ಭಾರತೀಯ ಸಂಸ್ಕೃತಿ ಬದುಕಿಗೆ ಬೆಳಕು

KannadaprabhaNewsNetwork |  
Published : Aug 01, 2026, 04:00 AM IST
(ಫೋಟೊಬಿಕೆಟಿ1, ಎ.ಎಸ್. ಪಾವಟೆಯವರ ವಚನಾಮೃತ-2 ಗ್ರಂಥವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಭಾರತೀಯ ಆಧ್ಯಾತ್ಮ, ಸಾಹಿತ್ಯ ಮತ್ತು ಸಂಸ್ಕೃತಿಗಳು ಮಾನವ ಬದುಕಿಗೆ ಬೆಳಕು ನೀಡಿ, ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸಿ, ವ್ಯಕ್ತಿತ್ವವನ್ನು ಪರಿಪಕ್ವಗೊಳಿಸುವ ಮೂಲಕ ದೈವತ್ವಕ್ಕೇರಿಸುವ ಶಕ್ತಿ ಹೊಂದಿವೆ. ಈ ಕಾರಣದಿಂದಲೇ ಭಾರತೀಯ ಸಂಸ್ಕೃತಿ ವಿಶ್ವಮಾನ್ಯ ಸ್ಥಾನ ಪಡೆದಿದೆ ಎಂದು ಚರಂತಿಮಠದ ಪ್ರಭುಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆಭಾರತೀಯ ಆಧ್ಯಾತ್ಮ, ಸಾಹಿತ್ಯ ಮತ್ತು ಸಂಸ್ಕೃತಿಗಳು ಮಾನವ ಬದುಕಿಗೆ ಬೆಳಕು ನೀಡಿ, ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸಿ, ವ್ಯಕ್ತಿತ್ವವನ್ನು ಪರಿಪಕ್ವಗೊಳಿಸುವ ಮೂಲಕ ದೈವತ್ವಕ್ಕೇರಿಸುವ ಶಕ್ತಿ ಹೊಂದಿವೆ. ಈ ಕಾರಣದಿಂದಲೇ ಭಾರತೀಯ ಸಂಸ್ಕೃತಿ ವಿಶ್ವಮಾನ್ಯ ಸ್ಥಾನ ಪಡೆದಿದೆ ಎಂದು ಚರಂತಿಮಠದ ಪ್ರಭುಮಹಾಸ್ವಾಮಿಗಳು ಹೇಳಿದರು.ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ನಿರವಯಲಪಥಿಕ ಲಿಂ.ಪ್ರೊ.ಎಚ್.ಜಿ.ಮೃತ್ಯುಂಜಯ ಸ್ಮಾರಕ ಪ್ರತಿಷ್ಠಾನ, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲಿಂ.ಪ್ರೊ.ಎಚ್.ಜಿ. ಮೃತ್ಯುಂಜಯ ಅವರ ಪುಣ್ಯಸ್ಮರಣೆ, ಪ್ರಶಸ್ತಿ ಪ್ರದಾನ, ದತ್ತಿ ಉಪನ್ಯಾಸ ಹಾಗೂ ವಚನಾಮೃತ-2 ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರೊ.ಎಚ್.ಜಿ.ಮೃತ್ಯುಂಜಯ ಅವರು ಆಧ್ಯಾತ್ಮಿಕ ಸಾಧನೆಯ ಮೂಲಕ ದೈವತ್ವಕ್ಕೇರಿದ ಮಹನೀಯರು. ಅವರ ಆದರ್ಶಗಳನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಪ್ರತಿಷ್ಠಾನವು ಪ್ರತಿವರ್ಷ ಪುಣ್ಯಸ್ಮರಣೆಯ ಅಂಗವಾಗಿ ಆಧ್ಯಾತ್ಮ ಮತ್ತು ಶರಣ ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಆಧ್ಯಾತ್ಮ ಸಾಹಿತ್ಯ ದೀಪಕ ಹಾಗೂ ಶರಣ ಸಾಹಿತ್ಯ ದೀಪಿಕೆ ಪ್ರಶಸ್ತಿಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಧ್ಯಾತ್ಮ ಸಾಹಿತ್ಯ ದೀಪಕ ಪ್ರಶಸ್ತಿ ಸ್ವೀಕರಿಸಿದ ಶಿವಮೊಗ್ಗದ ಮಂಕುತಿಮ್ಮನ ಕಗ್ಗ ಪ್ರವಚನಕಾರ ವಿದ್ವಾನ್ ಜಿ.ಎಸ್.ನಟೇಶ ಅವರು ಆಧ್ಯಾತ್ಮ ಸಾಹಿತ್ಯದ ಮೌಲ್ಯಗಳು ಮತ್ತು ಅದರ ಮಹತ್ವವನ್ನು ಪ್ರತಿಪಾದಿಸಿದರು.

ಶರಣ ಸಾಹಿತ್ಯ ದೀಪಿಕೆ ಪ್ರಶಸ್ತಿ ಪುರಸ್ಕೃತ ವಿಜಯಪುರದ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಉಷಾದೇವಿ ಹಿರೇಮಠ ಶರಣ ಸಾಹಿತ್ಯದ ಸಾಮಾಜಿಕ ಮಹತ್ವ ಹಾಗೂ ಸಮಾನತೆಯ ಸಂದೇಶ ವಿವರಿಸಿದರು. ದತ್ತಿ ಉಪನ್ಯಾಸ ನೀಡಿದ ಬಿವಿವಿ ಸಂಘದ ಆಡಳಿತಾಧಿಕಾರಿ ಹಾಗೂ ಸಾಹಿತಿ ಡಾ.ವಿ.ಎಸ್.ಕಟಗಿಹಳ್ಳಿಮಠ ಅವರು ಪ್ರೊ.ಎಚ್.ಜಿ.ಮೃತ್ಯುಂಜಯ ಅವರ ಸಾಹಿತ್ಯ, ಆಧ್ಯಾತ್ಮ ಮತ್ತು ಸಾಂಸ್ಕೃತಿಕ ಸೇವೆಯನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಯರನಾಳ-ಉಕ್ಕಲಿಯ ಗುರುಸಂಗನಬಸವ ಸ್ವಾಮೀಜಿ ಹಾಗೂ ಟೀಕಿನಮಠದ ಮಲ್ಲಿಕಾರ್ಜುನ್‌ ಸ್ವಾಮಿಗಳು ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಆಧ್ಯಾತ್ಮ ಸಾಹಿತ್ಯ ದೀಪಕ ಪ್ರಶಸ್ತಿಯನ್ನು ಶಿವಮೊಗ್ಗದ ವಿದ್ವಾನ್ ಜಿ.ಎಸ್.ನಟೇಶ ಅವರಿಗೆ ಹಾಗೂ ಶರಣ ಸಾಹಿತ್ಯ ದೀಪಿಕೆ ಪ್ರಶಸ್ತಿಯನ್ನು ವಿಜಯಪುರದ ಡಾ.ಉಷಾದೇವಿ ಹಿರೇಮಠ ಅವರಿಗೆ ನೀಡಿ ಗೌರವಿಸಲಾಯಿತು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎ.ಎಸ್.ಪಾವಟೆಯವರ ವಚನಾಮೃತ-2 ಗ್ರಂಥವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಸಾಪ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟರ, ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಎಸ್.ಎಚ್.ಶೆಟ್ಟರ, ಸುಮಿತ್ರಾದೇವಿ ಹೆಬಸೂರ, ಪ್ರಭಾವತಿ ಹಿರೇಮಠ, ಕಸಾಪ ತಾಲೂಕು ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನ್ನವರ, ಬಸವರಾಜ ಮುಕುಪಿ, ಶಿವಾನಂದ ಪೂಜಾರಿ, ಬಸವರಾಜ ತಿಪಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಷ್ಠಾನವಾಗದ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ: ಉದಯಸಿಂಗ್ ರಾಯಚೂರ
ವೈಜ್ಞಾನಿಕ ಬೇಸಾಯದಿಂದ 100 ಟನ್‌ ಕಬ್ಬಿನ ಇಳುವರಿ