ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಈ ಸಂಬಂಧ ಬುಧವಾರ ಇಲ್ಲಿ ಹೇಳಿಕೆ ನೀಡಿರುವ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳನ್ನು ನೀರಾವರಿಗೆ ಒಳಪಡಿಸುವ ಸಂಬಂಧ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಿ 29.90 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ 2,25,515 ಹೆಕ್ಟೇರ್ ಭೂ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ(ಡ್ರಿಪ್) ಸೌಲಭ್ಯ, ಅಲ್ಲದೇ 367 ಕೆರೆಗಳಿಗೆ ಅರ್ಧದಷ್ಟು ನೀರನ್ನು ತುಂಬಿಸಲಾಗುತ್ತಿದೆ. ಡ್ರಿಪ್‌ಗೆ 21.90 ಟಿಎಂಸಿ, ಕೆರೆ ತುಂಬಿಸಲು 6 ಟಿಎಂಸಿ ಹಾಗೂ ವಿವಿ ಸಾಗರ ಜಲಾಶಯಕ್ಕೆ ಎರಡು ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಭದ್ರಾ ಅಚ್ಚು ಕಟ್ಟು ಪ್ರದೇಶಕ್ಕೆ ಚಿತ್ರದುರ್ಗ ಒಳಪಟ್ಟಿದ್ದರೂ ಕಾಡಾ ಸಮಿತಿಯಿಂದ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಹೋರಾಟಗಾರರ ಹೊರಗಿಡಲಾಗಿದೆ.
ಭದ್ರಾ ಅಚ್ಚು ಕಟ್ಟು 1.05 ಲಕ್ಷ ಹೆಕ್ಟೇರುನಷ್ಟಿದ್ದು ಮುಂಗಾರು ಹಂಗಾಮಿಗೆ ಸುಮಾರು 34.62 ಟಿಎಂಸಿಯಷ್ಟು ನೀರು ಬೇಕಾಗುತ್ತದೆ. ಕಾಲುವೆಗೆ ನೀರು ಹಾಯಿಸುವಂತೆ ದಾವಣಗೆರೆ ಪ್ರದೇಶದ ರೈತರು ಕಾಡಾ ಮೇಲೆ ಒತ್ತಡ ತಂದಿದ್ದರಿಂದ ಆ. 18 ರಂದು ಸಚಿವ ಮಧು ಬಂಗಾರಕ್ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ(ಐಸಿಸಿ-Irrigation consultative committee)ಸಭೆಯಲ್ಲಿ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲ ಸಚಿವರು,ಶಾಸಕರು, ರೈತಮುಖಂಡರು ಪಾಲ್ಗೊಂಡಿದ್ದರು.ಸಭೆಯಲ್ಲಿ ಮುಂಗಾರು ಹಂಗಾಮಿಗೆ ಭದ್ರಾ ಜಲಾಶಯದಿಂದ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ 124 ದಿನ ನೀರು ಹಾಯಿಸಲು 32.62 ಟಿಎಂಸಿ ಹಾಗೂ ಭದ್ರಾ ಮೇಲ್ದಂಡೆಗೆ 12.40 ಟಿಎಂಸಿಯಷ್ಟು ನೀರು ಬಿಡುಗಡೆ ಮಾಡುವ ವಿಷಯ ಚರ್ಚೆಯಾಗಿದೆ. ನೀರು ಬಿಡಿ ಎಂದು ಒಂದಿಷ್ಟು ಮಂದಿ, ಬೇಡವೇ ಬೇಡವೆಂದು ಹಲವರು ಪಟ್ಟು ಹಿಡಿದಿದ್ದರಿಂದ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗದೆ ಅಂತಿಮವಾಗಿ ನಿರ್ಣಯದ ಚೆಂಡನ್ನು ಮುಖ್ಯಮಂತ್ರಿ ಅಂಗಳಕ್ಕೆ ಎಸೆಯಲಾಗಿದೆ.
ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಹಾಗೂ ಹಾಲಿ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಗಮನಕ್ಕೆ ಈ ವಿಷಯ ತಂದು ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆ ಸೇರ್ಪಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಭದ್ರಾ ಮೇಲ್ದಂಡೆಯಡಿ ಈಗಾಗಲೇ ವಿವಿ ಸಾಗರಕ್ಕೆ ನೀರು ಹರಿದು ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ಬಳಿ ಡ್ರಿಪ್ ನ ಫೈಲಟ್ ಪ್ರಾಜೆಕ್ಟ್ ಜಾರಿಗೊಳಿಸಿ ರೈತರಿಗೆ ನೀರು ನೀಡಲಾಗಿದೆ. ವಾಸ್ತವಾಂಶ ಹೀಗಿದ್ದರೂ ಕಾಡಾದಿಂದ ಚಿತ್ರದುರ್ಗ ಜಿಲ್ಲೆಯ ಹೊರಗಿಡುವುದು ಸೂಕ್ತವಲ್ಲ.
----------------ಕೋಟ್
--- ಬಿ.ಎ. ಲಿಂಗಾರೆಡ್ಡಿ
ಪೋಟೋ ಕ್ಯಾಪ್ಸನ್
------ಪೋಟೋ ಫೈಲ್ ನೇಮ್-19 ಸಿಟಿಡಿ 1--