ಮಲ್ಪೆ-ಮೊಳಕಾಲ್ಮೂರು ರಸ್ತೆ 69 ಅಡಿವರೆಗೆ ವಿಸ್ತರಣೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

KannadaprabhaNewsNetwork | Published : Jul 1, 2025 12:47 AM

ಪಟ್ಟಣದಲ್ಲಿ ಹಾದುಹೋಗಿರುವ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯನ್ನು ರಸ್ತೆಯ ಮಧ್ಯ ಭಾಗದಿಂದ ಎರಡೂ ಕಡೆ 69 ಅಡಿಗಳವರೆಗೆ ವಿಸ್ತರಣೆಗೆ ಆಗ್ರಹಿಸಿ ರಸ್ತೆ ಅಗಲೀಕರಣ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಕನ್ನಡಪ್ರಭವಾರ್ತೆ ಜಗಳೂರು

ಪಟ್ಟಣದಲ್ಲಿ ಹಾದುಹೋಗಿರುವ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯನ್ನು ರಸ್ತೆಯ ಮಧ್ಯ ಭಾಗದಿಂದ ಎರಡೂ ಕಡೆ 69 ಅಡಿಗಳವರೆಗೆ ವಿಸ್ತರಣೆಗೆ ಆಗ್ರಹಿಸಿ ರಸ್ತೆ ಅಗಲೀಕರಣ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿ ತಲುಪಿ, ಶಾಮಿಯಾನದಡಿ ಕುಳಿತು ಧರಣಿ ನಡೆಸಿದರು.

ಪ್ರಗತಿಪರ ಚಿಂತಕ ನಿವೃತ್ತ ಪ್ರಾಂಶುಪಾಲ ಯಾದವರೆಡ್ಡಿ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿ ಮರೆತು ಅಧಿಕಾರಿಗಳು ಕೆಲ ಪಟ್ಟಭದ್ರ ಹಿತಾಸಕ್ತಿಗಳ, ಕಾಣದ ಕೈಗಳ ಕೈಗೊಂಬೆಯಾಗಿದೆ. ರಾಜ್ಯ ಹೆದ್ದಾರಿ ಪ್ರಾಧಿಕಾರದ ರಸ್ತೆ ವಿಸ್ತರಣೆ ನಿಯಮಗಳನ್ನು ಉಲ್ಲಂಘಿಸಿದೆ. ಜಗಳೂರು ತಾಲೂಕಿನಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸೇರಿದಂತೆ ಅಭಿವೃದ್ಧಿಗಾಗಿ ನ್ಯಾಯಯುತ ಬೇಡಿಕೆಗಳಿಗೆ ಪ್ರಗತಿಪರ ಸಂಘಟನೆಗಳ ಹೊರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಪ್ರಗತಿಪರ ಸಂಘಟನೆ ಹೋರಾಟಗಾರ ವಕೀಲ ಆರ್.ಓಬಳೇಶ್, ಹೋರಾಟ ಸಮಿತಿ ಅಧ್ಯಕ್ಷ ಸಣ್ಣ ಓಬಯ್ಯ, ವಕೀಲ ಸಂಘದ ತಾಲೂಕು ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್ ಮಾತನಾಡಿದರು.

ಪದಾಧಿಕಾರಿಗಳಾದ ಸತೀಶ್ ಮಲೆಮಾಚಿಕೆರೆ, ಮಹಾಲಿಂಗಪ್ಪ ಎಚ್.ಎಂ.ಹೊಳೆ, ರಾಜಪ್ಪ ವ್ಯಾಸಗೊಂಡನಹಳ್ಳಿ, ಬಿ.ಲೋಕೇಶ್, ಸತ್ಯಮೂರ್ತಿ, ರಾಜಪ್ಪ ಬುಳ್ಳೇನಹಳ್ಳಿ, ಗೊಲ್ಲರಹಟ್ಟಿ ತಿಪ್ಪೇಸ್ವಾಮಿ, ಮಾದಿಹಳ್ಳಿ ಮಂಜಪ್ಪ, ಕುಬೇಂದ್ರಪ್ಪ, ಹಫೀಜ್ ಉಲ್ಲಾ, ಮಹಾಂತೇಶ್, ಶಾಹಿನಾ ಬಾನು, ಧನ್ಯಕುಮಾರ್ ಎಚ್.ಎಂ.ಹೊಳೆ ಇನ್ನಿತರರು ಭಾಗವಹಿಸಿದ್ದರು.

- - -

(ಟಾಪ್‌ ಕೋಟ್‌) ನನ್ನ ಆಡಳಿತಾವಧಿಯಲ್ಲಿ ಕಾರಣಾಂತರದಿಂದ ಮೊಳಕಾಲ್ಮೂರು- ಮಲ್ಫೆ ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಹಾಲಿ ಶಾಸಕ ಬಿ.ದೇವೇಂದ್ರಪ್ಪ ಅವರ ಕಾಳಜಿಯಿಂದ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ಸಿಕ್ಕಿರುವುದು ಸ್ವಾಗತಾರ್ಹ. ಹೋರಾಟಕ್ಕೆ ಬೆಂಬಲಿಸುತ್ತೇನೆ. ಡಿಸಿ ಸಭೆಯಲ್ಲಿನ ಹೇಳಿಕೆಯಂತೆ 69 ಅಡಿ ಅಗಲೀಕರಣಗೊಳ್ಳಬೇಕಿದೆ. ಜಗಳೂರು ಶಾಸಕರು, ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆ ಗೋಚರವಾಗುತ್ತಿದೆ. ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ ಕಾರ್ಯ ವಿಳಂಬ ಸರಿಯಲ್ಲ.

- ಎಚ್.ಪಿ.ರಾಜೇಶ್, ಮಾಜಿ ಶಾಸಕ

- - -

-30 ಜೆ.ಜಿ.ಎಲ್.1:

ಜಗಳೂರು ಪಟ್ಟಣದಲ್ಲಿ ಹಾದುಹೋಗಿರುವ ಮಲ್ಫೆ ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯನ್ನು ಮಧ್ಯ ಕೇಂದ್ರದಿಂದ ಎರಡು ಕಡೆ 69 ಅಡಿ ವಿಸ್ತರಣೆಗೆ ಆಗ್ರಹಿಸಿ ರಸ್ತೆ ಅಗಲೀಕರಣ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.