ಕನ್ನಡಪ್ರಭ ವಾರ್ತೆ ಹರಿಹರ
ನಗರದ ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ, ಕರ್ನಾಟಕ ರತ್ನ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಸ್ಮರಣಾರ್ಥ ಗುರು ಭವನದಲ್ಲಿ ಶನಿವಾರ ಸಂಜೆ ನಡೆದ, ವಾಯ್ಸ್ ಆಫ್ ಪವರ್ ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ಸೇವೆ ಮಾಡಿದ ಸಾಧಕರನ್ನು ಸನ್ಮಾನಿಸಿ, ವಿಜೇತರಿಗೆ ಬಹುಮಾನ ವಿತರಿಸಿದ ಮಾತನಾಡಿದರು.
ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಯ ಪ್ರತೀಕವಾಗಿರುವ ಜನಪದ ಗೀತೆ, ಭಾವ ಗೀತೆ, ಭಕ್ತಿಗೀತೆ, ಚಲನ ಚಿತ್ರ ಗೀತೆಗಳನ್ನು ಶಾಸ್ತ್ರೋಕ್ತವಾಗಿ ಹಾಡುವುದನ್ನು, ಹಾಗೂ ಅದರ ಸದುಪಯೋಗವನ್ನು ಜನರಿಗೆ ತಿಳಿಸುವ, ಆಸಕ್ತರಿಗೆ ತರಬೇತಿ ನೀಡುವುದರಲ್ಲಿ ನಮ್ಮೂರಿನ ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ ತನ್ನದೆ ಆದ ಖ್ಯಾತಿಯನ್ನು ಪಡೆದಿರುವುದು ಸಂತಸದ ಸಂಗತಿಯಾಗಿದೆ ಎಂದರು.ಜನಪದ ಕಲೆಯನ್ನು ಶ್ರೀಮಂತಗೊಳಿಸಲು ಆಸಕ್ತರಿಗೆ ತರಬೇತಿ ಅವಶ್ಯ. ಜನರಿಂದ ಜನರ ಮೂಲಕ ಹಾಡುತ್ತಾ-ಹಾಡುತ್ತಾ ಬಂದಿರುವ ಕಲೆಯೇ ಜನಪದ ಕಲೆ ಎಂದರು.
ತೀರ್ಪುಗಾರರಾಗಿ ಆಗಮಿಸಿದ್ದ ಜೀ ಕನ್ನಡ ಸರಿಗಮಪ 11ನೇ ರನ್ನರ್ ಆಪ್ ಡಾ,ಶ್ರೀರಾಮ ಕಾಸರ, ತೋರಣಗಲ್ ಚಲನಚಿತ್ರ ಗಾಯಕಿ ಕಲಾವತಿ ವಿಶ್ವನಾಥ, ಹರಿಹರ ಸುಗಮ ಸಂಗೀತ ಗಾಯಕ ಶಾಂತಿನಾಥ ಭೊನಿ, ರಾಜ್ಯದ ನಾನಾ ಊರುಗಳಿಂದ ಆಗಮಿಸಿ, ಸ್ಪಧೇಯಲ್ಲಿ ಭಾಗವಹಿಸಿ ತಮ್ಮ ಹಾಡುಗಾರಿಕೆಯನ್ನು ಪ್ರದರ್ಶಿಸಿದ ಎಲ್ಲಾ ಸ್ಪಧಿಗಳನ್ನು ಪರೀಕ್ಷಿಸಿ ಅಂತಿಮವಾಗಿ, ಬಿಜಾಪುರ ಜಿಲ್ಲೆಯ ತಾಳಿಕೋಟೆಯ ನಿಂಗಣ್ಣ ಪಡಶೆಟ್ಟಿ ಪ್ರಥಮ, ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಕುಮಾರ ಬಿ.ಹೆಚ್ ದ್ವೀತಿಯ, ಹರಿಹರ ಕು. ಮಧುಮಿತ ಚಲವಾದಿ ತೃತೀಯ ಎಂದು ಫಲಿತಾಂಶ ಘೋಷಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಗೋವಿಂದರೆಡ್ಡಿ, ಸಂಘಟಿಕ ಜನನಿ ಜನ್ಮದಾತ ಸಾಂಸ್ಕೃತಿಕ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಅಜ್ಜೇರ, ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಮಾಜಿ ಪ್ರಧಾನರಾದ ಅಮರಾವತಿ ಪರಮೇಶ್ವರಪ್ಪ, ಜಿಲ್ಲಾ ಕಲಾವಿಧರ ಸಂಘದ ಅಧ್ಯಕ್ಷ ಪರಮೇಶ್, ಜಗಳೂರು ಶುಕ್ರದೇಸೆ ಪತ್ರಿಕೆ ಸಂಪಾದಕ ರಾಜಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷೆ ರೂಪಾ ಶಶಿಕಾಂತ, ಕಾಂಗ್ರೆಸ್ ಮುಖಂಡ ನಾಗರಾಜ, ಬಿಜೆಪಿ ಎಸ್ಟಿ ಮೋರ್ಛಾ ಅಧ್ಯಕ್ಷ ರವಿ ತ್ಯಾವರಿಗಿ, ಸಂತೋಷ ಗುಡಿಮನಿ, ಅಣ್ಣಪ್ಪ ಲೋಕಿಕೆರಿ, ಗಾಯಕ ಮಂಜುನಾಥ್ ದುಗ್ಗತ್ತಿ, ಹಾಲಿವಾಣದ ಪಕ್ಕೀರೇಶ ಯಾದವ, ಮಾಲಾ ಬಿ, ಅರ್ಚನಾ, ಕರಿಬಸವ, ವಿಕ್ರಮ್, ರಾಜು, ಶಿವು ಇದ್ದರು,