ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪಟ್ಟಣದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳು ೧೮ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದು ಅಪರಾಧ ಎಂದು ಜಾಗೃತಿ ಮೂಡಿಸುತ್ತಿದ್ದರೆ, ಇತ್ತ ಶಾಸಕ ಕೆ.ವೈ.ನಂಜೇಗೌಡ ಅವರು ಜಿಪಂ ಕೆಡಿಪಿ ಸಭೆಯಲ್ಲಿ ಪೋಕ್ಸೋ ಕಾಯ್ಜೆ ಫಲ್ಲಂಘಿಸುವಂತೆ ಅಧಿಕಾರಿಗಳನ್ನು ಪ್ರಚೋದಿಸಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಬಂಧಪಟ್ಟ ಅಧಿಕಾರಿ ವಿರುದ್ದ ಮಾತನಾಡುವಾಗ ಶಾಸಕರು, ನಮ್ಮ ಕ್ಷೇತ್ರ ಮಂದಿಯನ್ನು ಫೋಕ್ಸೋ ಎನ್ನುವ ಹೆಸರಿನಲ್ಲಿ ಜೈಲಿಗೆ ಕಳುಹಿಸಿದ್ದೀಯಾ, ೩ ಅಥವಾ ೬ ತಿಂಗಳು ಹೆಚ್ಚು ಕಡಿಮೆ ಇದ್ದರೆ ಅದಕ್ಕೆ ಮಾನವೀಯತೆ ದೃಷ್ಟಿಯಿಂದ ಬಿಟ್ಟು ಬಿಡಬೇಕು, ಎರಡೂ ಕುಟುಂಬಗಳು ಪರಸ್ಪರ ಒಪ್ಪಿಕೊಂಡು ಮದುವೆ ಮಾಡಿರುತ್ತಾರೆ ಎಂದು ಪೋಕ್ಸೊ ಕಾಯ್ದೆಯನ್ನು ಉಲ್ಲಂಘನೆ ಮಾಡಲು ನೇರವಾಗಿ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದರು.ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ
ಶಾಸಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಸುಮೊಟ ಕೇಸ್‌ನ್ನು ದಾಖಲಿಸಬೇಕು. ಸಂವಿಧಾನದ ಅಡಿಯಲ್ಲಿ ಜವಾಬ್ದಾರಿಯುತ ಸ್ಥಾನವನ್ನು ಪಡೆದಿರುವ ಇವರು ಕಾನೂನನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಲು ಅಧಿಕಾರಿಗಳಿಗೆ ತಿಳಿಸಬೇಕೆ ವಿನಃ, ಕಾನೂನನ್ನು ಉಲ್ಲಂಘನೆ ಮಾಡುವ ರೀತಿಯಲ್ಲಿ ಪ್ರಚೋದನೆ ಮಾಡುವುದು ಸಂವಿಧಾನ ಬಾಹಿರವಾಗಿರುತ್ತದೆಂದರು.ಈ ಸಂದರ್ಭದಲ್ಲಿ ಹುಳದೇನಹಳ್ಳಿ ವೆಂಕಟೇಶ್, ಕಲಾವಿದ ಯಲ್ಲಪ್ಪ, ಹುಣಸನಹಳ್ಳಿ ಸತೀಶ್, ಸೇಟ್‌ಕಾಂಪೌಂಡ್ ಮಾರಿ, ಅರವಿಂದ ಮಾರ, ಮಧು, ಗೌತಮ್, ಗೌತಮ್‌ನಗರ ಕನ್ನಯ್ಯ, ಲೋಕೇಶ್, ಟೈಲರ್ ಕೃಷ್ಣಪ್ಪ ಇದ್ದರು.