9ರಂದು ಭಾರತದ ಅತಿದೊಡ್ಡ ಮಣಿಪಾಲ ಮ್ಯಾರಥಾನ್‌-2025

KannadaprabhaNewsNetwork |  
Published : Feb 02, 2025, 01:00 AM IST
1ಮಾಹೆ | Kannada Prabha

ಸಾರಾಂಶ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿದ್ಯಾರ್ಥಿಗಳೇ ಆಯೋಜಿಸುವ ಭಾರತದ ಅತಿದೊಡ್ಡ, ಮಣಿಪಾಲ್‌ ಮ್ಯಾರಥಾನ್‌-2025 ಫೆ.9ರಂದು ನಡೆಯಲಿದೆ. ಈ ಬಾರಿಯ 7ನೇ ಅವೃತ್ತಿಯ ಈ ಮ್ಯಾರಾಥಾನ್‌ನಲ್ಲಿ ವಿಶ್ವಾದ್ಯಂತದಿಂದ 20,000 ಓಟಗಾರರು ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿದ್ಯಾರ್ಥಿಗಳೇ ಆಯೋಜಿಸುವ ಭಾರತದ ಅತಿದೊಡ್ಡ, ಮಣಿಪಾಲ್‌ ಮ್ಯಾರಥಾನ್‌-2025 ಫೆ.9ರಂದು ನಡೆಯಲಿದೆ. ಈ ಬಾರಿಯ 7ನೇ ಅವೃತ್ತಿಯ ಈ ಮ್ಯಾರಾಥಾನ್‌ನಲ್ಲಿ ವಿಶ್ವಾದ್ಯಂತದಿಂದ 20,000 ಓಟಗಾರರು ಭಾಗವಹಿಸಲಿದ್ದಾರೆ.ಈ ಬಗ್ಗೆ ಮಾಹೆಯ ಸಹಕುಲಾಧಪತಿ ಡಾ. ಎಚ್.ಎಸ್. ಬಲ್ಲಾಳ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಬಾರಿಯ ಮ್ಯಾರಥಾನ್‌ ‘ಚಲನೆಯಲ್ಲಿ ನಾವೀನ್ಯತೆ: ಆರೋಗ್ಯ ಮತ್ತು ಸದೃಢತೆಗಾಗಿ ತಂತ್ರಜ್ಞಾನದ ಅಳವಡಿಕೆ’ ಎಂಬ ಘೋಷ ವಾಕ್ಯವನ್ನು ಅಳವಡಿಸಿಕೊಂಡಿದೆ ಎಂದರು.ವರ್ಷದಿಂದ ವರ್ಷಕ್ಕೆ ಮಣಿಪಾಲ್‌ ಮ್ಯಾರಥಾನ್‌ ವಿಶ್ವಪ್ರಸಿದ್ಧಿಯಾಗುತ್ತಿದ್ದು, ಈ ವರ್ಷ ಯುಎಸ್‌ಎ, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಟರ್ಕಿ, ಇಥಿಯೋಪಿಯಾ, ಕೀನ್ಯಾ, ನಮೀಬಿಯಾ, ಜಪಾನ್, ಉಗಾಂಡಾ, ಮಲಾವಿ, ಕಾಂಗೋ, ಘಾನಾ, ಸುಡಾನ್, ಅಬುಧಾಬಿ, ಯುಎಇ ಮತ್ತು ಆಸ್ಟ್ರೇಲಿಯಾದಿಂದ ಓಟಗಾರರು ಆಗಮಿಸಲಿದ್ದಾರೆ.

ವಿಶೇಷ ಎಂದರೆ ಈ ಮ್ಯಾರಥಾನ್‌ನಲ್ಲಿ ಸಮರ್ಥನಂ ಟ್ರಸ್ಟ್‌ನಿಂದ 300ಕ್ಕೂ ಹೆಚ್ಚು ದೃಷ್ಟಿಹೀನರು ಮತ್ತು ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ದೈಹಿಕವಾಗಿ ಅಶಕ್ತರು ಈ ಓಟದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ. ಬಲ್ಲಾಳ್‌ ಹೇಳಿದರು.ಈ ವರ್ಷದಿಂದ ‘ಮಣಿಪಾಲ್ ಗ್ಲೋಬಲ್ ವರ್ಚುವಲ್ 5ಕೆ ರನ್’ ಆಯೋಜಿಸಲಾಗಿದೆ. ಇದರಲ್ಲಿ ಪ್ರಪಂಚದಾದ್ಯಂತದ ಓಟಗಾರರು ದೂರದಿಂದಲೇ ಭಾಗವಹಿಸಲು ಅವಕಾಶ ಇದೆ. ಇದು ಈ ಮ್ಯಾರಥಾನ್‌ನ್ನು ಇನ್ನಷ್ಟು ವಿಶ್ವವ್ಯಾಪಿಗೊಳಿಸುತ್ತದೆ ಎಂದವರು ಅಭಿಪ್ರಾಯಪಟ್ಟರು.ಸುದ್ದಿಗೋಷ್ಠಿಯಲ್ಲಿ ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ಡಾ.ಶರತ್‌ ರಾವ್‌, ಡಾ.ನಾರಾಯಣ ಸಭಾಹಿತ್‌, ಕುಲಸಚಿವ ಡಾ.ಗಿರಿಧರ ಕಿಣಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ