ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಕನ್ನಡಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಬುದ್ದಿವಂತರು, ವಿಚಾರವಂತರು ತಮ್ಮ ಸಮಯವನ್ನು ಕಾವ್ಯ, ಶಾಸ್ತ್ರಗಳನ್ನು ಓದಿಕೊಂಡು ಇನ್ನೊಬ್ಬರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ಮೂಲಕ ಕಳೆಯುತ್ತಾರೆ ಎಂದರು.
ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿಕಾವ್ಯಕ್ಕೆ ವ್ಯಕ್ತಿಯ ಮನಸ್ಸನ್ನು ಸುಸಂಸ್ಕೃತಗೊಳಿಸುವ ಶಕ್ತಿಯಿದೆ. ಅದರಲ್ಲಿಯೂ ತಾಯಿಭಾಷೆಯ ಮೂಲಕ ಸಾಹಿತ್ಯವನ್ನು ಕಲಿತಲ್ಲಿ ಪ್ರಜ್ಞೆ ಮತ್ತಷ್ಟು ವಿಸ್ತಾರಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಾಸಕ್ತಿಯನ್ನು ವಿದ್ಯಾರ್ಥಿ ಯುವಜನರು ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಓದುವ, ಅಧ್ಯಯನ ಮಾಡುವ ಆ ಮೂಲಕ ಜ್ಞಾನಪರಿಧಿಯನ್ನು ಹಿಗ್ಗಿಸಿಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಸಲಹೆ ಮಾಡಿದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಭಾಷೆ ಮತ್ತು ಸಾಹಿತ್ಯ ಮುಂದಿನ ಪೀಳಿಗೆಗೂ ತಲುಪಬೇಕು. ಪ್ರತಿಯೊಬ್ಬರೂ ಕನ್ನಡಾಭಿಮಾನ ಬೆಳಸಿಕೊಂಡು, ಇತರರಿಗೂ ಕನ್ನಡ ಕಲಿಸಿದಲ್ಲಿ ಕನ್ನಡ ಮತ್ತಷ್ಟು ಶ್ರೀಮಂತವಾಗುತ್ತದೆಕವಿಗಳು ಶ್ರೀಮಂತರಾಗುತ್ತಾರೆ. ಪ್ರತಿ ವಿದ್ಯಾರ್ಥಿಯೂ ಸರಸ್ವತಿ ವುಲಿಸಿಕೊಂಡಲ್ಲಿ ಲಕ್ಷ್ಮಿ ತಾನಾಗೆ ಒಲಿಯುತ್ತಾಳೆ. ತಂದೆ ತಾಯಿಗೆ ದೇವಾಲಯ ಕಟ್ಟದಿದ್ದರೂ ಪರವಾಗಿಲ್ಲಾ. ದೇವಾಲಯದ ಮುಂದೆ ಭಿಕ್ಷೆ ಬೇಡುವಂತೆ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು ಕನ್ನಡ ಅನ್ನ ಭಾಷೆಯಾಗಬೇಕು
ಸರ್ಕಾರ ಉದ್ಯೋಗ ನೀಡಿದರೆ ಇಂದಿನ ಯುವಪೀಳಿಗೆಗೆ ಕನ್ನಡದ ಮೇಲಿನ ಪ್ರೀತಿ ಇಮ್ಮಡಿಗೊಳ್ಳಲು ಸ್ಫೂರ್ತಿಯಾಗುತ್ತದೆ. ಆದಕಾರಣ ಘನಸರ್ಕಾರ ಈ ಬಗ್ಗೆ ಆದ್ಯತೆಯ ಮೇರೆಗೆ ಕ್ರಮಕೈಗೊಂಡು ಹುದ್ದೆಗಳನ್ನು ತ್ವರಿತವಾಗಿ ತುಂಬುವುದು ಬಹಳವೇ ಮುಖ್ಯವಾಗಿರುತ್ತದೆ. ಇನ್ನೂ ಸೋಜಿಗವೆಂದರೆ ಸಿಟಿಗಳ ಪಂಚತಾರಾ ಹೋಟೆಲುಗಳಲ್ಲಿ ಬಾಗಿಲು ಕಾಯುವ ಸೆಕ್ಯೂರಿಟಿ ಕೆಲಸ ಸಿಗಬೇಕಾದರೂ ಕೂಡ ಅವರಿಗೆ ಇಂಗ್ಲಿಷ್ ಗೊತ್ತಿರಲೇಬೇಕು. ಇಂಥ ಕ್ಲಿಷ್ಟ ಪರಿಸ್ಥಿತಿ ಇರಬೇಕಾದರೆ ಕನ್ನಡ ಭಾಷೆಯನ್ನು ಯಾರು ಆಶ್ರಯಿಸುತ್ತಾರೆ ಎಂದು ಪ್ರಶ್ನಿಸಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆ
ನಗರದಲ್ಲಿ ಎಲ್ಲೆಲ್ಲೂ ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಭವನ ಲೋಕಾರ್ಪಣೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಎಲ್ಲೆಡೆ ಕನ್ನಡ ಹಬ್ಬದ ವಾತಾವರಣ ನಿರ್ಮಾಣವಾಗಿ ಗಮನ ಸೆಳೆಯಿತು.