ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿ ಅಸ್ಮಿತೆ ಇರಲಿ: ಡೊಣೂರ

KannadaprabhaNewsNetwork |  
Published : Jul 11, 2026, 12:15 AM IST
ಚಿತ್ರ 10ಬಿಡಿಆರ್51 | Kannada Prabha

ಸಾರಾಂಶ

ಬೀದರ್‌ನ ವಿದ್ಯಾರಣ್ಯ ಪ್ರೌಢಶಾಲೆಯ ಆವರಣದಲ್ಲಿ ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರ ಪದಗ್ರಹಣ ಸಮಾರಂಭ ನಡೆಯಿತು

ಕನ್ನಡಪ್ರಭ ವಾರ್ತೆ ಬೀದರ್

ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಅಸ್ಮಿತೆ ಇರಬೇಕೆಂದು ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಪ್ರೊ.ಬಸವರಾಜ ಡೊಣೂರ ಹೇಳಿದರು.

ನಗರದ ವಿದ್ಯಾರಣ್ಯ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ನಡೆದ ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಸಾಮಾಜಿಕ ಸಂಘಟನೆಗಳು ಹಾಗೂ ಪಾಲಕರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರಲ್ಲದೆ, ದೇಶದ ಎಲ್ಲರೂ ಭಾರತೀಯ ಸಂಸ್ಕೃತಿ ಅನುಸರಿಸಬೇಕು. ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿಯಬೇಕು ಎಂದು ಸಲಹೆ ಮಾಡಿದರು.

ಬಸವರಾಜ ಕವಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾಗಿದೆ. ಶಿಕ್ಷಕರು ಕೇವಲ ವಿಷಯ ಶಿಕ್ಷಕರಾಗದೆ, ಗುರುವಾಗಬೇಕು ಎಂದರು.

ಡಾ.ಪಲ್ಲವಿ ಪಾಟೀಲ ಸೇಡಂ ಮಾತನಾಡಿ, ಇಂದು ಮಕ್ಕಳಿಗೆ ಶಿಕ್ಷಣ ಜೈಲಿನಂತೆ ಭಾಸವಾಗುತ್ತಿದೆ. ಆಟದ ಜತೆಗೆ ಶಿಕ್ಷಣ ನೀಡುವಂತಾಗಬೇಕು ಎಂದು ಹೇಳಿದರು.

ದೇಸಿ ಕ್ರೀಡೆಗಳಿಂದ ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ. ಅವರಲ್ಲಿ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಓದು ಅಭ್ಯಾಸವಾಗದೆ, ಹವ್ಯಾಸವಾಗುತ್ತದೆ ಎಂದು ಹೇಳಿದರು.

ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತ ಅನುಸಂಧಾನ ಗತಿವಿಧಿ ಪ್ರಾಂತ ಪ್ರಮುಖ ಪ್ರೊ.ರವೀಂದ್ರ ಹೆಗಡೆ, ಬೀದರ್ ಜಿಲ್ಲಾ ಅಧ್ಯಕ್ಷ ಸಂತೋಷಕುಮಾರ ಮಂಗಳೂರೆ, ಉಪಾಧ್ಯಕ್ಷರಾದ ಬಸವರಾಜ ಮೂಲಗೆ, ವಿನಾಯಕ್ ಕುಲಕರ್ಣಿ, ಕಾರ್ಯದರ್ಶಿ ಸಂತೋಷ್ ಸೋಲಪುರೆ, ಸಹ ಕಾರ್ಯ ದರ್ಶಿಗಳಾದ ಸಂತೋಷ್ ಮಲಶೆಟ್ಟಿ, ಬಸವರಾಜೇಶ್ವರಿ ರೆಡ್ಡಿ, ಪರಮೇಶ್ವರ್ ಬಿರಾದಾರ, ಲಕ್ಷ್ಮಣ ಪೂಜಾರಿ, ಭಾರತಿ ವಸ್ತ್ರದ್, ರಾಮಚಂದ್ರ ಗಣಾಪುರ, ಬಳಿರಾಮ ಕುರನಾಳೆ, ಲೋಕೇಶ್ ಉಡಬಾಳೆ ಮತ್ತಿತರರು ಇದ್ದರು.

ಭಾರತೀಯ ಶಿಕ್ಷಣ ಮಂಡಲದ ಪ್ರಾಂತ ಮಹಿಳಾ ಗತಿವಿಧಿ ಪ್ರಮುಖ ಪ್ರತಿಭಾ ಚಾಮಾ ಸ್ವಾಗತಿಸಿದರು. ರಾಧಾ ಬಿರಾದಾರ ನಿರೂಪಿಸಿದರೆ ಬಾಲಾಜಿ ರಾಠೋಡ್ ವಂದಿಸಿದರು.

--

ಚಿತ್ರ 10ಬಿಡಿಆರ್51:

ಬೀದರ್‌ನ ವಿದ್ಯಾರಣ್ಯ ಪ್ರೌಢಶಾಲೆಯ ಆವರಣದಲ್ಲಿ ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರ ಪದಗ್ರಹಣ ಸಮಾರಂಭ ನಡೆಯಿತು

--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲಹರಣವಾಗುತ್ತಿದೆ ಹೊರತು ಪ್ರಗತಿ ಇಲ್ಲ
ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸುವಂತೆ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ