ಕುಕನೂರು: ಭಾರತ ಒಡೆಯಲು ಹಿಂದುತ್ವ ಕೇಂದ್ರದ ಮೇಲೆ ಇಸ್ಲಾಂ ಆಕ್ರಮಣ ಮಾಡಿತು. ಆದರೆ ಹಿಂದುತ್ವದ ಶಕ್ತಿಯಿಂದ ಭಾರತ ಸಾಮರ್ಥ್ಯಶಾಲಿ ಆಗಿದೆ ಎಂಬುದನ್ನು ಕಾಣಬಹುದಾಗಿದೆ ಎಂದು ಉತ್ತರ ಕರ್ನಾಟಕದ ಕುಟುಂಬ ಪ್ರಮೋದದ ಸಂಯೋಜಕ ಡಬ್ಯೂ ನಾಗರಾಜ ಹೇಳಿದರು.
ಹಿಂದುತ್ವದಿಂದ ಸದೃಢ ಆಗುತ್ತಿರುವ ಭಾರತ ವಿಶ್ವಗುರು ಸ್ಥಾನದಿಂದ ನಾಶ ಮಾಡಲು ಇಂಟರನ್ಯಾಷನಲ್ ಕಾನ್ಪರೇನ್ಸಿ ಸಹ ಜರುಗುತ್ತಿವೆ. ಅನೇಕರು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಬೆಂಬಲವಾಗಿದ್ದಾರೆ.ಸಮೃದ್ಧ, ಸಾಮರ್ಥ್ಯಶಾಲಿ, ಸುಸಂಸ್ಕೖತ ಭಾರತ, ಶಕ್ತಿಸಾಲಿ ಭಾರತಕ್ಕೆ ಹಿಂದುಗಳು ಒಗ್ಗಟ್ಟಾಗಬೇಕು. ದುಡಿಯದಿದ್ದರೂ ಭ್ರಷ್ಟಾಚಾರದಿಂದ ಜೇಬು ತುಂಬಿಸಿಕೊಳ್ಳುವವರ ಕೊನೆ ಆಗಬೇಕು ಎಂದರು.
ಭಾರತ ನೆಲಕ್ಕೆ ವಿಷ ಹಾಕದೆ ಸಸ್ಯಶ್ಯಾಮಲೆ ಮಾಡಬೇಕು. ಮಠಗಳು ಸಂಸ್ಕೃತಿ ಪಸರಿಸಬೇಕು. ಕುಟುಂಬಗಳಲ್ಲಿ ಸಾಮರಸ್ಯ ಹೆಚ್ಚಬೇಕು. ಹರಿಜನ ದೇವಾಲಯ ಪ್ರವೇಶದಿಂದ ಮೈಲಿಗೆ ಆಗಲ್ಲ.ಆ ಭಾವ ಹೋಗಿ ಹಿಂದು ಎಂಬ ಭಾವ ಮಾತ್ರ ಬರಬೇಕು. ನಾಗರಿಕ ಸಭ್ಯತೆ ಮರೆಯಬಾರದು. ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಮಾಫೀಯಾ, ಗುಟಕಾ, ತಂಬಾಕು ಸೇವನೆ ಹೆಚ್ಚುತ್ತಿದೆ.ಇದಕ್ಕೆ ಕಡಿವಾಣ ಬೇಕು. ಹಿಂದುತ್ವದಿಂದ ಮಾತ್ರ ಭಾರತ ಸಾಮಾರ್ಥ್ಯಶಾಲಿ ಆಗುತ್ತದೆ. ಅಹಿಂದೂಗಳನ್ನು ಹತ್ತಿಕ್ಕುವ ದೀಕ್ಷೆ ತೊಡಬೇಕು ಎಂದರು.ಸ್ಥಳೀಯ ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ಸ್ವಾಮೀಜಿ, ರಾಘವಾನಂದ ಅವಧೂತ ಆಶ್ರಮದ ಶ್ರೀಆತ್ಮಾನಂದ ಭಾರತಿ ಸ್ವಾಮೀಜಿ, ಕುಕನೂರು ಹೋಬಳಿ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ದ್ಯಾಮಣ್ಣ ಜಮಖಂಡಿ ಇದ್ದರು.
ಅದ್ಧೂರಿ ಶೋಭಾಯಾತ್ರೆ:ಪಟ್ಟಣದ ಮಹಾಮಾಯಾ ದೇವಸ್ಥಾನದಿಂದ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆ ಆರಂಭವಾಯಿತು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿತು. ಮೆರವಣಿಗೆ ಮಹಿಳೆಯರು ಕುಂಭ ಹೊತ್ತು ಸಾಗಿದರು. ವಾಹನದಲ್ಲಿ ನಾಡದೇವಿ, ಗಣ್ಯರ ಭಾವಚಿತ್ರ ಮೆರವಣಿಗೆ ಹಾಗು ವಾದ್ಯ ಮೇಳ ಮೊಳಗಿದವು. ಅಪಾರ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ಎತ್ತಿ ಬಂಡಿಯಲ್ಲಿ ರಾಷ್ಟ್ರಮಾತೆಯ ಭಾವಚಿತ್ರ ಮೆರವಣಿಗೆ ಸಾಗಿತು. ಮಾಜಿ ಸಚಿವ ಹಾಲಪ್ಪ ಆಚಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ, ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ನವೀನ ಗುಳಗಣ್ಣವರ್, ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಸವರಾಜ ರಾಜೂರು, ಶಿವಲೀಲಾ ದಳವಾಯಿ, ಮಾರುತಿ ಗಾವರಾಳ, ಬಸವನಗೌಡ ತೊಂಡಿಹಾಳ, ಬಸಲಿಂಗಪ್ಪ ಭೂತೆ, ರಷೀದಸಾಬ್ ಹಣಜಗೇರಿ, ವೀರಣ್ಣ ಹುಬ್ಬಳ್ಳಿ, ಶಿವಕುಮಾರ ನಾಗಲಾಪೂರಮಠ, ಕರಬಸಯ್ಯ ಬಿನ್ನಾಳ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಅನಿಲ ಆಚಾರ್, ಮಂಜುನಾಥ ನಾಡಗೌಡ್ರು, ಬಸವರಾಜ ಹಾಳಕೇರಿ, ವಿನಾಯಕ ಯಾಳಗಿ ಇತರರಿದ್ದರು.
ಹಿಂದುತ್ವದ ಪರಿಕಲ್ಪನೆಯಿಂದ ಹಿಂದುತ್ವ ಸಮಾಜೋತ್ಸವ ಕಾರ್ಯಕ್ರಮಗಳು ಭಾರತಕ್ಕೆ ಶಕ್ತಿ ತುಂಬುತ್ತವೆ. ಹಿಂದುಗಳಾದ ನಮಗೆ ಹಿಂದುತ್ವದ ಪೂರ್ಣತೆ ಅರಿವು ಮುಖ್ಯ. ರಾಷ್ಟ್ರಧರ್ಮ ಹಿಂದುತ್ವ ಆಗಿದೆ. ಅದಕ್ಕಾಗಿ ನಾವು ಸದಾ ಬದ್ಧರಾಗಿರಬೇಕು ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ತಿಳಿಸಿದ್ದಾರೆ.