ಭಾರತ ಸಂವಿಧಾನ ಪ್ರಪಂಚಕ್ಕೇ ಮಾದರಿ

KannadaprabhaNewsNetwork | Published : Dec 8, 2024 1:17 AM

ಸಾರಾಂಶ

ಚನ್ನಪಟ್ಟಣ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಅನುಭವಿಸಿದ ನೋವುಗಳನ್ನು ಇತರರು ಅನುಭವಿಸಬಾರದೆಂದು ರಚಿಸಿದ ದೇಶದ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ತಾಲೂಕು ದಂಡಾಧಿಕಾರಿ ನರಸಿಂಹಮೂರ್ತಿ ತಿಳಿಸಿದರು.

ಚನ್ನಪಟ್ಟಣ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಅನುಭವಿಸಿದ ನೋವುಗಳನ್ನು ಇತರರು ಅನುಭವಿಸಬಾರದೆಂದು ರಚಿಸಿದ ದೇಶದ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ತಾಲೂಕು ದಂಡಾಧಿಕಾರಿ ನರಸಿಂಹಮೂರ್ತಿ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬ್‌ ಡಾ. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಸರ್ವಜನಾಂಗದ ಮಹಾ ನಾಯಕರು ಎಂದರು.ಅನೇಕ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಅತ್ಯುತ್ತಮ ಸಂವಿಧಾನ ರಚಿಸಿಕೊಟ್ಟಿದ್ದಾರೆ. ಅದನ್ನು ಅರಿತು ಬದುಕುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರು ಅಂಬೇಡ್ಕರ್‌ ಸಂವಿಧಾನ ಪಾಲಿಸಬೇಕು. ಅದೇ ನಾವು ಅಂಬೇಡ್ಕರ್‌ ಮತ್ತು ಸಂವಿಧಾನಕ್ಕೆ ನೀಡುವ ಬಹುದೊಡ್ಡ ಗೌರವ ಎಂದು ಹೇಳಿದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸರೋಜಮ್ಮ ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ದೇಶದ ಮಹಾ ಚೇತನ. ಕೆಳ ಸಮುದಾಯಗಳ ಮೇಲೆ ಜಾತಿ ವ್ಯವಸ್ಥೆ ಸವಾರಿಯನ್ನು ತಡೆಯುವಲ್ಲಿ ಅಂಬೇಡ್ಕರ್‌ ಪಾತ್ರ ಮಹತ್ವದ್ದು. ಸಂವಿಧಾನದಲ್ಲಿ ಕೆಳ ಸಮುದಾಯಗಳಿಗೆ ವಿಶೇಷ ಕಾನೂನುಗಳನ್ನು ರಚಿಸಿ ಅವರ ಬದುಕಿಗೆ ಆಶಾಕಿರಣವಾದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಇಒ ಸಂದೀಪ್, ದಲಿತ ಮುಖಂಡರಾದ ವೆಂಕಟೇಶ್(ಶೇಟು), ನಾರಾಯಣ ಸ್ವಾಮಿ, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಸತೀಶ್, ಅಕ್ಷರ ದಾಸೋಹದ ಸಿದ್ದರಾಜು, ಅಧಿಕಾರಿಗಳಾದ ವೇದಮೂರ್ತಿ, ಹರೀಶ್, ರಮೇಶ್ ಇತರರಿದ್ದರು.

ಪೊಟೋ೬ಸಿಪಿಟಿ೩:

ಚನ್ನಪಟ್ಟಣದ ತಾಪಂ ಕಚೇರಿಯಲ್ಲಿ ಅಂಬೇಡ್ಕರ್ ಪರಿ ನಿರ್ವಾಣ ದಿನಾಚರಣೆ ಕಾರ್ಯಕ್ರಮಕ್ಕೆ ದಂಡಾಧಿಕಾರಿ ನರಸಿಂಹಮೂರ್ತಿ ಚಾಲನೆ ನೀಡಿದರು.

Share this article