ಬಿಜೆಪಿ ಕಾರ್ಯಕರ್ತ ರಮೇಶ ಊರಿನ ಹಿತವನ್ನು ಕಾಪಾಡುವಂಥ ವ್ಯಕ್ತಿ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸುತ್ತಿದ್ದ, ಹಳೇಬೀಡು ಹೋಬಳಿಯ ಬಿಜೆಪಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದ, ಇಂಥ ಒಳ್ಳೆಯ ವ್ಯಕ್ತಿ ನಮ್ಮನ್ನಗಲಿದ್ದು ದುರ್ದೈವದ ಸಂಗತಿ. ಹಾಗಾಗಿ ಇವರ ಕುಟುಂಬಕ್ಕೆ ಸಾಂತ್ವನ ನೀಡಿ ಮಕ್ಕಳ ಮುಂದಿನ ಜೀವನಕ್ಕೆ ಧನ ಸಹಾಯ ಮಾಡಿ, ಎರಡು ಪುಟ್ಟ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಸರ್ಕಾರದ ಸೌಲಭ್ಯಗಳ ಬಗ್ಗೆ ಅಧಿಕಾರಿಗೆ ಸೂಚನೆ ನೀಡಿರುತ್ತೇನೆ. ತಕ್ಷಣವೇ ರೈತನಿಗೆ ಪರಿಹಾರ ಹಣ ಬರಲಿದೆ.
ಹಳೇಬೀಡು: ಇತ್ತೀಚೆಗೆ ಹಳೇಬೀಡು ಸಮೀಪ ಕಟ್ಟೆ ಸೋಮನಹಳ್ಳಿಯ ರಮೇಶ್ ಎಂಬುವವರು ಬ್ಯಾಂಕ್ ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಹಾಗೂ ಮಕ್ಕಳಿಗೆ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್ ೧ ಲಕ್ಷ ರು. ಗಳ ಸಹಾಯಧನ ನೀಡಿದರು.
ಬಿಜೆಪಿ ಕಾರ್ಯಕರ್ತ ರಮೇಶ ಊರಿನ ಹಿತವನ್ನು ಕಾಪಾಡುವಂಥ ವ್ಯಕ್ತಿ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸುತ್ತಿದ್ದ, ಹಳೇಬೀಡು ಹೋಬಳಿಯ ಬಿಜೆಪಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದ, ಇಂಥ ಒಳ್ಳೆಯ ವ್ಯಕ್ತಿ ನಮ್ಮನ್ನಗಲಿದ್ದು ದುರ್ದೈವದ ಸಂಗತಿ. ಹಾಗಾಗಿ ಇವರ ಕುಟುಂಬಕ್ಕೆ ಸಾಂತ್ವನ ನೀಡಿ ಮಕ್ಕಳ ಮುಂದಿನ ಜೀವನಕ್ಕೆ ಧನ ಸಹಾಯ ಮಾಡಿ, ಎರಡು ಪುಟ್ಟ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಸರ್ಕಾರದ ಸೌಲಭ್ಯಗಳ ಬಗ್ಗೆ ಅಧಿಕಾರಿಗೆ ಸೂಚನೆ ನೀಡಿರುತ್ತೇನೆ. ತಕ್ಷಣವೇ ರೈತನಿಗೆ ಪರಿಹಾರ ಹಣ ಬರಲಿದೆ. ಬ್ಯಾಂಕಿನ ಅಧಿಕಾರಿಗಳು ರೈತರಿಗೆ ತೊಂದರೆ ಕೊಡಬೇಡಿ, ರೈತನಿಗೆ ಜೀವನದಲ್ಲಿ ಒಂದು ಬಾರಿ ಲಾಭ ಸಿಕ್ಕರೆ ನಾಲ್ಕು ಬಾರಿ ನಷ್ಟವಾಗಿರುತ್ತದೆ. ರೈತರ ಆತ್ಮಹತ್ಯೆ ಜಾಸ್ತಿಯಾಗಿದೆ, ಹಾಗಾಗಿ ಬ್ಯಾಂಕಿನ ಅಧಿಕಾರಿಗಳು ಅವರ ಕುಟುಂಬವನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು ಎಂದು ಸಲಹೆ ನೀಡಿದರು.
ಕೆಪಿಎಸ್ ಕಾಲೇಜು ಅಭಿವೃದ್ಧಿಯ ಕಾರ್ಯಧ್ಯಕ್ಷ ಬಸ್ತಿಹಳ್ಳಿ ಸೋಮಶೇಖರ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.