ಚನ್ನಪಟ್ಟಣ: ಕಮಲೇಶ್ ಚಂದ್ರ ಸಮಿತಿ ಶಿಫಾರಸ್ಸು ಜಾರಿ ಹಾಗೂ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟ ಹಾಗೂ ಗ್ರಾಮೀಣ ಅಂಚೆ ಸೇವಕರ ರಾಷ್ಟ್ರೀಯ ಒಕ್ಕೂಟದ ಸಹಯೋಗದಲ್ಲಿ ಅಂಚೆ ಇಲಾಖೆಯ ಜಿಡಿಎಸ್ ನೌಕಕರು ಮಂಗಳವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಜಿಡಿಎಸ್ ನೌಕರರ ಬೇಡಿಕೆಗಳ ಕುರಿತು ಸಾಕಷ್ಟು ಬಾರಿ ಸರ್ಕಾರದ ಗಮನ ಸೆಳೆದರೂ ಪ್ರಯೋಜವಾಗಿಲ್ಲ. ಯಾರು ಎಷ್ಟೇ ಒತ್ತಡ ಹೇರಿದರೂ ಈ ಬಾರಿ ನಮ್ಮ ಬೇಡಿಕೆಗಳು ಈಡೇರುವವರೆಗೆ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಘೋಷಿಸಿದರು.
ಕಮಲೇಶ್‌ಚಂದ್ರ ಶಿಫಾರಸ್ಸು ಜಾರಿ: ಜಿಡಿಎಸ್ ನೌಕರರ ಬೇಡಿಕೆಗಳ ಕುರಿತು ರಚಿಸಿದ್ದ ಕಮಲೇಶ್‌ಚಂದ್ರ ಸಮಿತಿ 2018ರಲ್ಲೇ ವರದಿ ಸಲ್ಲಿಸಿದ್ದರೂ ಸಮಿತಿ ಶಿಫಾರಸ್ಸುಗಳನ್ನು ಜಾರಿಗೆ ತರದೇ ಕಾಲಹರಣ ಮಾಡಲಾಗುತ್ತಿದೆ. 2018ರಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ನಡೆಸಿದ್ದಾಗ ಕೇಂದ್ರ ಸರ್ಕಾರದ ಸಚಿವರು ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಆದರೆ, ಇಂದಿಗೂ ಈ ಭರವಸೆ ಹಾಗೆ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಮೀಣರಿಗೆ ಪಿಂಚಣಿ ಸೇರಿದಂತೆ ಇನ್ನಿತರ ಸೇವೆ ಒದಗಿಸುವ ನಮಗೇ ಪಿಂಚಿಣಿ ಸವಲತ್ತು ಇಲ್ಲವಾಗಿದೆ. ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಗ್ರಾಚುಯಿಟಿ ಸೇರಿ ವಿವಿಧ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಪೊಟೋ೧೨ಸಿಪಿಟಿ೨:
ಚನ್ನಟಪಟ್ಟಣ ಅಂಚೆ ಕಚೇರಿ ಬಳಿ ಜಿಡಿಎಸ್ ನೌಕರರು ಮುಷ್ಕರ ನಡೆಸಿದರು.