ಭಾರತೀಯ ಸಾಹಿತ್ಯವು ವೇದಗಳ ಕಾಲದಿಂದ ಇಂದಿನ ಇನ್‌ಸ್ಟಾಗ್ರಾಂ ಕವಿತೆಯವರೆಗೆ ನಿರಂತರವಾಗಿ ಹರಿಯುತ್ತಿದೆ. ರಾಮಾಯಣ ಆದರ್ಶ ಮನಷ್ಯನ ಕಥೆ, ತ್ಯಾಗ, ಎಕಪತ್ನಿ ವ್ರತ ಶ್ರೀರಾಮನ ಮೂಲಕ ನಾವು ಎನಾಗಬೇಕು ಎಂಬುದನ್ನು ಪಠಿಸುತ್ತದೆಂದು ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಡಾ.ವರುಣ ಗುಲಾಟಿ ನುಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಭಾರತೀಯ ಸಾಹಿತ್ಯವು ವೇದಗಳ ಕಾಲದಿಂದ ಇಂದಿನ ಇನ್‌ಸ್ಟಾಗ್ರಾಂ ಕವಿತೆಯವರೆಗೆ ನಿರಂತರವಾಗಿ ಹರಿಯುತ್ತಿದೆ. ರಾಮಾಯಣ ಆದರ್ಶ ಮನಷ್ಯನ ಕಥೆ, ತ್ಯಾಗ, ಎಕಪತ್ನಿ ವ್ರತ ಶ್ರೀರಾಮನ ಮೂಲಕ ನಾವು ಎನಾಗಬೇಕು ಎಂಬುದನ್ನು ಪಠಿಸುತ್ತದೆಂದು ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಡಾ.ವರುಣ ಗುಲಾಟಿ ನುಡಿದರು.
ಬೀದರಿನ ಕರ್ನಾಟಕ ಸಾಹಿತ್ಯ ಸಂಘ ಆಯೋಜಿಸಿದ ಭಾರತೀಯ ಸಾಹಿತ್ಯ ವಿಶೇಷೋಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾಭಾರತ ವಾಸ್ತವಿಕ ಮನುಷ್ಯನ ಕಥೆಯನ್ನು ಬಿಂಬಿಸುತ್ತದೆ. ಕಾಳಿದಾಸನ ಶಾಕುಂತಲ, ಮುಂತಾದ ಕೃತಿಗಳು ಕಲ್ಪನೆಗೂ ಮೀರಿ ರೋಮಾಂಚನೆಗೊಳಿಸುತ್ತವೆ. ಕಬೀರ, ತುಳಿಸಿದಾಸ, ಮೀರಾಬಾಯಿ, ಸೂರದಾಸ ಬಂಗಾಳಿಯ ಚೈತನ್ಯ ಮಹಾಪ್ರಭು, ಮರಾಠೀಯ ಸಂತುಕಾರಾಂ ಪಂಜಾಬಿನ ಗುರುನಾನಕರು ಕನ್ನಡದ ಬಸವಣ್ಣ ಮುಂತಾದವರು ದೇವರು ನಿನ್ನ ಹೃದಯದಲ್ಲಿದ್ದಾನೆ ಎಂಬ ಸಂದೇಶಕ್ಕೆ ಸಾಕ್ಷಿಯಾದರು ಎಂದರು.
ಬಂಕಿಮ್ ಚಂದ್ರ ವಂದೇ ಮಾತರಂ ಕುವೆಂಪು ‘ಜಯಭಾರತ ಜನನಿಯ ತನುಜಾತೆ, ಸಾಹಿತ್ಯವು ಭಾರತೀಯರಿಗೆ ಜಾಗೃತಿ ಮೂಡಿಸಿತು. ಹೀಗಾಗಿ ಭಾರತೀಯ ಸಾಹಿತ್ಯವು ಸರ್ವೇಜನಾ ಸುಖಿನೋ ಭವಂತು’ ಎಂಬ ಕರೆಗೆ ಸಾಕ್ಷಿಯಾಗುತ್ತದೆಂದು ತಿಳಿಸಿದರು.
ವೆಂಕಟೇಶ್ವರ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಉಮಕಾಂತ ಪಾಟೀಲ ವಿಶೇಷೋಪನ್ಯಾಸ ನೀಡಿದರು. ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷರಾದ ಪ್ರೊ. ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾಹಿತ್ಯ ಸಾಧಕರಾದ ಡಾ.ವಿದ್ಯಾ ಪಾಟೀಲ, ಡಾ.ವೀರಶೆಟ್ಟಿ ಮೈಲೂರಕರ್, ಡಾ.ದೀಪಾ ರಾಗಾ, ಡಾ.ಮಹಾದೇವಿ ಹೆಬ್ಬಾಳೆ, ಡಾ.ಗೀತಾ ಪೋಸ್ತೆ, ಡಾ.ಅಂಬಿಕಾ ಕೊತಮೀರ, ಬಸವರಾಜ ಮುಲಗೆ, ಓಂಪ್ರಕಾಶ ಧಡ್ಡೆ, ರಮೇಶ ಬಿರಾದಾರ, ಎಸ್.ಬಿ.ಕುಚಬಾಳ, ರಾಣಿ ಸತ್ಯಮೂರ್ತಿ, ಉಷಾ ಪ್ರಭಾಕರ್, ಡಾ.ರೂತಾ ಪಿ., ಶಂಭುಲಿಂಗ ವಾಲದೊಡ್ಡಿ, ಡಾ.ಅಶೋಕ ಕೋರೆ, ಡಾ.ಸುನಿತಾ ಕೂಡ್ಲಿಕರ್, ಡಾ.ಸಂಜೀವಕುಮಾರ ತಾಂದಳೆ, ಭಾರತಿ ವಸ್ತ್ರದ, ಕಸ್ತೂರಿ ಪಟ್ಟಪಳ್ಳಿ, ಸಂಗಮೇಶ ಜವಾದಿ ಹಾಗೂ ಅಶ್ವಿನಿ ಬಂಪಳ್ಳಿ ಮುಂತಾದವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಶಾಲು ಹೊದಿಸಿ ಸತ್ಕರಿಸಿದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಕಾರ್ಯದರ್ಶಿ ಡಾ.ಎನ್.ಸುರೇಶಬಾಬು, ಪ್ರಾದೇಶಿಕ ಕಾರ್ಯದರ್ಶಿ ಡಾ.ಷಣ್ಮುಖಾನಂದ, ಅಧಿಕಾರಿಗಳಾದ ಸುರೇಶಕುಮಾರ, ಶಿವಶರಣಪ್ಪ ಗಣೇಶಪೂರ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.