ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಪಟ್ಟಣದ ಪುರಸಭೆ ಆವರಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವುಭೋವಿ ರಾಷ್ಟ್ರ ಧ್ವಜಾರೋಹಣ ಮಾಡಿದರೆ, ಹಳೇ ವೃತ್ತದಲ್ಲಿ ಪ್ರಭಾರ ಅಧ್ಯಕ್ಷೆ ನಿಗೀನಾ ಬಾನು ಧ್ವಜಾರೋಹಣ ನೆರವೇರಿಸಿದರು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಪ್ರಶಾಂತ್ ಧ್ವಜಾರೋಹಣ ಮಾಡಿದರು.
ಕುಂಬಳೂರು- ಸಮೀಪದ ಕುಂಬಳೂರು ಸರ್ಕಾರಿ ಪಿಯು ಕಾಲೇಜಲ್ಲಿ ಪ್ರಾಚಾರ್ಯ ತೆಲಿಗಿ ಮಂಜುನಾಥ್ ದೇಶದ ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳಿಂದ ವಂದನೆ ಸ್ವೀಕರಿಸಿ ಸಂದೇಶ ನೀಡಿದರು. ಉಪನ್ಯಾಸಕ ಫೈರೋಜ್ ಅಲಿ ಮಾತನಾಡಿದರು.ಬೆಂಗಳೂರಿನ ಸ್ಪಂದನಾ ಚಾರಿಟಬಲ್ ಟ್ರಸ್ಟ್, ಶಿಕ್ಷಕ ಕೆ ಆರ್ ಮಂಜುನಾಥ್, ವಕೀಲ ಬಿ ಭದ್ರೇಶಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪಾರಿತೋಷಕ ನೀಡಿದರು. ಸಿಡಿಸಿ ಸದಸ್ಯ ಸದಾನಂದ, ಕಾಲೇಜು ಅಭಿವೃಧ್ದಿ ಸಮಿತಿ ಉಪಾಧ್ಯಕ್ಷ ಎನ್.ಕಲ್ಲೇಶ್, ಎಸ್‌ಡಿಎಂಸಿ ಅಧ್ಯಕ್ಷ ಡಿ ಕರಿಬಸಪ್ಪ, ಸದಸ್ಯರು, ಬೋಧಕರು ಇದ್ದರು. ವಿದ್ಯಾರ್ಥಿಗಳಾದ ಸುಜಾತ, ಧನಲಕ್ಷ್ಮಿ, ಭಾಗ್ಯ, ಚಂದನಾ, ಸ್ನೇಹ ಮಹಾತ್ಮರ ಕುರಿತು ಮಾತನಾಡಿದರು.
ಕೊಕ್ಕನೂರು ಅಂಜನಾದೇವಿ ವಿದ್ಯಾಸಂಸ್ಥೆ, ಧುಳೆಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರುತಿ ಪ್ರಾಥಮಿಕ ಶಾಲೆ, ಭಾನುವಳ್ಳಿ ಆಟೋ ಚಾಲಕರ ಸಂಘದಿಂದ ಆಟೋದಲ್ಲಿ ರಾಷ್ಟ್ರಧ್ವಜ ಕಟ್ಟಿಕೊಂಡು ಮೆರವಣಿಗೆ ಮಾಡಿದರು. ವಿದ್ಯಾರ್ಥಿಗಳು ಇದ್ದರು.