ಯೋಗಾಭ್ಯಾಸದಿಂದ ದೈಹಿಕ, ಮಾನಸಿಕ ಆರೋಗ್ಯ

KannadaprabhaNewsNetwork |  
Published : Jun 22, 2025, 01:19 AM IST
ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೌಭಾಗ್ಯ ಬುಷೇರ್ | Kannada Prabha

ಸಾರಾಂಶ

ದೈನಂದಿನ ಕೆಲಸಗಳಲ್ಲಿ ನಿರತರಾಗುವ ನಾವುಗಳೆಲ್ಲರೂ ಮಾನಸಿಕ ನೆಮ್ಮದಿ ಪಡೆಯಲು, ಆರೋಗ್ಯವಂತರಾಗಿರಲು ಪ್ರತಿದಿನ ಯೋಗಾಭ್ಯಾಸ, ಧ್ಯಾನ ಹಾಗೂ ವ್ಯಾಯಾಮಗಳನ್ನು ಮಾಡಬೇಕು. ಆಗ ಉತ್ತಮ ಆರೋಗ್ಯ ನಮ್ಮದಾಗಲಿದೆ ಎಂದು ಸ್ಥಳೀಯ ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಸೌಭಾಗ್ಯ ಬುಷೇರ್ ಹೇಳಿದ್ದಾರೆ.

- ವಿಶ್ವ ಯೋಗ ದಿನಾಚರಣೆಯಲ್ಲಿ ನ್ಯಾ.ಸೌಭಾಗ್ಯ ಬುಷೇರ್‌ ಅಭಿಮತ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ದೈನಂದಿನ ಕೆಲಸಗಳಲ್ಲಿ ನಿರತರಾಗುವ ನಾವುಗಳೆಲ್ಲರೂ ಮಾನಸಿಕ ನೆಮ್ಮದಿ ಪಡೆಯಲು, ಆರೋಗ್ಯವಂತರಾಗಿರಲು ಪ್ರತಿದಿನ ಯೋಗಾಭ್ಯಾಸ, ಧ್ಯಾನ ಹಾಗೂ ವ್ಯಾಯಾಮಗಳನ್ನು ಮಾಡಬೇಕು. ಆಗ ಉತ್ತಮ ಆರೋಗ್ಯ ನಮ್ಮದಾಗಲಿದೆ ಎಂದು ಸ್ಥಳೀಯ ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಸೌಭಾಗ್ಯ ಬುಷೇರ್ ಹೇಳಿದರು.

ಶನಿವಾರ ಬೆಳಗ್ಗೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಪತಾಂಜಲಿ ಮತ್ತು ಚನ್ನಮ್ಮಾಜಿ ಯೋಗ ಕೇಂದ್ರ, ಲಯನ್ಸ್ ಕ್ಲಬ್, ಶ್ರೀ ದೈವ ಸಂಸ್ಕೃತಿ ಪ್ರತಿಷ್ಠಾನ ಆಶ್ರಯದಲ್ಲಿ ವಿಶ್ವ ಯೋಗ ದಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಪ್ರಸ್ತುತ ಬದುಕಿನಲ್ಲಿ ಹಲವಾರು ಒತ್ತಡಗಳ ಮಧ್ಯೆ ಜೀವಿಸುತ್ತಿದ್ದೇವೆ. ತಮಗಾಗಿ ಒಂದಿಷ್ಟು ಸಮಯ ಇಟ್ಟುಕೊಂಡು ಯೋಗ, ಧ್ಯಾನ, ವ್ಯಾಯಾಮ ಮಾಡಬೇಕು. ಇದರಿಂದ ಕಾಯಿಲೆಗಳು ತಪ್ಪುತ್ತವೆ ಎಂದು ಹೇಳಿದರು.

ಬ್ರಹ್ಮಕುಮಾರಿ ಸಮಾಜದ ತಾರಕ್ಕ ಮಾತನಾಡಿ, ಯೋಗ ಮತ್ತು ಧ್ಯಾನ ಎನ್ನುವುದು ಉತ್ತಮವಾದ ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಸಾಧನವಾಗಿದೆ. ಮಾನಸಿಕ ಕಾಯಿಲೆಗಳಿಗೆ ಮದ್ದಾಗಬಲ್ಲ ಯೋಗಕಲೆಯ ಮಹತ್ವ ತಿಳಿಯಲು ಅಂತರ ರಾಷ್ಟ್ರಿಯ ಯೋಗ ದಿನಾಚರಣೆ ಜಾರಿಗೊಂಡಿದೆ ಎಂದರು.

ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ.ರಾಜಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶರಾದ ಮಹಾಲಕ್ಷ್ಮೀ, ತಹಸೀಲ್ದಾರ್ ಎನ್.ಜೆ.ನಾಗರಾಜ್, ತಾ.ಪಂ ಕಾರ್ಯನಿರ್ವಾಣಾಧಿಕಾರಿ ಬಿ.ಕೆ.ಉತ್ತಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್, ಪೊಲೀಸ್ ಉಪಾಧೀಕ್ಷಕ ಸ್ಯಾಮ್ ವರ್ಗಿಸ್, ಆರ್.ಎಫ್.ಒ, ಶ್ವೇತಾ, ಪತಂಜಲಿ ಯೋಗ ಕೇಂದ್ರದ ಅಧ್ಯಕ್ಷ ವಸಂತ್ ಕುಮಾರ್, ಚನ್ನಮ್ಮಾಜಿ ಯೋಗ ಕೇಂದ್ರದ ಅಧ್ಯಕ್ಷ ಜಯಣ್ಣ, ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್, ದೈವ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಬೂದಿ ಸ್ವಾಮಿ ಹಿರೇಮಠ, ಪಟ್ಟಣದ ನಾಗರೀಕರು ಭಾಗವಹಿಸಿದ್ದರು.

- - -

-21ಕೆಸಿಎನ್‌ಜಿ1.ಜೆಪಿಜಿ:

ಚನ್ನಗಿರಿ ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನ ಕಾರ್ಯಕ್ರಮ ಉದ್ಘಾಟನೆಯನ್ನು ನ್ಯಾಯಾಧೀಶೆ ಸೌಭಾಗ್ಯ ಬುಷೇರ್ ನೆರವೇರಿಸಿದರು.

- 21ಕೆಸಿಎನ್‌ಜಿ2: ಚನ್ನಗಿರಿಯಲ್ಲಿ ಯೋಗ ದಿನಾಚರಣೆಯಲ್ಲಿ ನಾಗರಿಕರು ಯೋಗಭ್ಯಾಸ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ