ಸನಾತನ ಹಿಂದುತ್ವದಿಂದ ಭಾರತ ಸುಭದ್ರ

KannadaprabhaNewsNetwork |  
Published : Sep 15, 2025, 01:01 AM IST
ಗದಗ ವೀರಶ್ವವ ಲೈಬ್ರರಿ ಬಳಿಯಲ್ಲಿ ಶ್ರೀಸುದರ್ಶನ ಚಕ್ರ ಯುವ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾದ ಹಿಂದೂ ಮಹಾಗಣಪತಿ ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಧರ್ಮ ಸಭೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. | Kannada Prabha

ಸಾರಾಂಶ

ಮತಾಂತರ ಭಯೋತ್ಪಾದಕತೆ ಲವ್ ಜಿಹಾದ್‌ದಂತ ದುಷ್ಕೃತ್ಯಗಳಿಂದ ದೇಶ ಗೆಲ್ಲುವ ಪ್ರಯತ್ನಗಳು ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತಿವೆ

ಗದಗ: ಬೇರೆ ಮತ-ಪಂಥಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿಯೂ ಸಹ ಸನಾತನ ಹಿಂದೂ ಧರ್ಮದ ಬೇರುಗಳು ಗಟ್ಟಿಗೊಳ್ಳುತ್ತಾ ಸಾಗಿರುವುದಕ್ಕೆ ಹಿಂದೂ ಧರ್ಮದ ಕೊಡುಗೆ ಮತ್ತು ಹಿಂದೂ ಹೋರಾಟಗಾರರ ಅಪ್ರತಿಮ ಹೋರಾಟ ಕಾರಣವಾಗಿದೆ ಎಂದು ಹಿಂದೂಪರ ಹೋರಾಟಗಾರ ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.

ನಗರದ ವೀರಶ್ವವ ಲೈಬ್ರರಿ ಬಳಿಯಲ್ಲಿ ಶ್ರೀ ಸುದರ್ಶನ ಚಕ್ರ ಯುವ ಮಂಡಳಿಯಿಂದ ಪ್ರತಿಷ್ಠಾಪಿಸಲಾದ ಹಿಂದೂ ಮಹಾಗಣಪತಿ ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಧರ್ಮ ಸಭೆ ಉದ್ದೇಶಿಸಿ ಮಾತನಾಡಿದರು.

ಮತಾಂತರ ಭಯೋತ್ಪಾದಕತೆ ಲವ್ ಜಿಹಾದ್‌ದಂತ ದುಷ್ಕೃತ್ಯಗಳಿಂದ ದೇಶ ಗೆಲ್ಲುವ ಪ್ರಯತ್ನಗಳು ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತಿವೆ. ಭಾರತವನ್ನು ಅಭದ್ರಗೊಳಿಸುವ ಶಕ್ತಿಗಳ ಪ್ರಯತ್ನ ಹಿಂದುತ್ವದ ಘಟ್ಟಿತನದಿಂದ ನಿರಂತರ ವಿಫಲವಾಗುತ್ತಿದೆ. ಆದರೆ ಈ ದೇಶದಲ್ಲಿ ಹಿಂದುಗಳ ಸರ್ವನಾಶ ಮತ್ತು ಗುಡಿಗುಂಡಾರಗಳ ಧ್ವಂಸಕ್ಕೆ ಕಾರಣನಾದ ದುರುಳ ಔರಂಗಜೇಬ್‌ ಇಂದು ಇಲ್ಲಿನ ಕೆಲವರಿಗೆ ಪ್ರೇರಣೆಯಾಗಿದ್ದಾನೆ ಇಂತವರಿಗೆ ಕುಮುಕ್ಕು ನೀಡುವವರಲ್ಲಿ ಕೆಲವರು ಹಿಂದುಗಳು ಸೇರಿಕೊಂಡಿರುವುದು ವಿಪರ್ಯಾಸದ ಸಂಗತಿ ಆಗಿದೆ.

ಯುದ್ಧ ಭೂಮಿಯಲ್ಲಿ ಬೋಧನೆಯಾದ ಭಗವದ್ಗೀತೆ ಸರ್ವಶ್ರೇಷ್ಠ ಗ್ರಂಥವಾಗಿದ್ದು, ಶ್ರೀಕೃಷ್ಣ ಅರ್ಜುನನಿಗೆ ಗೀತೆ ಬೋಧಿಸುವ ಅಂದಿನ ಕಾಲದಲ್ಲೂ ಸಹ ಸನಾತನ ಹಿಂದೂ ಧರ್ಮವಿತ್ತು ಎನ್ನುವುದಕ್ಕೆ ಸಾಕ್ಷೀಕರಣವಾಗಿದೆ ಹಿಂಡವಿ ಸಾಮ್ರಾಜ್ಯ ಸ್ಥಾಪಕ ಶಿವಾಜಿ ಮಹಾರಾಜ್ ಹಾಗೂ ಸ್ವಾಮಿ ವಿವೇಕಾನಂದರು ಹಿಂದುತ್ವದ ಪ್ರತೀಕವಾಗಿದ್ದಾರೆ ಭಾರತದಲ್ಲಿ ಇಂದು ಜನರ ಮನಸ್ಥಿತಿ ನಾಯಕತ್ವ ಇಂದು ಬದಲಾವಣೆಯಾಗಿದೆ. ಭಾರತವು ಸಹ ಬದಲಾವಣೆಯಾಗಿದೆ ಇಂದು ಬೇಡುವ ಸ್ಥಿತಿಯಲ್ಲಿ ಭಾರತವಿಲ್ಲ ನಾವೆಲ್ಲ ಇಂದು ನವ ಭಾರತದ ಕಾಲಘಟ್ಟದಲ್ಲಿದ್ದೇವೆ ದುಷ್ಕೃತ್ಯಗಳಿಗೆ ತಕ್ಕ ಉತ್ತರ ನೀಡುವ ಸ್ಥಿತಿಯಲ್ಲಿ ಸುಭದ್ರ ಭಾರತ ನಮ್ಮೆದುರಿಗಿದೆ. ಧರ್ಮದ ರಕ್ಷಣೆ ಮತ್ತು ಸಮೃದ್ಧ ಸದೃಢ ಭಾರತದ ಕನಸು ನನಸಾಗಿಸುವಲ್ಲಿ ಹಿಂದೂ ಮಹಾಗಣಪತಿ ಪ್ರೇರಕ ಶಕ್ತಿಯಾಗಲಿದೆ ಎಂದರು.

ಈ ವೇಳೆ ಹಿಂದೂ ಮಹಾಗಣಪತಿ ಮಂಡಳಿಯ ಗೌರವಾಧ್ಯಕ್ಷ ಶ್ರೀಕಾಂತ ಖಟವಟೆ, ಅಧ್ಯಕ್ಷ ರವಿರಾಜ ಮಾಳೆಕೊಪ್ಪಮಠ, ರಾಘವೇಂದ್ರ ಹಬೀಬ, ಎಸ್‌.ಎಚ್. ಶಿವನಗೌಡ, ರಾಜು ಕುರಡಗಿ, ಶ್ರೀಪತಿ ಉಡುಪಿ, ಸುಧೀರ್ ಕಾಟಿಗರ ಮುಂತಾದವರು ಇದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ