ಯಲ್ಲಾಪುರ: ಸಾಹಿತ್ಯ ರಚನೆ ಸುಲಭವಲ್ಲ. ಆಳವಾದ ಅಧ್ಯಯನ, ಚಿಂತನೆ ಬೇಕು. ಸಾಹಿತ್ಯದಿಂದ ಆದಾಯವಾಗದಿದ್ದರೂ ಮಾನಸಿಕ ನೆಮ್ಮದಿ ದೊರೆಯುತ್ತದೆ. ಬರೆಯುವವರು ಕೆಲವರು ಮಾತ್ರ ಸಿಗುತ್ತಾರೆ. ನಾವು ಅದನ್ನು ಓದುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಟಕ ಕರ್ತೃ ಟಿ.ವಿ. ಕೋಮಾರ ಅವರ ''''''''ಹಿತಶತ್ರುಗಳು'''''''' ಮತ್ತು ''''''''ಕ್ಷಮಾದಾನ'''''''' ಮಕ್ಕಳ ನಾಟಕ ಸಂಕಲನಗಳನ್ನು ಲೋಕಾರ್ಪಣೆಗೊಳಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕೋಮಾರ ನಿರಂತರವಾಗಿ ನಾಟಕ ಬರೆಯುತ್ತಾ ಬಂದಿರುವುದು ಯುವ ಜನಾಂಗಕ್ಕೆ ಮಾದರಿಯಾಗಿದೆ. ಯುವಕರು ಉತ್ತಮ ಗ್ರಂಥಗಳನ್ನು ಅಧ್ಯಯನ ಮಾಡುವ ಸಂಸ್ಕಾರ ಬೆಳೆಸಿಕೊಳ್ಳಬೇಕು. ದೇಶದಲ್ಲಿಂದು ಸ್ವಾತಂತ್ರ್ಯಾನಂತರದ ೭೫ ವರ್ಷ ಕಳೆದಿದ್ದೇವೆ. ಮೌಲ್ಯವನ್ನು ಕಳೆದುಕೊಂಡಿದ್ದೇವೆ. ನ್ಯಾಯ, ಧರ್ಮ ಯಾವುದೂ ನಮ್ಮ ನಡೆ, ನುಡಿಯಲ್ಲಿ ಇಲ್ಲವಾಗಿದೆ. ಇವುಗಳ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ ಎಂದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಕೆಲವು ದಶಕಗಳಿಂದ ಕೋಮಾರ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿಯೇ ಇರುವುದರಿಂದ ಅವರ ಪ್ರತಿಭೆಗೆ ತಕ್ಕ ಪ್ರಚಾರ ಸಿಕ್ಕಿಲ್ಲ ಎಂದರು.''''''''ಕ್ಷಮಾದಾನ'''''''' ಕೃತಿ ಬಿಡುಗಡೆಗೊಳಿಸಿದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಸಾಂದರ್ಭಿಕ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಪ್ರಾಂಶುಪಾಲ ಆರ್.ಡಿ. ಜನಾರ್ದನ ಕೃತಿ ಪರಿಚಯಿಸಿದರು. ಕೃತಿಕಾರ ಟಿ.ವಿ. ಕೋಮಾರ ಮಾತನಾಡಿದರು. ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ, ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ, ಕ.ಸಾ.ಪ. ಗೌ.ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ಇದ್ದರು.ಪ್ರೀತಿ ಶಶಾಂಕ, ಸವಿತಾ ಹಂಗಾರಿ ಪ್ರಾರ್ಥಿಸಿದರು. ನ್ಯಾಯವಾದಿ ಶಶಾಂಕ ಹೆಗಡೆ ಶೀಗೆಹಳ್ಳಿ ಸ್ವಾಗತಿಸಿದರು. ಪತ್ರಕರ್ತ ಸುಬ್ರಾಯ ಬಿದ್ರೆಮನೆ, ಮಂಜುನಾಥ ಗಾಂವ್ಕರ ಮೂಲೆಮನೆ ನಿರ್ವಹಿಸಿದರು. ಪ್ರೀತಿ ಶಶಾಂಕ ವಂದಿಸಿದರು.
ಶಾಸಕ ಶಿವರಾಮ ಹೆಬ್ಬಾರ ಟಿ.ವಿ.ಕೋಮಾರ ಅವರ ''''''''ಹಿತಶತ್ರುಗಳು'''''''' ಮತ್ತು ''''''''ಕ್ಷಮಾದಾನ'''''''' ಕೃತಿಗಳನ್ನು ಬಿಡುಗಡೆಗೊಳಿಸಿದರು.