ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಸಿಂಗ್ರಿನಂಜಪ್ಪ ವೃತ್ತದಲ್ಲಿ ಬಜರಂಗದಳ ಏರ್ಪಡಿಸಿದ್ದ ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಂಗ್ಲಾ ದೇಶದ ಹಿಂದೂ ಯುವಕ ದೀಪುದಾಸ್ ಯಾವುದೇ ತಪ್ಪು ಮಾಡಿರದಿದ್ದರೂ ಆತನನ್ನು ಬರ್ಭರವಾಗಿ ಹತ್ಯೆ ಮಾಡಿ ಬೆಂಕಿ ಹಚ್ಚಿದರು. ಮತ್ತೊಬ್ಬ ಹಿಂದೂ ಹೇಮಂತ್‌ನನ್ನು ಕೂಡ ಕೊಲೆ ಮಾಡಲಾಯಿತು. ನಾವು ಭಾರತೀಯರು ಶಾಂತಿಪ್ರಿಯರು. ಆದರೆ ನಾವು ಮನಸ್ಸು ಮಾಡಿದರೆ ಕೈಯಲ್ಲಿ ಕೋವಿ ಮತ್ತು ಅಸ್ತ್ರವನ್ನು ಹಿಡಿದು ಹೊರಟರೆ ಅದಕ್ಕೂ ಸೈ. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಈ ಕೂಡಲೇ ನಿಲ್ಲಿಸದಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಬಾಂಗ್ಲಾದೇಶದ ಮೇಲೆ ಸರ್ಜಿಕಲ್ ದಾಳಿ ನಡೆಸಿ ಹಿಂದೂಗಳನ್ನು ರಕ್ಷಿಸಬೇಕು ಎಂದರು.ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ನಮ್ಮ ಧರ್ಮದಲ್ಲಿ ಶಾಸ್ತ್ರ ಮತ್ತು ಶಸ್ತ್ರ ಎರಡರ ಉಲ್ಲೇಖವೂ ಇದೆ. ಶಾಸ್ತ್ರ ಬದುಕಲಿಕ್ಕೆ, ಶಸ್ತ್ರ ರಕ್ಷಣೆಗೆ ಬಳಸಲಾಗುತ್ತಿದೆ. ನಾವು ಪೂಜಿಸುವ ಎಲ್ಲಾ ದೇವರುಗಳೂ ಶಸ್ತ್ರ ಹಿಡಿದಿವೆ. ಅದರ ಅರ್ಥ ನಮ್ಮ ಧರ್ಮ ಆಪತ್ತಿಗೆ ಸಿಲುಕಿದಾಗ ಧರ್ಮರಕ್ಷಣೆಗೆ ಶಸ್ತ್ರ ಉಪಯೋಗಿಸಬೇಕು ಎಂಬುದಾಗಿದೆ. ಇಂದು ಬಾಂಗ್ಲಾದಲ್ಲಿ ಹತ್ತಿರುವ ಬೆಂಕಿ ನಾಳೆ ಇಲ್ಲಿಗೂ ಬರಬಹುದು. ಆದ್ದರಿಂದ ಎಚ್ಚರಿಕೆಯಿಂದ ಧರ್ಮರಕ್ಷಣೆ ಮಾಡಬೇಕಿದೆ. ಮಕ್ಕಳಿಗೆ ಸಂಸ್ಕಾರ ಹಾಗೂ ಧೈರ್ಯ ಎರಡನ್ನೂ ಕಲಿಸಬೇಕು. ದೇಶಕ್ಕೆ ಚ್ಯುತಿ ಬಂದಾಗ ದೇಶ ರಕ್ಷಿಸಲು ತಾಯಂದಿರು ಯಾವಾಗಲೂ ಮುಂದೇ ಬರುತ್ತಾರೆ. ಅದೇರೀತಿ ಎಲ್ಲ ಧರ್ಮದ ಜನರೂ ಮುಂದೆ ಬರಬೇಕು ಎಂದು ತಿಳಿಸಿದರು.ಬಿಜೆಪಿ ಮುಖಂಡ ಲೋಕೇಶ್ವರ ಮಾತನಾಡಿ, ಬಾಂಗ್ಲಾದಲ್ಲಿ ಯುವಕನನ್ನು ಜೀವಂತವಾಗಿ ಮರಕ್ಕೆ ನೇತುಹಾಕಿ ಸುಡಲಾಯಿತು. ಪೆಹಲ್ಗಾಂನಲ್ಲಿ ಧರ್ಮ ಕೇಳಿ ಕೊಂದುಹಾಕಿದರು. ಬಾಂಗ್ಲಾದಲ್ಲಿ ನಡೆದಿರುವುದು ಭಾರತದಲ್ಲಿಯೂ ನಡೆಯುತ್ತಿದೆ. ಹಿಂದೂ ಧರ್ಮವನ್ನು ತುಳಿಯುವ ವರ್ಗ ಹಾಗೂ ಪಕ್ಷಗಳು ಭಾರತದಲ್ಲಿಯೂ ವ್ಯವಸ್ಥಿತವಾಗಿ ಹಿಂದೂಗಳ ವಿರುದ್ದ ಕೆಲಸ ಮಾಡುತ್ತಿದೆ. ತುಷ್ಟೀಕರಣವನ್ನು ಎಲ್ಲಿಯವರೆಗೂ ನಾವು ನಿಯಂತ್ರಿಸಲು ಆಗುವುದಿಲ್ಲವೋ ಅಲ್ಲಿಯವರೆಗೂ ಹಿಂದೂಗಳಿಗೆ ಕಿರುಕುಳ ತಪ್ಪಿದ್ದಲ್ಲ. ಹಿಂದೂಗಳ ಮೂಲ ವಿಶಾಲವಾಗಿದ್ದು ಅಷ್ಟು ಸುಲಭವಾಗಿ ಹಿಂದೂಧರ್ಮವನ್ನು ನಾಶಮಾಡಲು ಸಾಧ್ಯವಿಲ್ಲ ಎಂದರು.ಬಿಜೆಪಿ ಮುಖಂಡ ಚಂದ್ರಶೇಖರ್ ಮಾತನಾಡಿ ಬಾಂಗ್ಲಾದೇಶ ಭಾರತದ ಭಿಕ್ಷೆ. ಪಾಕಿಸ್ತಾನದಿಂದ ಬೇರಾಗಿ ಬಾಂಗ್ಲಾ ಉದಯಿಸಲು ಭಾರತವೇ ಕಾರಣ. ಅಲ್ಲಿಯವರೆಗೂ ಪಾಕಿಸ್ತಾನಿ ಸೈನಿಕರಿಂದ ನಿರಂತರ ಕಿರುಕುಳ ಅತ್ಯಾಚಾರಕ್ಕೆ ಈಡಾಗುತ್ತಿದ್ದ ಬಾಂಗ್ಲಾವನ್ನು ರಕ್ಷಿಸಿದ ಭಾರತವನ್ನೇ ಬಾಂಗ್ಲಾದೇಶಿಗರು ಟಾರ್ಗೆಟ್ ಮಾಡುತ್ತಿರುವುದನ್ನು ನೋಡಿದರೆ ಅವರಿಗೆ ಸ್ವಾತಂತ್ರ ಕೊಡಿಸಿದ್ದೇ ತಪ್ಪು ಎಂದೆನಿಸುತ್ತದೆ. ಬಾಂಗ್ಲಾದಲ್ಲಿ ಆಗ ಶೇ೨೩.ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಕೇವಲ ಶೇ.೭ರಿಂದ ೮ರಷ್ಟಿದೆ. ಉಳಿದವರನ್ನು ಹತ್ಯೆ, ಮತಾಂತರ ಮಾಡಲಾಗಿದೆ. ಭಾರತ ಹೇಗೆ ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯಿತೋ ಅದೇ ರೀತಿ ಬಾಂಗ್ಲಾವನ್ನು ಬಗ್ಗುಬಡಿಯಬೇಕಿದೆ ಎಂದರು.ಭಜರಂಗದಳ ಕಾರ್ಯಕರ್ತ ನಟರಾಜು, ಮಾಜಿ ನಗರಸಭಾಧ್ಯಕ್ಷ ರಾಮಮೋಹನ್, ಮಾಜಿ ಸದಸ್ಯರಾದ ಪ್ರಸನ್ನಕುಮಾರ್, ಶಶಿಕಿರಣ್, ಮುಖಂಡ ವಿಶ್ವದೀಪ್ ಇನ್ನಿತರರು ಉಪಸ್ಥಿತರಿದ್ದರು.