ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪುರಸಭೆ, ತಾಲೂಕು ಆಡಳಿತದಿಂದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದ ಸಮಿತಿ ನಿರಂತರ ಶ್ರಮದ ಫಲವಾಗಿ ವಿಶ್ವವೇ ಬೆರಗಾಗಬಹುದಾದ ಸಂವಿಧಾನ ನಮ್ಮಲ್ಲಿದೆ ಎಂದು ಬಣ್ಣಿಸಿದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗಣರಾಜ್ಯೋತ್ಸವ ಪ್ರತಿಯೊಬ್ಬ ಭಾರತೀಯರಿಗೂ ಮಹತ್ವ ಮತ್ತು ಪವಿತ್ರ ದಿನವಾಗಿದೆ. ಏಕರೂಪ ಕಾನೂನು ಹಾಗೂ ಆಡಳಿತ ವ್ಯವಸ್ಥೆ ಜಾರಿಗೊಳಿಸುವ ಮೂಲಕ ದೇಶದ ಏಕತೆ ಬಲಪಡಿಸಲು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಭಾರತ ಸಂವಿಧಾನ ಕರಡು ರಚನಾ ಸಮಿತಿ ರಚಿಸಿ ಎರಡು ವರ್ಷಗಳ ಬಳಿಕ ಸಂವಿಧಾನ ಅಂಗೀಕರಿಸಲಾಯಿತು ಎಂದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಲೀಲಾವತಿ (ಆಡಳಿತ), ನರಸಿಂಹರಾಜು (ಶಿಕ್ಷಣ), ಡಾ. ವೈ.ಕೃಷ್ಣಪ್ಪ (ಸಾಹಿತ್ಯ), ಉಷಾ (ಆರೋಗ್ಯ), ಭಾಗ್ಯಮ್ಮ, ವೆಂಕಟೇಶ್ (ಸಮಾಜಸೇವೆ), ಬಿ.ಎಸ್.ಸುನೀಲ್ (ಮಾಧ್ಯಮ), ವಿ.ಸಿ.ಉಮೇಶ್(ಕೃಷಿ), ಸಿ.ಎಂ.ಮರಿಸ್ವಾಮಿ (ನಿವೃತ್ತಯೋಧ), ದೇವರಾಜು (ರಂಗಭೂಮಿ ಕಲಾವಿದ), ಕ್ಯಾತಘಟ್ಟ ಗಿರೀಶ್ (ಸಹಕಾರ) ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.
ರಾಷ್ಟ್ರಮಟ್ಟದ ಥ್ರೋಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ತಾಲೂಕು ಆಡಳಿತದ ವತಿಯಿಂದ ಅಭಿನಂದಿಸಲಾಯಿತು. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಶ್ರೀಉಗ್ರನರಸಿಂಹಸ್ವಾಮಿ ದೇವಾಲಯದಿಂದ ಹೊರಟ ವಿದ್ಯಾರ್ಥಿಗಳ ಪಥಸಂಚಲನ ಪಟ್ಟಣದ ಪೇಟೆಬೀದಿ ಮೂಲಕ ತೆರಳಿ ಕ್ರೀಡಾಂಗಣವನ್ನು ತಲುಪಿತು. ವಿವಿಧ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿ ಕಾರ್ಯಕ್ರಮಗಳು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು.
ಈ ವೇಳೆ ತಾಪಂ ಇಒ ರಾಮಲಿಂಗಯ್ಯ, ಬಿಇಒ ಎಸ್.ಬಿ.ಧನಂಜಯ, ಪೌರಾಯುಕ್ತೆ ಎಸ್.ಎನ್.ರಾಧಿಕಾ, ವೃತ್ತ ಆರಕ್ಷಕ ನಿರೀಕ್ಷಕ ಎಚ್.ಎಸ್.ನವೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶಂಕರೇಗೌಡ, ತಾಲೂಕು ಅಧ್ಯಕ್ಷ ಚಲುವರಾಜು, ಶಿಕ್ಷಕರಾದ ಆನಂದ್, ಚಂದ್ರು, ಚುನಾವಣಾ ಸಹಾಯಕ ಅಧಿಕಾರಿ ಪವನ್‌ಕುಮಾರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.