ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಷ್ಟ್ರೀಯ ಸ್ವಯಂ ಸೇವಕದ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಜರುಗಿದ ವಿಜಯದಶಮಿ ಪಥಸಂಚಲನ ನಂತರ ಬವಿವ ಸಂಘದ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ಬ್ರಿಟಿಷರು ಭಾರತಕ್ಕೆ ಬಂದು ಆಳಿದರು. ಉಳಿದರು. ಹಿಂದೂ ರಾಷ್ಟ್ರ ಎಂಬುದು ಹೊಸ ವ್ಯಾಖ್ಯಾನವಲ್ಲ. ಎಂದೆಂದಿಗೂ ಇದು ಹಿಂದೂ ರಾಷ್ಟ್ರವೇ ಆಗಿರಲಿದೆ. ಒಬ್ಬನೇ ಹಿಂದೂ ಇದ್ದರೂ ಇದು ಹಿಂದೂ ರಾಷ್ಟ್ರವಾಗಿಯೇ ಗುರುತಿಸಿಕೊಳ್ಳಲಿದೆ. ಹಿಂದೂಗಳಲ್ಲಿ ಎಲ್ಲರನ್ನು ಒಳಗೊಳ್ಳುವ ವೈಶಿಷ್ಟ್ಯಪೂರ್ಣ ಗುಣವಿದೆ. ಅದನ್ನೇ ನಮ್ಮ ಪುರಾಣ, ಉಪನಿಷತ್ತುಗಳು ಹೇಳಿದವು, ಬಸವಣ್ಣನವರೂ ಅದನ್ನೇ ಪ್ರತಿಪಾದಿಸಿದರು ಎಂದು ಹೇಳಿದರು.ಹಿಂದೂ ಸಮಾಜ ತನ್ನಲ್ಲಿರುವ ದೌರ್ಬಲ್ಯ, ವಿಕೃತಿಗಳನ್ನು ಹಿಮ್ಮೆಟ್ಟಿಸಿ ಮುಂದೆ ಬರಬೇಕಿದೆ. ಸಂಘಕ್ಕೆ ಶತಮಾನವಾಗಿರುವುದು ಹೆಮ್ಮೆಯ ವಿಷಯ ಆದರೆ ನಾವು ಅಂದುಕೊಂಡಷ್ಟು ವೇಗದಲ್ಲಿ ಗುರಿ ಸಾಧನೆ ಆಗಿಲ್ಲ. ಭಾರತ ವಿಶ್ವ ಗುರುವಾಗಬೇಕು. ಜಗತ್ತಿನ ಮುಂದೆ ನಾವು ಶಕ್ತಿಶಾಲಿಗಳಾಗಬೇಕೆಂಬುದು ನಮ್ಮ ಧ್ಯೇಯವಲ್ಲ. ಭಾರತ ವಿಶ್ವಗುರುವಾಗಿಸುವುದರ ಮೂಲಕ ಜಗತ್ತಿನ ಕಲ್ಯಾಣಕ್ಕಾಗಿ ಶ್ರಮಿಸಬೇಕು. ಲೋಕಲ್ಯಾಣ ಎಂಬುದು ಹಿಂದೂಗಳ ಗುಣದಲ್ಲೇ ಅಡಗಿದೆ ಎಂದರು.
ವಿಜಯಪುರ-ಬಾಗಲಕೋಟೆ ಕೆಎಂಎಫ್ ನಿರ್ದೇಶಕ ವಿವೇಕಾಂದ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜಿಲ್ಲಾ ಸಂಘಚಾಲಕ ಚಂದ್ರಶೇಖರ ದೊಡ್ಡಮನಿ ವೇದಿಕೆಯಲ್ಲಿದ್ದರು.