ನರ್ಸಿಂಗ್‌ ಕಲಿತವರಿಗೆ ಹೆಚ್ಚಿದ ಬೇಡಿಕೆ

KannadaprabhaNewsNetwork |  
Published : May 22, 2024, 12:51 AM ISTUpdated : May 22, 2024, 12:52 AM IST
21ಡಿಡಬ್ಲೂಡಿ8ಎಸ್‌ಡಿಎಂ ಇನಸ್ಟಿಟ್ಯೂಟ್‌ ಆಫ್‌ ನರ್ಸಿಂಗ್‌ ಸೈನ್ಸ್‌ ಮತ್ತು ನರ್ಸಿಂಗ್‌ ಸೇವಾ ವಿಭಾಗದಿಂದ ಶೂಶ್ರೂಷಕಿಯರ ಸಪ್ತಾಹ ಅಂಗವಾಗಿ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಎಸ್‌ಡಿಎಂ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ.  | Kannada Prabha

ಸಾರಾಂಶ

ಪ್ರಸ್ತುತ ಸಂದರ್ಭದಲ್ಲಿ ನರ್ಸಿಂಗ್‌ ಕಲಿತವರಿಗೆ ಬರೀ ದೇಶ ಮಾತ್ರವಲ್ಲದೇ ಪ್ರಪಂಚದಲ್ಲಿಯೇ ಉತ್ತಮ ಬೇಡಿಕೆ ಇದೆ. ಆದ್ದರಿಂದ ಅವರು ವೃತ್ತಿ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು.

ಧಾರವಾಡ:

ಶುಶ್ರೂಷಕಿಯರು ಕಾಲಕ್ಕೆ ಅನುಗುಣವಾಗಿ ತಮ್ಮ ಜ್ಞಾನ ನವೀಕರಿಸಿಕೊಂಡರೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಎಸ್‌ಡಿಎಂ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹೆಗಡೆ ಹೇಳಿದರು.

ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಆಫ್‌ ನರ್ಸಿಂಗ್‌ ಸೈನ್ಸ್‌ ಮತ್ತು ನರ್ಸಿಂಗ್‌ ಸೇವಾ ವಿಭಾಗದಿಂದ ಶೂಶ್ರೂಷಕಿಯರ ಸಪ್ತಾಹ ಅಂಗವಾಗಿ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಎಸ್‌ಡಿಎಂ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ನರ್ಸಿಂಗ್‌ ಕಲಿತವರಿಗೆ ಬರೀ ದೇಶ ಮಾತ್ರವಲ್ಲದೇ ಪ್ರಪಂಚದಲ್ಲಿಯೇ ಉತ್ತಮ ಬೇಡಿಕೆ ಇದೆ. ಆದ್ದರಿಂದ ಅವರು ವೃತ್ತಿ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು. ವಿದೇಶಗಳಲ್ಲಿ ಸೇವೆ ಸಲ್ಲಿಸಲು ಅವರು ವಿವಿಧ ಭಾಷೆಗಳನ್ನು ಕಲಿಯಬೇಕು ಎಂಬ ಸಲಹೆ ನೀಡಿದರು.

ಎಸ್‌ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ ಶುಶ್ರೂಷಕಿಯರ ಸಪ್ತಾಹ ಉದ್ಘಾಟಿಸಿದರು. ಕಾರ್ಯನಿರ್ವಾಹಕ ನಿರ್ದೇಶಕರಾದ ಪದ್ಮಲತಾ ನಿರಂಜನ್, ನರ್ಸಿಂಗ್‌ನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮತ್ತು ನರ್ಸಿಂಗ್‌ನಲ್ಲಿ ಉತ್ತಮ ಸೇವೆ ನೀಡಿದ ಶುಶ್ರೂಷಕಿಯರಿಗೆ ಸ್ಮರಣಿಕೆ ಮತ್ತು ಚಿನ್ನದ ಪದಕಗಳನ್ನು ನೀಡಿ ಸನ್ಮಾನಿಸಿದರು. ಹಿರಿಯ ಪ್ರಾಧ್ಯಾಪಕರಾದ ಡಾ. ಗಂಗಾಬಾಯಿ ಕುಲಕರ್ಣಿ, ಉಪ ಪ್ರಾಚಾರ್ಯ ಡಾ. ಪ್ರಸನ್ನ ದೇಶಪಾಂಡೆ, ಡಾ. ನಾಗೇಶ ಅಜ್ಜವಾಡಿಮಠ, ನಾನ್ಸಿ ಮೇರಿ, ಮಂಜುಳಾ ಕೆ.ಬಿ., ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ