಲಿ ನಡೆದ ಕಾಶವ್ವತಾಯಿ ಹೂಗಾರರ ಸಪ್ತಾಹ ಕಾರ್ಯಕ್ರಮದಲ್ಲಿ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

೧೨ನೇ ಶತಮಾನದ ಬಸವಾದಿ ಶರಣರ ಆಚರಣೆಗಳು ಇಂದಿಗೂ ಜೀವಂತವಾಗಿ ಮುನ್ನಡೆಯಲು ಇಂಚಗೇರಿ ಸಂಪ್ರದಾಯದ ಅದರಲ್ಲೂ ಮಾಧವಾನಂದರ ಕೊಡುಗೆ ಅಮೂಲ್ಯವಾದುದು ಎಂದು ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

೧೨ನೇ ಶತಮಾನದ ಬಸವಾದಿ ಶರಣರ ಆಚರಣೆಗಳು ಇಂದಿಗೂ ಜೀವಂತವಾಗಿ ಮುನ್ನಡೆಯಲು ಇಂಚಗೇರಿ ಸಂಪ್ರದಾಯದ ಅದರಲ್ಲೂ ಮಾಧವಾನಂದರ ಕೊಡುಗೆ ಅಮೂಲ್ಯವಾದುದು ಎಂದು ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.

ರಬಕವಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಇಂಚಗೇರಿ ಸಂಪ್ರದಾಯದ ರಾಚೋಟೇಶ್ವರ ಮಹಾರಾಜರ ಹಾಗೂ ಕಾಶವ್ವತಾಯಿ ಹೂಗಾರರ ೯೮ನೇ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಆಧ್ಯಾತ್ಮಿಕ, ಸಮಾಜದ ಪ್ರಗತಿಗೆ ಇಂಚಗೇರಿ ಸಂಪ್ರದಾಯ ಉತ್ಕೃಷ್ಟ. ಕೃಷ್ಣಾ ತೀರದಲ್ಲಿ ಸತ್ಸಂಗ ಹಾಗೂ ಶಿವಾನುಭವದ ಸಿರಿವಂತಿಕೆ ಮೆಚ್ಚುವಂಥದ್ದು ಎಂದು ಹೇಳಿದರು.

ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿ, ೧೩ನೇ ಶತಮಾನದಿಂದಲೇ ಇಂಚಗೇರಿ ಸಂಪ್ರದಾಯದ ಮೂಲಕ ಸರ್ವ-ಧರ್ಮ ಸಮಾನತೆಯೊಂದಿಗೆ ಮಹಿಳೆಗೆ ಪ್ರಾಧಾನ್ಯತೆ ನೀಡುವಲ್ಲಿ ಕಾರಣವಾಗಿದೆ. ಇವೆಲ್ಲದಕ್ಕೂ ಕಾಡಸಿದ್ಧೇಶ್ವರರ ಕೃಪೆ ಅಮೂಲ್ಯವಾಗಿದ್ದು, ಅಂದಿನಿಂದ ೫೦ನೇಯವರಾಗಿ ಮುಪ್ಪಿನ ಕಾಡಸಿದ್ಧೇಶ್ವರರಾಗಿ ಮುನ್ನಡೆಯುತ್ತಿರುವ ಇಂದಿಗೂ ಜೀವಂತವಿದೆ. ಕಟ್ಟಕಡೆಯ ಪಾಪಿಯೂ ಉದ್ಧಾರವಾಗುವ ಉದ್ದೇಶ ಇಂಚಗೇರಿಯದ್ದು, ಆಧ್ಯಾತ್ಮದ ಅರಿವಿಗೆ ದಾಸಬೋಧ ಅಮೂಲ್ಯವಾಗಿದೆ ಎಂದರು. ಎಂ.ಎಸ್. ಬದಾಮಿ ಮಾತನಾಡಿ, ಧರ್ಮ, ಅರ್ಥ, ಕಾಮ, ಮೋಕ್ಷ ಇವೆಲ್ಲವನ್ನು ಗೆದ್ದವನೇ ಜ್ಞಾನಿ ಆತ್ಮದ ವೈಭವ ಅನುಭವಿಸುವವನೇ ಜ್ಞಾನಿ ಇದನ್ನು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಗಳು ಅನುಭವಿಸಿ ಹೋಗಿದ್ದಾರೆಂದರು. ಗುರುವಿನ ಸ್ಮರಣೆಯೊಂದಿಗೆ ಉಪದೇಶ ಪಾಲಿಸುವದು ಅಮೂಲ್ಯ. ಎಲ್ಲ ಶಾಸ್ತç, ಧರ್ಮ ಮೀರಿ ಬೆಳೆಯುವಲ್ಲಿ ಇಂಚಗೇರಿ ಸಂಪ್ರದಾಯ ಮಹತ್ವ ಪಡೆದಿದೆ. ಪ್ರಾಣಕ್ಕೆ ಲಿಂಗ ಕಟ್ಟಿದವರೇ ಇಂಚಗೇರಿ ಸದ್ಭಕ್ತರು. ದೇವರು ನಮ್ಮ ಆತ್ಮದೊಳಗೇ ಇದ್ದಾನೆಂದು ಬದಾಮಿ ತಿಳಿಸಿದರು.

ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ, ಭಸ್ಮೆ ಮಹಾರಾಜರು, ನಿವೃತ್ತ ಡಿಡಿಪಿಯು ಶಶಿಧರ ಪೂಜಾರಿ, ವಿರುಪಾಕ್ಷ ಮಹಾರಾಜರು, ಹಣಮಂತ ಮಹಾರಾಜರು, ಗುರುದೇವ ಹೂಗಾರ, ಬಾಲಚಂದ್ರ ಗುರುವ, ಎಸ್.ಎಂ. ದಾಶಾಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅರವಿಂದ ಮಗದುಮ್ ಮಹಾರಾಜರು ದಾಸಬೋಧ ಪಠಣ ಮಾಡಿದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ