ಸವಿತಾ ಸಮಾಜ ಕಾಯಕ ತತ್ವಕ್ಕೆ ಮಾದರಿ: ಕೃಷ್ಣಗೌಡ

KannadaprabhaNewsNetwork |  
Published : Sep 15, 2025, 01:01 AM IST
ಕಾರ್ಯಕ್ರಮದಲ್ಲಿ ಕೃಷ್ಣಗೌಡ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಯಾವುದೇ ವೃತ್ತಿ ಕೀಳಲ್ಲ, ಕಾಯಕದಲ್ಲಿ ಶ್ರೇಷ್ಠತೆ ಕಾಣಬೇಕಾದರೆ ಶ್ರದ್ಧೆ, ಪ್ರಾಮಾಣಿಕತೆ ಇರಬೇಕು.

ಗದಗ: ಸವಿತಾ ಸಮಾಜವು ನೈಜ ಕಾಯಕ ವರ್ಗವಾಗಿದ್ದು, ಕಾಯಕದಲ್ಲಿ ಕೈಲಾಸ ಕಾಣುವ ಶ್ರಮಿಕರಾಗಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ನಗರದಲ್ಲಿ ಜಿಲ್ಲಾ ಸವಿತಾ ಸಮಾಜದಿಂದ ನಡೆದ ಕ್ರಿಕೆಟ್ ಟೂರ್ನಾಮೆಂಟ್‌ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕತ ತತ್ವ ನಿಜವಾಗಿ ಪಾಲಿಸುತ್ತಿರುವ ಸಮುದಾಯ ಸವಿತಾ ಸಮಾಜ. ಜಗತ್ತಿಗೆ ಅತ್ಯಂತ ದೊಡ್ಡ ಕೊಡುಗೆ ಈ ಸಮಾಜ ನೀಡಿದೆ ಎಂದರು.

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ವೃತ್ತಿ ಬಿಡಬಾರದು, ಯಾವುದೇ ವೃತ್ತಿ ಕೀಳಲ್ಲ, ಕಾಯಕದಲ್ಲಿ ಶ್ರೇಷ್ಠತೆ ಕಾಣಬೇಕಾದರೆ ಶ್ರದ್ಧೆ, ಪ್ರಾಮಾಣಿಕತೆ ಇರಬೇಕು. ಸೌಂದರ್ಯ ಸಮಾಜ ನಿರ್ಮಾಣದಲ್ಲಿ ವೇದಗಳ ಕಾಲದಿಂದಲೂ ಕ್ಷೌರ ಸೇವೆ ಮಾಡುತ್ತಿರುವ ಸವಿತಾ ಸಮಾಜದ ಕಾರ್ಯ ಶ್ಲಾಘನೀಯ ಎಂದರು.

ನನ್ನ ವೃತ್ತಿ ನನಗೆ ಶ್ರೇಷ್ಠವೆಂಬ ಮನೋಭಾವ ಸಮಾಜದ ಯುವಕರಲ್ಲಿ ಬೆಳೆಯಬೇಕು. ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ನೇತೃತ್ವದ ತಂಡವು ಸಮಾಜದ ಅಭಿವೃದ್ಧಿಗಾಗಿ ಅನೇಕ ರೀತಿಯಲ್ಲಿ ರಚನಾತ್ಮಕ ಸಭೆ ಸಮಾರಂಭ ಹಮ್ಮಿಕೊಂಡು ಸಂಘಟನೆ ಬಲವರ್ಧನೆ ಹಾಗೂ ಸಮಾಜ ಬಾಂಧವರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳು ದೊರಕಿಸಿ ಕೊಡಲು ಹಗಲು ರಾತ್ರಿಯನ್ನದೆ ಸಾಕಷ್ಟು ಸೇವೆ ಸಲ್ಲಿಸುತ್ತಿರುವುದು ಸಂತಸದ ತಂದಿದೆ ಎಂದರು.

ಈ ವೇಳೆ ಹನಮಂತಪ್ಪ ರಾಂಪೂರ, ನಾಸೀರ ಮುಲ್ಲಾ, ಪರಶುರಾಮ ರಾಂಪೂರ, ಬಾಲರಾಜ ಕೊಟೇಕಲ್ಲ, ಅಬ್ದುಲ್‌ಮುನಾಫ ಮುಲ್ಲಾ, ರಾಜು ಮಾನೆ, ದೀಪಕ ಮಾನೆ, ಪಾಂಡು ಕಾಳೆ, ವಿಕಾಸ ಕ್ಷೀರಸಾಗರ, ಸುಧೀರ ಮಾನೆ, ಪರಶುರಾಮ ಕೊಟೇಕಲ್ಲ, ಜಂಮ್ಮಣ್ಣ ಕಡಮೂರ, ರಮೇಶ ರಾಂಪೂರ, ಮಂಜುನಾಥ ಮಾನೆ, ತುಕಾರಾಮ ಮಾನೆ, ವಿಶಾಲ ಮಾನೆ, ಧಿನೇಶ ಕ್ಷೀರಸಾಗರ, ಹೇಮಂತ ವಡ್ಡೆಪಲ್ಲಿ, ಶ್ರೀನಿವಾಸ ಕೊಟೇಕಲ್ಲ, ಸುರೇಶ ಬುದೂರ, ಪರಶುರಾಮ ದಾವಣಗೇರಿ ಸೇರಿದಂತೆ ಇತರರು ಇದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ