
ರಾಮನಗರ: ಎಂಆರ್‌ಡಬ್ಲ್ಯೂ, ವಿಆರ್‌ಡಬ್ಲ್ಯೂ, ಯುಆರ್‌ಡಬ್ಲ್ಯೂ ವಿಕಲಚೇತನ ಕಾರ್ಯಕರ್ತರ 19 ವರ್ಷಗಳ ಸೇವೆಯನ್ನು ಪರಿಗಣಿಸಿ ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶೇಷಚೇತನರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 23ನೇ ದಿನಕ್ಕೆ ಕಾಲಿಟ್ಟಿದೆ.
ಕಲಬುರಗಿಯಲ್ಲಿ ಹೋರಾಟ ಮಾಡಿದಾಗ, ಈಗಿನ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸರ್ಕಾರದ ಗಮನಕ್ಕೆ ತಂದು ಖಾಯಂ ಮಾಡುತ್ತೇವೆಂದು ಭರವಸೆ ಕೂಡ ನೀಡಿದ್ದರು. ಆದರೆ ಅವರ ಆಶ್ವಾಸನೆ ಭರವಸೆ ಹಾಗೇ ಉಳಿದು ಹೋದವು. ನಮ್ಮ ಹೋರಾಟದ ಕೂಗು ಸರ್ಕಾರಕ್ಕೆ ಕೇಳಬೇಕು ಎಂದು ರಾಜಧಾನಿ ಪಕ್ಕದಲ್ಲಿರುವ ರಾಮನಗರದಲ್ಲಿ ಅನಿರ್ಧಿಷ್ಟಾವಧಿ ರಾತ್ರಿ ಹಗಲೆನ್ನದೆ ಮುಷ್ಕರ ನಡೆಸುತ್ತಿದ್ದೇವೆ. 23 ದಿನ ಕಳೆದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಮ್ಮಗಳ ನಿರೀಕ್ಷೆ ಹುಸಿಯಾಗಿದೆ. ಜಿಲ್ಲಾಧಿಕಾರಿಗಳು, ಶಾಸಕ ಹೆಚ್.ಎ. ಇಕ್ಬಾಲ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಅವರು ಬಂದು ನಮ್ಮ ಮನವಿ ಸ್ವೀಕರಿಸಿ ಭರವಸೆ ನೀಡಿ ಹೋದರು. ಆದರೆ ಅವರ ಭರವಸೆಗಳೂ ಕೂಡ ಈಡೇರಲಿಲ್ಲ ಎಂದು ಟೀಕಿಸಿದರು.
ಕಳೆದ 23ದಿನಗಳಿಂದ ಮುಷ್ಕರ ನಡೆಸುತ್ತಿರುವ ನಾವು ಉಪವಾಸ ಕೂಡ ನಡೆಸಿ ಪ್ರತಿಭಟನೆ ನಡೆಸಿದ್ದೇವೆ. ಇಂದಿನ ಬೆಲೆ ಏರಿಕೆಯಲ್ಲಿ 10 ಸಾವಿರ ಗೌರವಧನದಲ್ಲಿ ನಮ್ಮ ಬದುಕು, ಸಂಸಾರ, ಮಕ್ಕಳ ಶಿಕ್ಷಣಕ್ಕೆ ಏನೇನು ಸಾಲುತ್ತಿಲ್ಲ. ಸರ್ಕಾರ ನಮ್ಮ ಮನವಿಗೆ ಬಹುಬೇಗ ಸ್ಪಂಧನೆ ನೀಡಬೇಕು. ನಮ್ಮ ಹೋರಾಟಕ್ಕೆ ಜಯ ಸಿಗಬೇಕು ನಮ್ಮ ಹೋರಾಟಕ್ಕೆ ಜಯ ಸಿಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಇನ್ನು ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಲು ವಿಕಲಚೇತನರಾಗಿದ್ದರೂ ಕೂಡ ನಾವುಗಳು ಶೀಘ್ರದಲ್ಲೇ ಬಿಡದಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ತಯಾರಿ ನಡೆಸಿದ್ದೇವೆ ಎಂದು ಸಂಘಟನೆ ಮುಖಂಡರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
(ಫೋಟೊ ಕ್ಯಾಫ್ಞನ್)