ಭಾರತೀಯ ವೈದ್ಯಕೀಯ ಸಂಘದ ವಜ್ರಮಹೋತ್ಸವ ಯಶಸ್ವಿ

KannadaprabhaNewsNetwork |  
Published : Sep 04, 2024, 01:57 AM IST
3ಡಿಡಬ್ಲೂಡಿ2ಭಾರತೀಯ ವೈದ್ಯಕೀಯ ಸಂಘದ ಧಾರವಾಡ ಶಾಖೆಯಲ್ಲಿ ವಜ್ರಮಹೋತ್ಸವ ಮತ್ತು ಬಹುಮಾನ ಸಮಾರಂಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿವಿ ಕುಲಪತಿ ಡಾ.ಎಂ.ಕೆ. ರಮೇಶ್ ಅವರನ್ನು  ಗೌರವಿಸಲಾಯಿತು. | Kannada Prabha

ಸಾರಾಂಶ

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಉತ್ತಮ ಬದಲಾವಣೆ ತರಲು ಪ್ರಯತ್ನಿಸುತ್ತಿದೆ ಎಂದರು.ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಮತ್ತು ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಪ್ರಮುಖ ಕೆಲಸವಾಗಬೇಕಿದೆ.

ಧಾರವಾಡ:

ಇಲ್ಲಿಯ ಭಾರತೀಯ ವೈದ್ಯಕೀಯ ಸಂಘದ ಸ್ಥಳೀಯ ಶಾಖೆಯಲ್ಲಿ ವಜ್ರಮಹೋತ್ಸವ ಮತ್ತು ಬಹುಮಾನ ಸಮಾರಂಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿವಿ ಕುಲಪತಿ ಡಾ.ಎಂ.ಕೆ. ರಮೇಶ ಅವರನ್ನು ಗೌರವಿಸಲಾಯಿತು.

ಆರೋಗ್ಯ ವ್ಯವಸ್ಥೆಯ ವಿಕಾಸ ಮತ್ತು ಔಷಧಿ ಕ್ಷೇತ್ರದಲ್ಲಿ ನೆಡೆಯುತ್ತಿರುವ ಕ್ರಾಂತಿಕಾರಿ ಬದಲಾವಣೆ ವಿವರಿಸಿದ ಡಾ. ರಮೇಶ, ಆಲೋಪತಿ, ಆರ್ಯುವೇದ ಹೋಮಿಯೋಪತಿ ನರ್ಸಿಂಗ್ ಅಥವಾ ಇತರ ಶ್ರೇಣಿಗಳಲ್ಲಿ ನಮ್ಮ ವಿವಿ ಮೆಡಿಕಲ್ ಟ್ರಾಕಿಂಗ್ ಸಿಸ್ಟಮ್ ಪರಿಕಲ್ಪನೆ ಪರಿಚಯಿಸಲು ಶ್ರಮಿಸುತ್ತಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಉತ್ತಮ ಬದಲಾವಣೆ ತರಲು ಪ್ರಯತ್ನಿಸುತ್ತಿದೆ ಎಂದರು.ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಮತ್ತು ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಪ್ರಮುಖ ಕೆಲಸವಾಗಬೇಕಿದೆ ಎಂದರು.

ಡಾ. ಸಂಜು ಚಟ್ನಿ, ವೈರಲ್ ಹೆಪಟಿಟಿಸ್ ರೋಗಿಗಳ ಪರಿಹಾರ ಮತ್ತು ಮತ್ತು ಪ್ರಸ್ತುತ ವ್ಯವಸ್ಥೆಗಳ ಕುರಿತು ಮಾತನಾಡದರು.

ಐಎಂಎ ಧಾರವಾಡ ಅಧ್ಯಕ್ಷ ಡಾ. ಸತೀಶ ಇರಕಲ್ರು, ಡಾ. ಆನಂದ ಹಂದಿಗೋಳ, ಡಾ. ರವೀಂದ್ರ ಜೋಶಿ, ಅನುಪಮ ನಾಡಿಗೇರ, ಡಾ. ಸಪನ್, ಡಾ. ಕಿರಣ್ ಕುಲಕರ್ಣಿ, ಡಾ. ಕಾಥ್ಯಾಯಿನಿ, ಡಾ. ಭಾವನಾ, ಡಾ. ವೈ.ಎನ್. ಇರಕಲ್, ಡಾ. ದಿಲೀಪ್ ಕುಲಕರ್ಣಿ, ಡಾ. ಕವಿತಾ ಮಂಕಣಿ, ಡಾ. ವಾಣಿ ಇರಕಲ್, ಡಾ. ಸರ್ಮಮಂಗಳ, ಡಾ. ರೂಪಾ ಜೋಶಿ, ಡಾ. ರಾಧಿಕಾ ಅಂಬೇಕಲ್, ಡಾ. ಆರ್.ಜಿ. ಪುರಾಣಿಕ, ಡಾ. ವಸಂತ ಮನಗುತ್ತಿ, ಡಾ. ಇಕ್ಬಾಲ್ ಶೇಕ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು