ಭಾರತ ಧಾರ್ಮಿಕ ತಳಹದಿ ಮೇಲೆ ನಿಂತ ದೇಶ: ಶಾಸಕ ಟಿ.ಡಿ.ರಾಜೇಗೌಡ

KannadaprabhaNewsNetwork |  
Published : Jan 11, 2026, 02:15 AM IST
 ನರಸಿಂಹರಾಜಪುರ ತಾಲೂಕಿನ ವಗ್ಗಡೆ ಕಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ 52 ನೇ ವರ್ಷದ ದೀಪೋತ್ಸವ ಕಾರ್ಯಕ್ರಮದಲ್ಲಿ  ಗುರು ಸ್ವಾಮಿಗಳನ್ನು ಸನ್ಮಾನಿಸಲಾಯಿತು.ಶಾಸಕ ಟಿ.ಡಿ.ರಾಜೇಗೌಡ ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ: ಭಾರತ ಧಾರ್ಮಿಕ ತಳಹದಿಯ ಮೇಲೆ ನಿಂತಿರುವ ದೇಶವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಅಭಿಪ್ರಾಯ ಪಟ್ಟರು.ಶುಕ್ರವಾರ ತಾಲೂಕಿನ ಗುಬ್ಬಿಗಾ ಗ್ರಾಮದ ವಗ್ಗಡೆ ಕಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ 52 ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮ ದೇಶ ಸಂಪ್ರದಾಯ, ಸಂಸ್ಕೃತಿಯ ದೇಶ. ನಮ್ಮ ದೇಶದಲ್ಲಿ ಬಹು ಸಂಸ್ಕೃತಿ ಇದೆ. ವಿವಿಧ ಜಾತಿ, ಧರ್ಮಗಳಿವೆ. ಪ್ರಪಂಚದ ಯಾವುದೇ ದೇಶದಲ್ಲಿ ಇಷ್ಟು ಜಾತಿ, ಸಂಪ್ರದಾಯ ಇಲ್ಲ. ಕುವೆಂಪು ಹೇಳಿದಂತೆ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲಾ ಧರ್ಮ, ಜಾತಿಯವರು ಒಟ್ಟಾಗಿ ಬದುಕಿದ್ದು ಭಾರತ ದೇಶ ಜಾತ್ಯಾತೀತ ದೇಶ ಎಂದರು

- ಗುಬ್ಬಿಗಾ ಗ್ರಾಮದ ವಗ್ಗಡೆ ಕಲ್ಲಿನಲ್ಲಿ 52 ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಭಾರತ ಧಾರ್ಮಿಕ ತಳಹದಿಯ ಮೇಲೆ ನಿಂತಿರುವ ದೇಶವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಅಭಿಪ್ರಾಯ ಪಟ್ಟರು.

ಶುಕ್ರವಾರ ತಾಲೂಕಿನ ಗುಬ್ಬಿಗಾ ಗ್ರಾಮದ ವಗ್ಗಡೆ ಕಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ 52 ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮ ದೇಶ ಸಂಪ್ರದಾಯ, ಸಂಸ್ಕೃತಿಯ ದೇಶ. ನಮ್ಮ ದೇಶದಲ್ಲಿ ಬಹು ಸಂಸ್ಕೃತಿ ಇದೆ. ವಿವಿಧ ಜಾತಿ, ಧರ್ಮಗಳಿವೆ. ಪ್ರಪಂಚದ ಯಾವುದೇ ದೇಶದಲ್ಲಿ ಇಷ್ಟು ಜಾತಿ, ಸಂಪ್ರದಾಯ ಇಲ್ಲ. ಕುವೆಂಪು ಹೇಳಿದಂತೆ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲಾ ಧರ್ಮ, ಜಾತಿಯವರು ಒಟ್ಟಾಗಿ ಬದುಕಿದ್ದು ಭಾರತ ದೇಶ ಜಾತ್ಯಾತೀತ ದೇಶ ಎಂದರು.

ಪ್ರತಿಯೊಬ್ಬರಿಗೂ ಕಷ್ಟ, ಸುಖಗಳು ಬರುತ್ತದೆ. ಕಷ್ಟ ಬಂದಾಗ ಮಾತ್ರ ದೇವಸ್ಥಾನಕ್ಕೆ ಹೋಗದೆ ಸುಖ ಬಂದಾಗಲೂ ದೇವರನ್ನು ಮರೆಯದೆ ಪ್ರತಿ ನಿತ್ಯ ದೇವಸ್ಥಾನಕ್ಕೆ ಹೋಗಬೇಕು. ದೇವಸ್ಥಾನಕ್ಕೆ ಹೋಗುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ. ಈಗಾಗಲೇ ವಗ್ಗಡೆ ಕಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಸರ್ಕಾರದಿಂದ ₹5 ಲಕ್ಷ ಅನುದಾನ ನೀಡಿದ್ದೇನೆ. ನಾನು ವೈಯ್ಯಕ್ತಿಕವಾಗಿ ಅಭಿವೃದ್ದಿಗಾಗಿ ಮತ್ತೆ ₹5 ಲಕ್ಷ ನೀಡುತ್ತೇನೆ ಎಂದು ಭರವಸೆ ನೀಡಿದರು.

ಅರ್ಚಕ ಪ್ರಕಾಶ್ ಭಟ್ ಮಾತನಾಡಿ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಶ್ರದ್ಧೆ, ಭಾವ ಇದ್ದರೆ ಭಕ್ತಿ ಬರಲಿದೆ. ಭಕ್ತಿ ಇದ್ದರೆ ಶಕ್ತಿ ಇರುತ್ತದೆ. ದೇವಸ್ಥಾನ ಎಂದರೆ ವಿಶೇಷವಾಗಿ ಆರೋಗ್ಯಕೇಂದ್ರ, ಯೋಗ ಕೇಂದ್ರ, ಶಕ್ತಿ ಕೇಂದ್ರ, ಜ್ಞಾನ ಕೇಂದ್ರವಿದ್ದಂತೆ. ಹಿಂದೂ ಸಂಪ್ರದಾಯದಲ್ಲಿ 64 ವೃತ್ತಗಳಿವೆ. ವಗ್ಗಡೆ ಕಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಕಳೆದ 52 ವರ್ಷದಿಂದಲೂ ದೀಪೋತ್ಸವ ನಡೆಯುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ವಗ್ಗಡೆ ಕಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಅರ್ಚಕ ಸುರೇಂದ್ರ ಗುರು ಸ್ವಾಮಿಗಳನ್ನು ಸನ್ಮಾನಿಸಲಾಯಿತು. ಕಳೆದ 52 ವರ್ಷದಿಂದಲೂ ದೀಪೋತ್ಸವ ನಡೆಸಿಕೊಂಡು ಬರುತ್ತಿದ್ದ ಹಿಂದಿನ 51 ವರ್ಷದ ಅಯ್ಯಪ್ಪಸ್ವಾಮಿ ಸೇವಾ ಸಂಘದ ಅಧ್ಯಕ್ಷರಿಗೆ ಅಭಿನಂದಿಸಲಾಯಿತು. ಸಭೆ ಅಧ್ಯಕ್ಷತೆಯನ್ನು ವಗ್ಗಡೆ ಕಲ್ಲು ಅಯ್ಯಪ್ಪಸ್ವಾಮಿ ಸೇವಾ ಸಂಘದ ಅಧ್ಯಕ್ಷ ಎಚ್.ಸಿ.ಸುಧಾಕರ್ ವಹಿಸಿದ್ದರು. ಅತಿಥಿಗಳಾಗಿ ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ನಾಗರತ್ನ,ಉಪಾಧ್ಯಕ್ಷ ಡಿ.ಶಂಕರ್,ಗ್ರಾಪಂ ಮಾಜಿ ಅಧ್ಯಕ್ಷ ಮನೋಹರ್ ಇದ್ದರು. ಆದರ್ಶ ಬಿ ಗೌಡ ಸ್ವಾಗತಿಸಿದರು. ಗೋಪಿ ನಿರೂಪಿಸಿದರು. ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ 6.30 ರಿಂದ ತಾಲಪ್ಪೋಲಿ ಮೆರವಣಿಗೆ, ಕೇರಳ ಮಾದರಿ ಚಂಡೆ ನೃತ್ಯ, ಭಜನೆ ಸಮೇತ ನೃತ್ಯ,ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಠಾರೋತ್ಸವ: ಚೆಲುವನಾರಾಯಣಸ್ವಾಮಿಗೆ ಪುಷ್ಪಾಲಂಕಾರ ಸೇವೆ
ಹಿಪ್ಪು ನೇರಳೆ ಮತ್ತು ರೇಷ್ಮೆ ಲಾಭದಾಯಕ ಬೆಳೆಗಳು