ಕನ್ನಡಪ್ರಭ ವಾರ್ತೆ ಸಾವಳಗಿ
ಗುರುವಾರ ಮಧ್ಯಾಹ್ನ ಜಮಖಂಡಿಯ ಓಲೆಮಠದ ಆನಂದ ದೇವರು ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಬೆಂಬಲ ಸೂಚಿಸಿದರು. ರೈತರು ಪ್ರಸಾದ ಸ್ವೀಕರಿಸಿ ಹೋರಾಟ ಮುಂದುವರಿಸುವಂತೆ ತಿಳಿಸಿದರು. ನಮ್ಮ ಬೇಡಿಕೆಗಳು ಈಡೇರುವವರೆಗೆ ಅಮರಣ ಉಪವಾಸ ಮುಂದುವರಿಸುವ ನಿರ್ಧಾರವನ್ನು ರೈತರು ವ್ಯಕ್ತಪಡಿಸಿದರು.
ರೈತರ ನ್ಯಾಯಯುತ ಬೇಡಿಕೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಬೇಕು. ಚಿಕ್ಕಲಕಿ–ತೊದಲಬಾಗಿ ಏತ ನೀರಾವರಿ ಯೋಜನೆಯ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಈ ಭಾಗದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ರೈತರ ಬದುಕು ಹಸನಾಗಲು ಹಾಗೂ ಕೃಷಿ ಸಂಕಷ್ಟ ದೂರವಾಗಲು ಆಡಳಿತ ವ್ಯವಸ್ಥೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೋರಾಟ ನಿರತ ರೈತರು ಆಗ್ರಹಿಸಿದ್ದಾರೆ.ಸಹದೇವ ಕದಮ, ಅಪ್ಪಾಜಿ ಕೊಕಟನೂರ, ಸಾಬು ಹಳ್ಳೂರ, ಬಸಪ್ಪ ಸಿಂಪಿ, ಬಾಳಪ್ಪ ಅಥಣಿ, ಮಲ್ಲಪ್ಪ ಪಟೇದಾರ, ಗುರುಲಿಂಗಪ್ಪ ಸಾಯಗೊಂಡ ಹಾಗೂ ಕರಿಮಸಾಬ್ ಸಾಂಗ್ಲಿ ಸೇರಿದಂತೆ ಒಟ್ಟು ಎಂಟು ರೈತರು ಅಮರಣ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.