ಭಾರತ ವಿಶ್ವಗುರುವನ್ನಾಗಿಸಿ ಮುನ್ನಡೆಸಬೇಕು: ಸೂಯಶಸಿಂಹ

KannadaprabhaNewsNetwork |  
Published : Jan 13, 2024, 01:34 AM IST
ಚಿತ್ರ 12ಬಿಡಿಆರ್‌4ಭಾಲ್ಕಿ ಪಟ್ಟಣದ ಶಿವಾಜಿ ವೃತ್ತದಲ್ಲಿ ಆಗಮಿಸಿದ ರಾಷ್ಟ್ರೀಯತಾ ಅಭಿಯಾನ ರಥಯಾತ್ರಾ ಸಮಿತಿಯ ಸ್ವಾಗತ ಸಮಾರಂಭದಲ್ಲಿ ವಿಶ್ವ ಗೌರವ ಶಿವಸ್ವರಾಜ ರಥ ಸಮಿತಿಯ ಅಧ್ಯಕ್ಷ ಮಹಾರಾಣಾ ಸೂಯಶಸಿಂಹ ಮಾತನಾಡಿದರು. | Kannada Prabha

ಸಾರಾಂಶ

ಭಾರತ ದೇಶವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಯುವ ಸಮುದಾಯವನ್ನು ಮುನ್ನಡೆಸಬೇಕಿದೆ ಎಂದು ವಿಶ್ವ ಗೌರವ ಶಿವಸ್ವರಾಜ ರಥ ಸಮಿತಿಯ ಅಧ್ಯಕ್ಷ ಮಹಾರಾಣಾ ಸೂಯಶಸಿಂಹ ತಿಳಿಸಿದರು.

ಭಾಲ್ಕಿ: ಭಾರತ ದೇಶವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಯುವ ಸಮುದಾಯವನ್ನು ಮುನ್ನಡೆಸಬೇಕಿದೆ ಎಂದು ವಿಶ್ವ ಗೌರವ ಶಿವಸ್ವರಾಜ ರಥ ಸಮಿತಿಯ ಅಧ್ಯಕ್ಷ ಮಹಾರಾಣಾ ಸೂಯಶಸಿಂಹ ತಿಳಿಸಿದರು.

ಅವರು ಪಟ್ಟಣದ ಶಿವಾಜಿ ವೃತ್ತದಲ್ಲಿ ಶುಕ್ರವಾರ ಶಿವಸ್ವರಾಜ ರಥ ಸಮಿತಿಯ ರಾಷ್ಟ್ರೀಯ ಪ್ರಚಾರಕ ಜನಾರ್ಧನ ಪಾಟೀಲ್‌ ಅವರ ನೇತೃತ್ವದಲ್ಲಿ ಜಾಗೋ ಭಾರತ ಫೌಂಡೇಶನ್‌ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯತಾ ಅಭಿಯಾನ ರಥಯಾತ್ರಾ ಪ್ರಯಾಣದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಭಾರತೀಯ ಪರಂಪರೆಯನ್ನು ಜಗತ್ತಿಗೆ ತಿಳಿಸುವುದದೊಂದಿಗೆ, ನಮ್ಮ ಯುವ ಜನರಲ್ಲಿ ರಾಷ್ಟ್ರೀಯತೆ ಮನೆ ಮಾಡುವಂತೆ ಮಾಡುವುದೇ ಫೌಂಡೇಶನ್‌ ಮೂಲ ಉದ್ದೇಶವಾಗಿದೆ. ದೇಶದ ಪರಂಪರೆ ಮತ್ತು ರಾಷ್ಟ್ರೀಯ ನಾಯಕರಾದ ಶಿವಾಜಿ ಮಹಾರಾಜರು, ಮಹಾತ್ಮಾ ಬಸವೇಶ್ವರರು, ಶಾಹು ಮಹಾರಾಜರು ಸೇರಿದಂತೆ ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಿದ ಅನೇಕ ಮಹಾತ್ಮರ ತತ್ವಾದರ್ಶಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕಿದೆ. ಹೀಗಾಗಿ ಇಂದಿನಿಂದ ಮಹಾರಾಷ್ಟ್ರದ ಲಾತೂರಿನಿಂದ ದೇಶದ 15 ರಾಜ್ಯಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಶಿವಸ್ವರಾಜ ರಥ ಸಮಿತಿಯ ರಾಷ್ಟ್ರೀಯ ಪ್ರಚಾರಕ ಜನಾರ್ಧನ ಪಾಟೀಲ್‌ ಮಾತನಾಡಿ, ವಿಶ್ವ ಶಾಂತಿಯಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ. ಅನಾದಿಕಾಲದಿಂದಲೂ ಜಗತ್ತಿಗೆ ಶಾಂತಿ ಸಂದೇಶ ಮೂಡಿಸಿದ ದೇಶ ಭಾರತವಾಗಿದೆ. ಹೀಗಾಗಿ ನಾವೆಲ್ಲರೂ ಸೇರಿ ಮತ್ತೇ ಜಗತ್ತಿನ ಶಾಂತಿಗಾಗಿ ದುಡಿಯೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂಜಿ ಮೂಳೆ, ಬಿಹಾರ ಶಾಸಕ ಪ್ರೇಮ ಸಿಂಗ್‌, ಡಾ.ವೈಶಾಲಿ ಜಾಧವ, ಮಹಾರಾಷ್ಟ್ರದ ಮಾಜಿ ರಾಜಸಭಾ ಸದಸ್ಯ ಗೊಪಾಳರಾವ್‌ ಪಾಟೀಲ್‌, ಜಿಪಂ ಮಾಜಿ ಸದಸ್ಯ ಯಾದವರಾವ್‌ ಕನಸೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾತ್ರಿ ಕಾಟಕರ, ಮರಾಠಾ ಮುಖಂಡ ವೈಜಿನಾಥ ತಗಾರೆ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಹಂಸರಾಜ ನರಸಿಂಗರಾವ್‌ ಘುಗರೆ, ತುಕಾರಾಮ ಮೋರೆ, ಕಿಶನರಾವ್‌ ಇಂಚೂರಕರ, ಪ್ರತಾಪ ಪಾಟೀಲ್‌, ಸೂರಜಸಿಂಗ್‌ ರಜಪೂತ, ನಾಮದೇವರಾವ್‌ ಪವಾರ, ಜೀಜಾವು ಬ್ರಿಗೇಡ್‌ನ ಮಹಿಳಾ ಪ್ರತಿನಿಧಿಗಳಾ ಡಾ. ಕೃತಿಕಾ ಪಾಟೀಲ್‌, ಡಾ.ನಿರ್ಮಲಾ ಶೇಡೋಳೆ ಹಾಗೂ ರಂಜನಾ ಕಾಟಕರ ಉಪಸ್ಥಿತರಿದ್ದರು. ತುಕಾರಾಮ್‌ ಮೋರೆ ಸ್ವಾಗತಿಸಿದರು. ದತ್ತು ಕಾಟಕರ ನಿರೂಪಿಸಿ ವೈಜಿನಾಥ ತಗಾರೆ ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ