ಕನ್ನಡಪ್ರಭ ವಾರ್ತೆ, ಬೀರೂರು
4 ಬೀರೂರು 1ಬೀರೂರು ಹೋಬಳಿಯ ರೈತರ ಜೀವನಾಡಿ ಮದಗದಕೆರೆಗೆ ಸುರಿತ್ತಿರುವ ಜಿಟಿ ಮಳೆಯಿಂದಾಗಿ ಕೆರೆಯ ನೀರಿನ ಹರಿವು ಹೆಚ್ಚಳವಾಗುತ್ತಿರುವುದು.
-- ಬಾಕ್ಸ್...-- ಶೃಂಗೇರಿ ಮುಂದುವರಿದ ಸಾಧಾರಣ ಮಳೆಶೃಂಗೇರಿ: ತಾಲೂಕಿನಾದ್ಯಂತ ಶುಕ್ರವಾರವೂ ಮಳೆ ಮುಂದುವರಿದು ಮದ್ಯಾಹ್ನದವರೆಗೂ ಸುರಿದು ಸಂಜೆಯ ವೇಳೆಗೆ ಕೊಂಚ ಬಿಡುವು ನೀಡಿ ಮತ್ತೆ ಸುರಿಯಲಾರಂಭಿಸಿತು.ಶಾಲೆಗಳಿಗೆ ಶುಕ್ರವಾರವೂ ರಜೆ ನೀಡಲಾಗಿತ್ತು. ಗಾಳಿಯ ಆರ್ಭಟ ಕಡಿಮನೆಯಾಗಿತ್ತು. ಆದರೆ ಮಳೆ ಮಾತ್ರ ಮುಂದುವರಿದಿತ್ತು. ತುಂಗಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿದ್ದರೂ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿದ್ದು ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ನರಸಿಂಹ ಪರ್ವತದ ತಪ್ಪಲು ಕಿಗ್ಗಾ ಪ್ರದೇಶದಿಂದ ಹರಿದು ಬರುವ ನಳಿನಿ, ನಂದಿನಿ ನದಿಗಳಲ್ಲಿಯೂ ನೀರು ಅಪಾಯದ ಮಟ್ಟ ಮೀರಿದೆ. ಸಂಜೆವರೆಗೂ ಮಳೆ ಮುಂದುವರಿದಿತ್ತು. ಗಾಳಿ ಮಳೆಯಿಂದ ಯಾವುದೇ ರೀತಿಯ ಅವಗಡ, ಅನಾಹುತಗಳು ಕಂಡುಬಂದಿಲ್ಲ.-- ಬಾಕ್ಸ್---ಮಳೆ: ಅಂಗನವಾಡಿ ಕೇಂದ್ರಗಳಿಗೆ ರಜೆಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ 6 ತಾಲೂಕುಗಳ ಅಂಗನವಾಡಿ ಶಿಶುಪಾಲನ ಕೇಂದ್ರಗಳಿಗೆ ಶನಿವಾರ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ತಾಲೂಕುಗಳ ಅಂಗನವಾಡಿ ಶಿಶುಪಾಲನ ಕೇಂದ್ರಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನುಳಿದಂತೆ ಬಯಲುಸೀಮೆಯ ಮೂರು ತಾಲೂಕುಗಳಲ್ಲಿ ಎಂದಿನಂತೆ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ.ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದ ಬಳಿ 2019ರಲ್ಲಿ ಗುಡ್ಡ ಕುಸಿದು ಆನಾಹುತ ಸಂಭವಿಸಿತ್ತು. ಇದೇ ಸ್ಥಳದಲ್ಲಿ ಗುರುವಾರ ಗುಡ್ಡದ ಮಣ್ಣು ಜರಿದಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಮಲೆನಾಡಿನಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿರುವ ಪರಿಣಾಮ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ತುಂಬಿ ಹರಿಯುತ್ತಿರುವ ಮುಂದಿನ 24 ಗಂಟೆಗಳಲ್ಲಿ ಮೂರು ನದಿಗಳ ಜಲಾಶಯಗಳಲ್ಲಿ ನೀರಿನ ಒಳ ಹರಿವು ಪ್ರಮಾಣ ಹೆಚ್ಚಳವಾಗಲಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ.