ಕನ್ನಡಪ್ರಭ ವಾರ್ತೆ ಶಿಕಾರಿಪುರ
ತಾಲೂಕಿನ ಹಿರೇಕಲವತ್ತಿಯ ಶ್ರೀ ಮಣ್ಣು ಬಸವೇಶ್ವರ ಸಮುದಾಯ ಭವನದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ನಡೆದ ಹಿಂದೂ ರಾಷ್ಟ್ರ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಕ್ರೈಸ್ತರಿಗೆ 150 ದೇಶಗಳು, ಮುಸಲ್ಮಾನರಿಗೆ 50ಕ್ಕೂ ಹೆಚ್ಚು ದೇಶಗಳಿದ್ದು, 100 ಕೋಟಿ ಅಧಿಕ ಹಿಂದೂಗಳಿಗೆ ಸ್ವತಂತ್ರ ಹಿಂದೂ ರಾಷ್ಟ್ರವಿಲ್ಲ ಎಂಬುದು ಅತ್ಯಂತ ದುರದೃಷ್ಟಕರ ಸಂಗತಿ ಎಂದ ಅವರು, ಪುಣ್ಯ ಭೂಮಿ ಭಾರತದಲ್ಲಿ ರಾಮರಾಜ್ಯ, ಪಾಂಡವರ ಧರ್ಮರಾಜ್ಯ, ಛತ್ರಪತಿ ಶಿವಾಜಿ ಮಹಾರಾಜರ ಹಿಂದವಿ ಸ್ವರಾಜ್ಯ, ವಿಜಯನಗರ ಅರಸರ ಆಡಳಿತ ಇತಿಹಾಸದಲ್ಲಿ ದಾಖಲಾಗಿದ್ದು, ಇಂತಹ ಶ್ರೇಷ್ಟ ಭೂಮಿಯಲ್ಲಿನ ಹಿಂದೂ ದೇವಸ್ಥಾನಗಳನ್ನು ಸರ್ಕಾರೀಕರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಪಾಕಿಸ್ತಾನ ಜೈ ಘೋಷಣೆ ನಡೆಯುತ್ತದೆ, ಇದಕ್ಕೆ ಇದುವರೆಗೂ ಕಡಿವಾಣ ಇಲ್ಲದಂತಾಗಿದೆ, ಲವ್ ಜಿಹಾದ್‌ಗೆ ಯುವತಿಯರು ಬಲಿಯಾಗುತ್ತಿದ್ದು, ಇದರ ವಿರುದ್ಧ ಹಿಂದುಗಳೆಲ್ಲ ಒಂದಾಗಿ ಹೋರಾಡಬೇಕಾಗಿದೆ. ಕಳೆದ ಮೂರು ವರ್ಷಗಳಿಂದ 10ಲಕ್ಷಕ್ಕೂ ಹೆಚ್ಚು ಯುವತಿಯರು ಮತಾಂತರವಾಗಿದ್ದಾರೆ. ಇದಕ್ಕೆಲ್ಲ ಧರ್ಮ ಶಿಕ್ಷಣ ಪಡೆಯುವುದರ ಜತೆಗೆ ಧರ್ಮಾಚರಣೆಯಿಂದ ಪರಿಹಾರ ದೊರೆಯಲಿದೆ ಎಂದರು.ಸನಾತನ ಸಂಸ್ಥೆಯ ಸೌ.ಕಾವೇರಿ ರಾಯ್ಕರ್ ಮಾತನಾಡಿ, ಧರ್ಮರಕ್ಷಣೆಗಾಗಿ ಧರ್ಮಾಚರಣೆ ಮಾತ್ರ ಹಿಂದುಗಳ ಎಲ್ಲ ಸಮಸ್ಯೆಗೆ ಏಕೈಕ ಪರಿಹಾರವಾಗಿದೆ. ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ನಾನು ಹಿಂದೂ ಎಂದು ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದು, ಸನಾತನ ಧರ್ಮ ನಿತ್ಯ ನೂತನವಾಗಿದೆ, ಈ ಹಿಂದೆ ಪ್ರಪಂಚದ ಮೂಲೆ ಮೂಲೆಯಿಂದ ವಿದ್ಯೆ ಕಲಿಯಲು ಭಾರತದ ಗುರುಕುಲಗಳಿಗೆ ಬರುತ್ತಿದ್ದರು, ಇಂತಹ ಶ್ರೇಷ್ಠ ಪರಂಪರೆಯನ್ನು, ಸನಾತನ ಸಂಸೃತಿಯನ್ನು ಕೆಲವರು ಡೆಂಗ್ಯೂ ಮಲೇರಿಯಾಕ್ಕೆ ಹೋಲಿಸಿ ಅವಮಾನಿಸುವ ಪ್ರಸಂಗಗಳು ನಡೆಯುತ್ತಿವೆ ಎಂದು ವಿಷಾದಿಸಿದರು.
ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶಿವಮೊಗ್ಗ ನಗರ ಸಂಯೋಜಕ ನ್ಯಾಯವಾದಿ ರೇಖೇಶ್ ಮಾನೆ ಮಾತನಾಡಿ, ಜೀಜಾಬಾಯಿ ಪುತ್ರ ಶಿವಾಜಿ ಮಹಾರಾಜರಿಗೆ ಧರ್ಮರಕ್ಷಣೆಯ ಬೀಜವನ್ನು ಬಾಲ್ಯದಲ್ಲಿಯೇ ಬಿತ್ತಿದ್ದರು, ಇಂದು ಇಂತಹ ಶಿಕ್ಷಣದ ಅಗತ್ಯತೆ ಹೆಚ್ಚಾಗಿದ್ದು, ಮಕ್ಕಳಿಗೆ ಧರ್ಮರಕ್ಷಣೆಯ ಸಂಸ್ಕಾರದ ಮಾರ್ಗದರ್ಶನ ನೀಡಬೇಕಾಗಿದೆ, ಪಠ್ಯಪುಸ್ತಕಗಳಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯಿಂದ ರಾಷ್ಟ್ರ ಪುರುಷರ ಇತಿಹಾಸವನ್ನು ಮರೆಮಾಚುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಮಣ್ಣು ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸುದರ್ಶನ್ ನಾಯ್ಡು, ನಾಗರಾಜ್, ಉಪಾಧ್ಯಕ್ಷ ಪರಶುರಾಮ್, ಭಾಸ್ಕರ್ ನಾಯ್ಡು, ಕೃಷ್ಣಮೂರ್ತಿ, ಕಪ್ಪನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಕಾಶ್ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.