ಗ್ರಾಮೀಣ ಪ್ರದೇಶಗಳಲ್ಲಿ ಓದುಗರ ಸಂಖ್ಯೆ ಹೆಚ್ಚಾಗಲಿ

KannadaprabhaNewsNetwork |  
Published : Jul 24, 2025, 12:46 AM IST
೨೩ಶಿರಾ೧: ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಕುರುಬರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಗದಡು ಗ್ರಾಮದಲ್ಲಿ ೯,೨೧,೦೦೦ ಮೌಲ್ಯದ ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಿದರು. | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ಪುಸ್ತಕಗಳ ಓದುಗರು ದಿನಪತ್ರಿಕೆಗಳ ಓದುಗರು ಹೆಚ್ಚಾಗಬೇಕು ಉತ್ತಮ ಸ್ನೇಹಿತರಾಗಿ ಪುಸ್ತಕಗಳನ್ನು ಹೊಂದಬೇಕು ಎಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಬಿ ಸುರೇಶ್ ಬಾಬು ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಗ್ರಾಮೀಣ ಪ್ರದೇಶಗಳಲ್ಲಿ ಪುಸ್ತಕಗಳ ಓದುಗರು ದಿನಪತ್ರಿಕೆಗಳ ಓದುಗರು ಹೆಚ್ಚಾಗಬೇಕು ಉತ್ತಮ ಸ್ನೇಹಿತರಾಗಿ ಪುಸ್ತಕಗಳನ್ನು ಹೊಂದಬೇಕು ಎಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಬಿ ಸುರೇಶ್ ಬಾಬು ಹೇಳಿದರು.ಅವರು ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಕುರುಬರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಗದಡು ಗ್ರಾಮದಲ್ಲಿ ೯,೨೧,೦೦೦ ಮೌಲ್ಯದ ಡಿಜಿಟಲ್ ಗ್ರಂಥಾಲಯ, ೧೫ ಲಕ್ಷ ಮೌಲ್ಯದ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ೪೭೫ ಮನೆಗಳಿಗೆ ೧೧೬ ಲಕ್ಷ ಮೌಲ್ಯದಲ್ಲಿ ಮನೆ ಮನೆ ಗಂಗೆ ಜೆ ಜೆ ಎಂ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಓದುಗರ ಸಂಖ್ಯೆ ಹೆಚ್ಚಾಗಬೇಕು ಸಾಕ್ಷರತೆ ಪ್ರಮಾಣದಲ್ಲಿ ಪ್ರತಿ ಮನೆಮನೆಯಲ್ಲೂ ಪುಸ್ತಕಗಳು ಹುಟ್ಟಬೇಕು ಆ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಒಂದೊಂದು ಡಿಜಿಟಲ್ ಗ್ರಂಥಾಲಯಗಳನ್ನು ಆರಂಭಿಸಿದ್ದು ವಿದ್ಯಾರ್ಥಿಗಳು ಪುಸ್ತಕ ಪ್ರೇಮಿಗಳು ಇವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಕೆಲಸವಾಗಬೇಕು. ಪ್ರತಿ ಗ್ರಾಮವು ಸ್ವಚ್ಛ ಹಾಗೂ ಶುದ್ಧ ಕುಡಿಯುವ ನೀರು ದೊರೆಯುವಂತೆ ಆಗಬೇಕು. ಆ ಮೂಲಕ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳನ್ನು ಕಡೆಗಣಿಸಿದಲ್ಲಿ ಭಾರತ ದೇಶದ ಅಭಿವೃದ್ಧಿ ಅಸಾಧ್ಯ. ಆ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಗಳನ್ನು ಪಂಚಾಯಿತಿಗೆ ಒಂದರಂತೆ ಡಿಜಿಟಲ್ ಗ್ರಂಥಾಲಯ ರಸ್ತೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದು ಜೆ ಜೆ ಎಂ ಕಾಮಗಾರಿಯ ಮೂಲಕ ಪ್ರತಿ ಮನೆಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ಹಾಗೂ ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಬೇಕು ಯಾವುದೇ ಭ್ರಷ್ಟಾಚಾರ ತಾರತಮ್ಯ ನಡೆಯದೆ ಶೀಘ್ರವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜು ಪ್ರಸಾದ್ ಕುರುಬರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಮ್ಮ ಚಿಕ್ಕಣ್ಣ ಪಿಡಿಒ ಮಹಮದ್ ಕೌಸರ್ ಸದಸ್ಯರಾದ ಪ್ರಮೀಳಮ್ಮ ಮುದ್ದೀರಪ್ಪ, ಎಸ್ ಕೆ ಮಹೇಶ್, ಮಹಾಲಕ್ಷ್ಮಿ ಪರಮೇಶ್ವರ್, ಗುರುಮೂರ್ತಿ , ಕೆ ಟಿ ಕರಿಯಪ್ಪ, ಜೆಎಂ ರಾಜಣ್ಣ, ರಂಗಲಕ್ಷ್ಮಿ ಕೃಷ್ಣಪ್ಪ, ಲೀಲಾವತಿ ಕುಮಾರ್, ಕಮಲಮ್ಮ ಶ್ರೀನಿವಾಸ್, ಸೈಯದ್ ಮುಕ್ಬುಲ್, ಸೇರಿದಂತೆ ಗ್ರಾಮಸ್ಥರು ಜೆಡಿಎಸ್ ಮುಖಂಡರು ಸಾರ್ವಜನಿಕರು ಹಾಜರಿದ್ದರು.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು