ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಮುಂಭಾಗ ಶ್ರೀರಂಗಪಟ್ಟಣ ದಸರಾ ಅಂಗವಾಗಿ ನಡೆದ ಯೋಗ ದಸರಾ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಎಷ್ಟೇ ಹಣ, ಆಸ್ತಿ, ಹೆಸರು ಸಂಪಾದಿಸಿದರೂ ಆರೋಗ್ಯ ಇಲ್ಲವೆಂದರೆ ಎಲ್ಲವೂ ಶೂನ್ಯ. ಹಾಗಾಗಿ ಆರೋಗ್ಯ ವೃದ್ಧಿಸಿಕೊಳ್ಳಲು ವ್ಯಾಯಾಮ, ಯೋಗದಂತಹ ಚಟುವಟಿಕೆಯನ್ನು ಜೀವನದಲ್ಲಿ ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಯೋಗ ಭಾರತ ದೇಶದಲ್ಲಿ ಹುಟ್ಟಿ ಇಂದು ಪ್ರಪಂಚದಾದ್ಯಂತ ಮಹತ್ವ ಪಸರಿಸಿದೆ. ಯೋಗವು ಒಂದು ದಿನಕ್ಕೆ ಸೀಮೀತವಾಗದೆ. ಪ್ರತಿದಿನ 40 ರಿಂದ 45 ನಿಮಿಷಗಳ ಕಾಲ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಸುಮಾರು 800ಕ್ಕೂಹೆಚ್ಚು ಮಂದಿ ಭಾಗವಹಿಸಿ ಸೂರ್ಯ ನಮಸ್ಕಾರ, ಭುಜಂಗಾಸನ, ವಜ್ರಾಸನ, ತಡಾಸನ, ಅರ್ಧಚಕ್ರಾಸನ, ಉಷ್ಟ್ರಾಸನ, ಧನುರಾಸನ, ಶವಾಸನ, ಪ್ರಣಾಯಾಮ, ಧ್ಯಾನ ಸೇರಿದಂತೆ ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಕೈ ಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ರಂಗಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಎಚ್, ಎಸ್.ಪಿ.ವೈ. ಎಸ್.ಎಸ್ ನ ಜಿಲ್ಲಾ ಸಂಚಾಲಕ ಶಂಕರ್ ನಾರಾಯಣ ಶಾಸ್ತ್ರಿ, ಮಂಡ್ಯ ವಿವೇಕಾನಂದ ಯೋಗ ಕೇಂದ್ರದ ಚಂದ್ರು, ಕೆ. ಶೆಟ್ಟಹಳ್ಳಿ ವಿವೇಕಾನಂದ ಯೋಗ ಕಿಶೋರ ಕೇಂದ್ರದ ಯೋಗ ಗುರು ಅಪ್ಪಾಜಿ ಸೇರಿದಂತೆ ಇತರರು ಇದ್ದರು.