ಆಕ್ರಮಣಗಳ ಎದುರಿಸಿ ಭಾರತ ಇಂದಿಗೂ ಅಚಲ: ಈಶ್ವರಪ್ಪ

KannadaprabhaNewsNetwork |  
Published : Sep 29, 2025, 01:04 AM IST
ಹೊನ್ನಾಳಿ ಫೋಟೋ 26ಎಚ್ಎಲ್ಐ1.ಹೊನ್ನಾಳಿ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿರುವ  ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ  ಗುರುವಾರ ರಾತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಗೋವಿನಕೋವಿ ಹಾಲಸ್ವಾಮಿ ಮಠದ  ಶ್ರೀಗಳು,ಹಾಗೂ ಹಿರೇಕಲ್ಮಠದ ಸ್ವಾಮೀಜಿಗಳು ಹಾಗೂ ಅನೇಕ ಗಣ್ಯರು ಇದ್ದರು.   | Kannada Prabha

ಸಾರಾಂಶ

ಶತಮಾನಗಳಿಂದ ಭಾರತದ ಮೇಲೆ ಪಾಶ್ಚಮಾತ್ಯರಿಂದ ಎಷ್ಟೇ ಆಕ್ರಮಣಗಳಾದರೂ ಹಿಂದೂ ಧರ್ಮ, ದೈವ, ಗುರು ಸಂಸ್ಕೃತಿಗಳ ಬಲದಿಂದ ಇಂದಿಗೂ ದೇಶ ಅಚಲವಾಗಿದೆ. ಅಭಿವೃದ್ಧಿಯಿಂದಾಗಿ ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಹೊನ್ನಾಳಿ: ಶತಮಾನಗಳಿಂದ ಭಾರತದ ಮೇಲೆ ಪಾಶ್ಚಮಾತ್ಯರಿಂದ ಎಷ್ಟೇ ಆಕ್ರಮಣಗಳಾದರೂ ಹಿಂದೂ ಧರ್ಮ, ದೈವ, ಗುರು ಸಂಸ್ಕೃತಿಗಳ ಬಲದಿಂದ ಇಂದಿಗೂ ದೇಶ ಅಚಲವಾಗಿದೆ. ಅಭಿವೃದ್ಧಿಯಿಂದಾಗಿ ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಹೊನ್ನಾಳಿ ಹಿರೇಕಲ್ಮಠದಲ್ಲಿ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ 4ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾಡಿನಾದ್ಯಂತ ಶರನ್ನವರಾತ್ರಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ. ಭಾರತೀಯರಾದ ನಾವು ಎಲ್ಲ ಕಲ್ಮಶಗಳನ್ನು ಹೊರಗೆ ಬಿಟ್ಟು ದೇವಸ್ಥಾನಗಳಲ್ಲಿ ಮಠಗಳಲ್ಲಿನ ಗುರುಗಳ ಸಮ್ಮುಖ ಧಾರ್ಮಿಕ ಆಚರಣೆಗಳು, ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದೆ. ದೇಶದ ಪ್ರಧಾನಿ ಮೋದಿಯವರ ಸಂಸ್ಕಾರ, ಇಚ್ಛಾಶಕ್ತಿಯಿಂದ ಇಂದು ಎಲ್ಲ ರಾಷ್ಟ್ರಗಳು ಭಾರತದೊಂದಿಗೆ ಇವೆ. ಆದರೆ ಪಾಕಿಸ್ತಾನ ಮಾತ್ರ ಒಬ್ಬಂಟಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗೋವಿನಕೋವಿ ಹಾಲಸ್ವಾಮಿ ಮಠದ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊನ್ನಾಳಿ ಹಿರೇಕಲ್ಮಠದಲ್ಲಿ ಪ್ರತಿವರ್ಷ ಹತ್ತು ದಿನಗಳ ಕಾಲ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಭಕ್ತರಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ದಾಸೋಹ ನೀಡುತ್ತಿದೆ ಎಂದರು.

ಸಾನ್ನಿಧ್ಯವನ್ನು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿ ಆಶೀರ್ವಚನ ನೀಡಿದರು. ಅನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರುದ್ರೇಶ್‌ ಸ್ವಾಗತಿಸಿ, ಟಿ.ಎಂ. ಬಸವರಾಜಯ್ಯ ಶಾಸ್ತ್ರಿ ನಿರೂಪಿಸಿದರು.

- - -

-26ಎಚ್ಎಲ್ಐ1:

ಶರನ್ನವರಾತ್ರಿ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ