ಎನ್‌ಡಿಎ ಅವಧಿಯಲ್ಲಿ ಬರ, ಪ್ರವಾಹ ಪರಿಹಾರ ಹೆಚ್ಚಳ -ಸಂಸದ ಬೊಮ್ಮಾಯಿ

KannadaprabhaNewsNetwork |  
Published : Sep 12, 2026, 02:15 AM IST
ಬಸವರಾಜ ಬೊಮ್ಮಾಯಿ  | Kannada Prabha

ಸಾರಾಂಶ

ಬರ ಮತ್ತು ಪ್ರವಾಹದ ಸಂದರ್ಭದಲ್ಲಿ ಯುಪಿಎ ಸರ್ಕಾರ ಇದ್ದಾಗ ಪ್ರತಿ ಹೆಕ್ಟೇರ್‌ಗೆ ₹2 ಸಾವಿರ ಪರಿಹಾರ ಕೊಡುತ್ತಿದ್ದರು. ಎನ್‌ಡಿಎ ಸರ್ಕಾರ ಬಂದ ಮೇಲೆ ₹6500 ಗೆ ಹೆಚ್ಚಳ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಬರ ಮತ್ತು ಪ್ರವಾಹದ ಸಂದರ್ಭದಲ್ಲಿ ಯುಪಿಎ ಸರ್ಕಾರ ಇದ್ದಾಗ ಪ್ರತಿ ಹೆಕ್ಟೇರ್‌ಗೆ ₹2 ಸಾವಿರ ಪರಿಹಾರ ಕೊಡುತ್ತಿದ್ದರು. ಎನ್‌ಡಿಎ ಸರ್ಕಾರ ಬಂದ ಮೇಲೆ ₹6500 ಗೆ ಹೆಚ್ಚಳ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಇರಬಹುದು ಅಥವಾ ಭೀಕರವಾಗಿರುವಂತಹ ಪ್ರವಾಹ ಇರಬಹುದು. ಅವು ಎರಡರಲ್ಲಿಯೂ ಪರಿಹಾರ ಮೊತ್ತವನ್ನು ಅಮಿತ್ ಶಾ ಅವರು ಗೃಹ ಸಚಿವರಾದ ಮೇಲೆ ಎನ್‌ಡಿಎ ಸರ್ಕಾರದಲ್ಲಿ ಹೆಚ್ಚು ಮಾಡಿದ್ದಾರೆ ಎಂದು ತಿಳಿಸಿದರು.

ಮೋಡ ಬಿತ್ತನೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರೆಲ್ಲಾ ಬಿಸಿನೆಸ್ ಸೈಂಟಿಸ್ಟ್‌ಗಳು. ಅವರಿಗೆ ಬಹಳ ಜ್ಞಾನ ಇದೆ. ಹಿಂದೆ 2000ನೇ ಇಸವಿಯಲ್ಲಿ ಮೋಡ ಬಿತ್ತನೆಯ ಬಗ್ಗೆ ಸಿಎಜಿ ರಿಪೋರ್ಟ್ ಇದೆ ಅದನ್ನು ತೆಗೆದು ನೋಡಲಿ ಎಂದು ಹೇಳಿದರು.

ಶಿಗ್ಗಾಂವಿ ಜಾನಪದ ವಿಶ್ಬವಿದ್ಯಾಲಯದ ಅಕ್ರಮದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,​ ಈ ಕುರಿತು ಸಂಪೂರ್ಣವಾಗಿ ತನಿಖೆ ಆಗಬೇಕು. ಅದು ಒಂದು ಬಾರಿ ಎಲ್ಲವೂ ಸ್ವಚ್ಛ ಮಾಡಬೇಕು ಎಂದರು.

ರಾಜಕಾರಣ ಅಗತ್ಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಆಗಿರುವ ಇಡಿ ದಾಳಿ ಬಗ್ಗೆ ಕಾಂಗ್ರೆಸ್‌​ನವರು ಮಾಡುತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾರಕಿಹೊಳಿಯವರು ಉತ್ತರ ಕೊಟ್ಟಿದ್ದಾರೆ. ಕೆಲವೆಲ್ಲ ತಾಂತ್ರಿಕ ಕಾರಣ ಕೊಟ್ಟಿದ್ದಾರೆ. ಆದರೆ ಮುಖ್ಯಮಂತ್ರಿಗಳು ರಾಜಕಾರಣ ಬಳಸೋಕೆ ನೋಡ್ತಾ ಇದ್ದಾರೆ. ಆದರೆ ಅದು ಸಾಧ್ಯ ಇಲ್ಲ. ಅಂತಿಮವಾಗಿ ಏನಾದರು ಇದ್ದರೆ ಕೋರ್ಟ್ ಅಲ್ಲಿ ನಿರ್ಧಾರ ಆಗುತ್ತದೆ. ಅದಕ್ಕೆ ಮುಖ್ಯಮಂತ್ರಿಗಳು ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ–ಕಲಾವಿದ ಮಾಳವಾಡ ನಿಧನಕ್ಕೆ ಸಂತಾಪ
ಶೂನ್ಯ ತ್ಯಾಜ್ಯ ಗಣೇಶೋತ್ಸವ:ಯುವ ಸಂಘಟನೆಗಳ ಪದಾಧಿಕಾರಿಗಳಿಗೆ ಕಾರ್ಯಾಗಾರ