ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ಉತ್ಪನ್ನ ಹೆಚ್ಚಳ: ಪ್ರಹ್ಲಾದ ಜೋಶಿ

KannadaprabhaNewsNetwork |  
Published : Sep 26, 2024, 10:39 AM ISTUpdated : Sep 26, 2024, 10:40 AM IST
ಪೊಟೋ ಪೈಲ್ ನೇಮ್ ೨೪ಎಸ್‌ಜಿವಿ೫  ತಾಲೂಕಾ ಬಣಜಿಗ ಸಮಾವೇಶದಲ್ಲಿ ಭರತ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ಭಾರತೀಯ ಸೈನ್ಯಕ್ಕೆ ಅವಶ್ಯವಿರುವ ಪ್ರತಿಯೊಂದು ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ವ್ಯವಸ್ಥೆ ಇತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೇ. ೨೫ರಷ್ಟು ಆಮದನ್ನು ಕಡಿಮೆ ಮಾಡಿ, ಮೇಕಿನ್ ಇನ್ ಇಂಡಿಯಾ ಮೂಲಕ ಸ್ವದೇಶಿ ವಸ್ತುಗಳನ್ನೇ ಪೂರೈಸಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಶಿಗ್ಗಾಂವಿ: ರಕ್ಷಣಾ ಕ್ಷೇತ್ರದಲ್ಲಿ ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಪಟ್ಟಣದ ಪಾಟೀಲ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಬಣಜಿಗ ಸಮಾಜದ ತಾಲೂಕು ಸಮಾವೇಶ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸೈನ್ಯಕ್ಕೆ ಅವಶ್ಯವಿರುವ ಪ್ರತಿಯೊಂದು ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ವ್ಯವಸ್ಥೆ ಇತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೇ. ೨೫ರಷ್ಟು ಆಮದನ್ನು ಕಡಿಮೆ ಮಾಡಿ, ಮೇಕಿನ್ ಇನ್ ಇಂಡಿಯಾ ಮೂಲಕ ಸ್ವದೇಶಿ ವಸ್ತುಗಳನ್ನೇ ಪೂರೈಸಿಕೊಳ್ಳುತ್ತಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಶೇ. ೫೦ರಷ್ಟು ವಸ್ತುಗಳನ್ನು ಸ್ವದೇಶದಲ್ಲಿಯೇ ತಯಾರಿಸಿಕೊಳ್ಳಲಿದೆ ಎಂದು ಹೇಳಿದರು.

ಆಮದು ಕಡಿಮೆ ಮಾಡಿ, ದೇಶೀಯ ಉತ್ಪಾದನೆ ಹೆಚ್ಚು ಮಾಡುವುದರಿಂದ ದೇಶದ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚುಚ್ಚದೆ. ವ್ಯಾಪಾರವನ್ನೇ ನಂಬಿ ಜೀವನ ಮಾಡುತ್ತಿರುವ ಸಮುದಾಯದವರಿಗೆ ವಿಸ್ತಾರವಾದ ಮಾರುಕಟ್ಟೆ ದೊರಕಿಸಿಕೊಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಹಂತ ಹಂತವಾಗಿ ಸ್ವದೇಶಿ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಇದರಿಂದ ದೇಶದ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ. ತೆಲೆಮಾರುಗಳಿಂದ ನ್ಯಾಯಯುತವಾಗಿ ವ್ಯಾಪಾರ ಮಾಡಿಕೊಂಡು ಬಂದಿರುವ ಸಮುದಾಯಗಳು ದೇಶದ ಆರ್ಥಿಕತೆಯ ಸರಪಳಿಯಲ್ಲಿ ಬಲಿಷ್ಠವಾದ ಕೊಂಡಿ ಎಂದರು.

ಸಂಸದ ಜಗದೀಶ ಶೆಟ್ಟರ್‌ ಮಾತನಾಡಿ, ಸಮಾಜದ ದುರ್ಬಲ ವರ್ಗದವರನ್ನು ಎತ್ತಿಹಿಡಿಯುವ ಕೆಲಸವನ್ನು ಬಣಿಜಿಗ ಸಮಾಜ ಮಾಡುತ್ತಾ ಬಂದಿದೆ ಎಂದರು.

ಸಿದ್ದಾರ್ಥ ಪಾಟೀಲ, ಭರತ ಬೊಮ್ಮಾಯಿ, ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ಬಸಣ್ಣ ಹೆಸರೂರ, ಶಶಿಧರ ಯಲಿಗಾರ, ಲಿಂಗರಾಜ ಆಂಗಡಿ, ಚನ್ನವೀರ ಅಕ್ಕಿ, ಐ.ಪಿ.ಕೆ. ಶೆಟ್ಟರ, ಪೂಜಾ ಹೆಸರೂರ, ಶಿವಪುತ್ರಪ್ಪ ಜವಳಿ, ಶಂಭಣ್ಣ ಜಿಗಳಿಶೆಟ್ಟರ, ಚನ್ನಬಸಪ್ಪ ಅಂಗಡಿ, ಬಸವರಾಜ ನೇರಲಗಿ, ಚನ್ನಪ್ಪ ಗುದ್ಲಿಶೆಟ್ಟರ, ವೀರೇಶ ಸೊಬರದ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ