ಪ್ರವಾಸಿ ತಾಣಗಳ ಅಭಿವೃದ್ಧಿಗೆ ವೋಟ್ ಮಾಡಲು ಅವಕಾಶ

KannadaprabhaNewsNetwork |  
Published : Sep 04, 2024, 01:56 AM IST
ದೇಕೋ3 | Kannada Prabha

ಸಾರಾಂಶ

ಈ ಕ್ಯಾಂಪೇನ್ ಅಡಿಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖಾ ವತಿಯಿಂದ ರಾಜ್ಯದಲ್ಲಿನ ಪ್ರವಾಸಿ ತಾಣಗಳನ್ನು ಆದ್ಯತಾ ಪ್ರವಾಸಿ ತಾಣಗಳನ್ನಾಗಿ ಆಯ್ಕೆ ಮಾಡಲು ತಾವು ಈಗಾಗಲೇ ಭೇಟಿ ನೀಡಿರುವ ಕನಿಷ್ಠ ಒಂದು ಆಕರ್ಷಣೆಯನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿರುತ್ತದೆ ಮತ್ತು ತಾವು ಭವಿಷ್ಯದಲ್ಲಿ ಭೇಟಿ ನೀಡಲು ಬಯಸುವ ಕನಿಷ್ಠ ಒಂದು ಆಕರ್ಷಣೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರವಾಸೋದ್ಯಮವನ್ನು ಮೇಲ್ದರ್ಜೆಗೇರಿಸಲು ಹಾಗೂ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ಸೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ, ವಿಶ್ವ ದರ್ಜೆಯಲ್ಲಿ ಅಭಿವೃದ್ಧಿ ಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ‘ದೇಕೋ ಅಪ್ನಾ ದೇಶ್, ಪೀಪಲ್ಸ್ ಚಾಯ್ಸ್-2024’ ಎಂಬ ಕಾರ್ಯಕ್ರಮ ಪ್ರಾರಂಭಿಸಿದೆ.

ಈ ಕಾರ್ಯಕ್ರಮದ ಭಾಗವಾಗಿ ನಾಗರಿಕರು ಹಾಗೂ ಪ್ರವಾಸಿಗರು ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಒಂದೇ ವೇದಿಕೆಯಡಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ನಾಗರಿಕರು ಹಾಗೂ ಪ್ರವಾಸಿಗರು ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಸೆ.15ರ ವರೆಗೆ ವೋಟ್ ಮಾಡುವ ಅವಕಾಶ ಕಲ್ಪಿಸಲಾಗಿರುತ್ತದೆ.

ಈ ಕ್ಯಾಂಪೇನ್ ಅಡಿಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖಾ ವತಿಯಿಂದ ರಾಜ್ಯದಲ್ಲಿನ ಪ್ರವಾಸಿ ತಾಣಗಳನ್ನು ಆದ್ಯತಾ ಪ್ರವಾಸಿ ತಾಣಗಳನ್ನಾಗಿ ಆಯ್ಕೆ ಮಾಡಲು ತಾವು ಈಗಾಗಲೇ ಭೇಟಿ ನೀಡಿರುವ ಕನಿಷ್ಠ ಒಂದು ಆಕರ್ಷಣೆಯನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿರುತ್ತದೆ ಮತ್ತು ತಾವು ಭವಿಷ್ಯದಲ್ಲಿ ಭೇಟಿ ನೀಡಲು ಬಯಸುವ ಕನಿಷ್ಠ ಒಂದು ಆಕರ್ಷಣೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಈ ವೇಳೆ ಲಿಂಕ್‌ನಲ್ಲಿ ತಮ್ಮ ಮೊಬೈಲ್ ನಂಬರ್, ಹೆಸರು, ವಯಸ್ಸು, ರಾಜ್ಯ ಸೇರಿದಂತೆ ಪ್ರಾಥಮಿಕ ಮಾಹಿತಿ ಪೂರ್ತಿ ಮಾಡಿ ಒಟಿಪಿ ಮೂಲಕ ಲಾಗಿನ್ ಆಗಿ ದೇಶದ ಯಾವುದೇ ಪ್ರವಾಸಿ ಸ್ಥಳದ ಕುರಿತು ವೋಟ್ ಮಾಡಬಹುದಾಗಿದೆ. ದೇಶದ ಹಲವು ಪ್ರವಾಸಿ ತಾಣಗಳಲ್ಲಿ ಜಿಲ್ಲೆಯ 15 ಪ್ರವಾಸಿ ತಾಣಗಳನ್ನು ಸೇರಿಸಲಾಗಿರುತ್ತದೆ.

ಇದರಿಂದ ಗುರುತಿಸಲಾದ ವಿಜೇತ ಆಕರ್ಷಣೀಯ ತಾಣಗಳನ್ನು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಅಡಿಯಲ್ಲಿ ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುವುದರೊಂದಿಗೆ ಇದು ಭಾರತದ ವೀಕ್ಷಿತ್ ಭಾರತ್ @ 2047 ಕಡೆಗೆ ಪ್ರಯಾಣಕ್ಕೆ ಕೊಡುಗೆ ನೀಡುತ್ತದೆ.

ವೋಟಿಂಗ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದಿಂದ ಅವರ ಹೆಸರಿನಲ್ಲಿನ ಇ-ಪ್ರಮಾಣ ಪತ್ರ ದೊರೆಯಲಿದೆ. ಸಾರ್ವಜನಿಕರು https://innovateindia.mygov.in/ deskho-apna-desh/login/ ವೆಬ್ ಲಿಂಕ್ ಬಳಿಸಿ ಜಿಲ್ಲೆಯ ಮೆಚ್ಚಿನ ಪ್ರವಾಸಿ ತಾಣದ ಕುರಿತು ವೋಟ್ ಮಾಡಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌