ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತದ್ದು: ತಹಸೀಲ್ದಾರ ಶಂಕರ ಗೌಡಿ

KannadaprabhaNewsNetwork |  
Published : Jun 22, 2025, 01:19 AM IST
ಮುಂಡಗೋಡ: ತಹಸೀಲ್ದಾರ ಶಂಕರ ಗೌಡಿ ಶನಿವಾರ ಇಲ್ಲಿಯ ಮಹಾ ಗಣಪತಿ ದೇವಾಲಯ ಸಭಾಂಗಣದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಆರೋಗ್ಯದ ಭಂಡಾರವಾಗಿರುವ ಯೋಗವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ನಮ್ಮ ಭಾರತ ದೇಶಕ್ಕೆ ಸಲ್ಲುತ್ತದೆ

ಮುಂಡಗೋಡ: ಆರೋಗ್ಯದ ಭಂಡಾರವಾಗಿರುವ ಯೋಗವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ನಮ್ಮ ಭಾರತ ದೇಶಕ್ಕೆ ಸಲ್ಲುತ್ತದೆ ಎಂದು ಮುಂಡಗೋಡ ತಹಸೀಲ್ದಾರ ಶಂಕರ ಗೌಡಿ ಹೇಳಿದರು.

ಶನಿವಾರ ಇಲ್ಲಿಯ ಮಹಾ ಗಣಪತಿ ದೇವಾಲಯ ಸಭಾಂಗಣದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹಿಂದೂ ತತ್ವಶಾಸ್ತ್ರದ ಹಲವಾರು ಪ್ರಾಚೀನ ಗ್ರಂಥಗಳಲ್ಲಿ ಯೋಗದ ಬಗ್ಗೆ ಉಲ್ಲೇಖವಿದ್ದು, ಯೋಗ ಎಂದರೇನು ಎಂದು ವ್ಯಾಖ್ಯಾನಿಸಲಾಗಿದೆ. ಸ್ವಾಮಿ ವಿವೇಕಾನಂದರ ಪ್ರಕಾರ ಮನಸ್ಸಿನ ವಿವಿಧ ಉಕ್ತಿಗಳನ್ನು ನಿಗ್ರಹಿಸುವುದು ಯೋಗ ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಷ್ಟಾಂಗ ಯೋಗಗಳಿಗೆ ಮಹತ್ವ ನೀಡದೇ ಕೇವಲ ಆಸನಗಳಿಗೆ ಮಾತ್ರ ಮಹತ್ವ ನೀಡಲಾಗುತ್ತಿದೆ. ಅಷ್ಟಾಂಗ ಯೋಗದಲ್ಲಿ ದ್ಯಾನ, ಪ್ರಾಣಾಯಾಮ, ಆಸನ, ಪ್ರತ್ಯಾಹಾರ ಸೇರಿದಂತೆ ೮ ರೀತಿಯ ವಿಷಯಗಳಿವೆ. ಸರ್ವ ಅಷ್ಟಾಂಗಗಳಿಗೂ ಮಹತ್ವ ನೀಡಬೇಕೆಂಬುವುದು ನಮ್ಮ ಅಶಯವಾಗಿದೆ. ಬೌದ್ಧ ಪರಂಪರೆಯಲ್ಲಿ ಕೂಡ ಯೋಗಕ್ಕೆ ತುಂಬ ಮಹತ್ವ ನೀಡಲಾಗಿದೆ. ಯೋಗದಿಂದ ಆರೋಗ್ಯ ಸುಧಾರಣೆಯಿಂದ ಹಿಡಿದು ಮೋಕ್ಷದವರೆಗೆ ಹಲವು ಲಾಭವಿರುವ ಬಗ್ಗೆ ನಮ್ಮ ತತ್ವಶಾಸ್ತ್ರ ಮತ್ತು ಯೋಗ ದರ್ಶನ ಹೇಳಿದೆ. ಇಂತಹದೊಂದು ಕೊಡುಗೆಯನ್ನು ಭಾರತ ದೇಶ ಜಗತ್ತಿಗೆ ನೀಡಿದೆ. ಸಮಾಜದಲ್ಲಿ ನಾವು ಬೆಳೆಯುವುದಕ್ಕೂ ಯೋಗ ಸಹಕಾರಿಯಾಗಿದೆ ಎಂದರು.

ನಿವೃತ್ತ ಪ್ರಾದ್ಯಾಪಕ ಸಿದ್ದಾರೂಡ ಅಂಗಡಿ ಮಾತನಾಡಿ, ಯೋಗ ಕೇವಲ ಅನಾರೋಗ್ಯ ಇದ್ದವರಿಗೆ ಮಾತ್ರವಲ್ಲ. ಬರುವ ರೋಗವನ್ನು ತಡೆಯುವ ಶಕ್ತಿ ಯೋಗಕ್ಕಿದೆ. ದಿನದಲ್ಲಿ ಕನಿಷ್ಠ ಸಮಯವಾದರೂ ಯೋಗಕ್ಕೆ ಮೀಸಲಿಡಬೇಕು ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ್ ಪಟ್ಟಣಶೆಟ್ಟಿ ಮಾತನಾಡಿ, ಯೋಗವನ್ನು ಒಂದು ದಿನಕ್ಕೆ ಸೀಮಿತಗೊಳಿಸದೇ ನಿರಂತರವಾಗಿ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

ಮುಂಡಗೋಡ ವಲಯ ಅರಣ್ಯಾಧಿಕಾರಿ ವಾಗೀಶ ಬಾಚಿನಕೊಪ್ಪ, ಮುಂಡಗೋಡ ಠಾಣೆ ಸಿಪಿಐ ರಂಗನಾಥ ನೀಲಮ್ಮನವರ, ಯೋಗ ಶಿಕ್ಷಕ ಮಹೇಶ ಹಾವಣಗಿ, ಸಂಗೀತ ಶಿಕ್ಷಕರಾದ ಭಾರತಿ ಗೋಕರ್ಣ, ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ, ಗುರು ಕಾಮತ, ಜೋಳದ, ಚಮನಸಾಬ ಸುರ್ಕೋಡ, ಗುರು ಕಾಮತ, ನಾರಾಯಣ ರಾಥೋಡ, ಶಿವಾನಂದ ವಾಲಿಶೆಟ್ಟರ ಉಪಸ್ಥಿತರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ