ಸೋಲಾರ್ ಅಳವಡಿಕೆಯಿಂದ ಆದಾಯ ಇಮ್ಮಡಿ

KannadaprabhaNewsNetwork |  
Published : Jun 24, 2024, 01:36 AM IST
ಚಿತ್ರದುರ್ಗ ಮೂರನೇ ಪುಟದ ಮಿಡ್ಲ್     | Kannada Prabha

ಸಾರಾಂಶ

ಸಾರ್ವಜನಿಕರು ತಮ್ಮ ಕಟ್ಟಡದ ಮೇಲೆ ಸೋಲಾರ ಸಿಸ್ಟಂನ್ನು ಅಳವಡಿಕೆ ಮಾಡಿಕೊಂಡರೆ ಆದಾಯ ಇಮ್ಮಡಿಯಾಗುತ್ತದೆ. ಇದರಿಂದ ವಿದ್ಯುತ್ ಅನ್ನು ಎಷ್ಟು ಬೇಕೋ ಅಷ್ಟು ಬಳಕೆ ಮಾಡಿಕೊಂಡು ಹೆಚ್ಚುವರಿಯಾಗಿ ಉಳಿದ ವಿದ್ಯುತ್ ಅನ್ನು ಮಾರಾಟ ಮಾಡಬಹುದು ಎಂದು ಬೆಂಗಳೂರಿನ ಆಮ್ರ ರಿನಿವೆಬಲ್ ಕಂಪನಿಯ ನಿರ್ದೆಶಕ ರಘುನಂದನ್ ತಿಳಿಸಿದರು.

- : ರಘುನಂದನ್

- ಹಣದ ಉಳಿತಾಯದ ಹಾಗೂ ರಾಜ್ಯದ ಬೊಕ್ಕಸಕ್ಕೂ ಅನುಕೂಲ

ರೋಟರಿ ಕ್ಲಬ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಮ್ರ ರಿನಿವೆಬಲ್ ಕಂಪನಿ ನಿರ್ದೇಶಕ ರಘುನಂದನ್ಕನಡಪ್ರಭವಾರ್ತೆ ಚಿತ್ರದುರ್ಗಸಾರ್ವಜನಿಕರು ತಮ್ಮ ಕಟ್ಟಡದ ಮೇಲೆ ಸೋಲಾರ ಸಿಸ್ಟಂನ್ನು ಅಳವಡಿಕೆ ಮಾಡಿಕೊಂಡರೆ ಆದಾಯ ಇಮ್ಮಡಿಯಾಗುತ್ತದೆ. ಇದರಿಂದ ವಿದ್ಯುತ್ ಅನ್ನು ಎಷ್ಟು ಬೇಕೋ ಅಷ್ಟು ಬಳಕೆ ಮಾಡಿಕೊಂಡು ಹೆಚ್ಚುವರಿಯಾಗಿ ಉಳಿದ ವಿದ್ಯುತ್ ಅನ್ನು ಮಾರಾಟ ಮಾಡಬಹುದು ಎಂದು ಬೆಂಗಳೂರಿನ ಆಮ್ರ ರಿನಿವೆಬಲ್ ಕಂಪನಿಯ ನಿರ್ದೆಶಕ ರಘುನಂದನ್ ತಿಳಿಸಿದರು.

ಚಿತ್ರದುರ್ಗ ರೋಟರಿ ಬಾಲ ಭವನದಲ್ಲಿ ನಡೆದ ರೋಟರಿ ಕ್ಲಬ್‍ನ ವಾರದ ಸಭೆಯಲ್ಲಿ ಸೋಲಾರ್ ಶಕ್ತಿ ಮತ್ತು ಹಣದ ಉಳಿತಾಯದ ಬಗ್ಗೆ ಮಾತನಾಡಿದ ಅವರು, ಇತ್ತೀಚಿನ ದಿನಮಾನದಲ್ಲಿ ಎಲ್ಲದಕ್ಕೂ ವಿದ್ಯುತ್ ಅವಲಂಬನೆ ಜಾಸ್ತಿಯಾಗಿದ್ದು ಬಳಕೆ ಪ್ರಮಾಣ ಹೆಚ್ಚಾಗಿದೆ. ಮುಂದಿನ ದಿನದಲ್ಲಿ ವಿದ್ಯುತ್ ಕೊರತೆ ಉಂಟಾದಾಗ ನಾವುಗಳು ಅನಿವಾರ್ಯವಾಗಿ ಪರ್ಯಾಯ ಇಂಧನವನ್ನು ಹುಡುಕಿಕೊಳ್ಳಬೇಕಿದೆ. ಈ ಹಿನ್ನಲೆಯಲ್ಲಿ ನಮಗೆ ಉಚಿತವಾಗಿ ಸಿಗುವ ಸೌರ ಶಕ್ತಿಯನ್ನು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದಾಗಿದೆ ಎಂದರು.

ಸೌರ ಶಕ್ತಿ ಬಳಕೆ ವ್ಯಾಪಕವಾಗುತ್ತಿದ್ದು ನಮ್ಮ ಕಡೆ ಅಷ್ಟಾಗಿ ಇನ್ನೂ ಪ್ರಚಾರಕ್ಕೆ ಬಂದಿಲ್ಲ. ಸರ್ಕಾರ ಇದರ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು. ಅದಕ್ಕೆ ತಕ್ಕಂತೆ ಸಮರ್ಪಕ ಬಳಕೆಗೂ ಪ್ರೋತ್ಸಾಹ ನೀಡಿ, ಕಟ್ಟಡಕ್ಕೆ ತಕ್ಕಂತೆ ಸೌರ ಶಕ್ತಿಯನ್ನು ಅಳವಡಿಕೆ ಮಾಡಬೇಕು. ಪ್ರತೀ ಕಟ್ಟಡದಿಂದ ಉಳಿದ ವಿದ್ಯುತ್ ಅನ್ನು ಸರ್ಕಾರವೇ ರಿಯಾಯತಿ ದರದಲ್ಲಿ ಕೊಂಡುಕೊಂಡು ಮಾರಾಟ ಮಾಡಿದರೆ ರಾಜ್ಯದ ಬೊಕ್ಕಸಕ್ಕೂ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.ಸಭೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಕನಕರಾಜು, ಕಾರ್ಯದರ್ಶಿ ವಿಕ್ರಾಂತ್ ಜೈನ್ ಇದ್ದರು.

-----------------23 ಸಿಟಿಡಿ 8

ಚಿತ್ರದುರ್ಗ ರೋಟರಿ ಬಾಲ ಭವನದಲ್ಲಿ ನಡೆದ ರೋಟರಿ ಕ್ಲಬ್‍ನ ವಾರದ ಸಭೆಯಲ್ಲಿ ಬೆಂಗಳೂರಿನ ಆಮ್ರ ರಿನಿವೆಬಲ್ ಕಂಪನಿಯ ನಿರ್ದೆಶಕ ರಘುನಂದನ್ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ