ಸೈದಾಪುರದಲ್ಲಿ ಭಾರತೀಯ ಸೈನಿಕರ ಸಾಹಸಗಾಥೆ ಅನಾವರಣ

KannadaprabhaNewsNetwork | Updated : May 24 2025, 12:21 AM IST
ಸಮೀಪದ ಸೈದಾಪುರ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಭಾಗವಹಿಸಿದ್ದ ಜನರು ದೇಶ ಭಕ್ತಿಯನ್ನು ಸಾರುವ ಘೋಷಣೆಗಳ ಜೊತೆಗೆ ದೂದ್ ಮಾಂಗೋ ಖೀರ್ ದೇಂಗೆ, ಕಾಶ್ಮೀರ ಮಾಂಗೋ ತೋ ಛೀರ್ ದೇಂಗೆ ಎಂದು ಉದ್ಘೋಷಿಸುವ ಮೂಲಕ ಗಡಿ ಕಾಯುವ ಸೈನಿಕರ ಜತೆಗೆ ಈ ರಾಷ್ಟ್ರದ ಪ್ರತಿಯೊಬ್ಬ ನಾಗರಿಕರು ಜತೆಗಿದ್ದೇವೆ ಎಂಬ ಸಂದೇಶವನ್ನು ರವಾನಿಸುವ ಮೂಲಕ ಇಲ್ಲಿ ಭಾರತೀಯ ಸೈನಿಕರ ಹೋರಾಟದ ಯಶೋಗಾಥೆ ಅನಾವರಣಗೊಂಡಿತು.
Follow Us

ತಿರಂಗಾ ಯಾತ್ರೆ । ಆಪರೇಷನ್ ಸಿಂದೂರ ಯಶಸ್ಸಿನ ಹಿನ್ನೆಲೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಾದಗಿರಿ

ಸಮೀಪದ ಸೈದಾಪುರ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಭಾಗವಹಿಸಿದ್ದ ಜನರು ದೇಶ ಭಕ್ತಿಯನ್ನು ಸಾರುವ ಘೋಷಣೆಗಳ ಜೊತೆಗೆ ದೂದ್ ಮಾಂಗೋ ಖೀರ್ ದೇಂಗೆ, ಕಾಶ್ಮೀರ ಮಾಂಗೋ ತೋ ಛೀರ್ ದೇಂಗೆ ಎಂದು ಉದ್ಘೋಷಿಸುವ ಮೂಲಕ ಗಡಿ ಕಾಯುವ ಸೈನಿಕರ ಜತೆಗೆ ಈ ರಾಷ್ಟ್ರದ ಪ್ರತಿಯೊಬ್ಬ ನಾಗರಿಕರು ಜತೆಗಿದ್ದೇವೆ ಎಂಬ ಸಂದೇಶವನ್ನು ರವಾನಿಸುವ ಮೂಲಕ ಇಲ್ಲಿ ಭಾರತೀಯ ಸೈನಿಕರ ಹೋರಾಟದ ಯಶೋಗಾಥೆ ಅನಾವರಣಗೊಂಡಿತು.

ಪ್ರವಾಸಕ್ಕೆಂದು ಪಹಲ್ಗಾಮ್‌ಗೆ ತೆರಳಿದ್ದ ಅಮಾಯಕರ ಬಲಿ ಪಡೆದ ಪಾಕ್ ಪೋಷಿತ ಉಗ್ರರರನ್ನು ನಿರ್ನಾಮ ಮಾಡಲು ಭಾರತೀಯ ಸೇನೆಯ ಆಪರೇಷನ್ ಸಿಂದೂರ ವಿಜಯೋತ್ಸವದ ನಿಮಿತ್ತ ನಮ್ಮ ಸೈನಿಕರಿಗೆ ಅಭಿನಂದನೆ ಹಾಗೂ ಆತ್ಮಸ್ಥೈರ್ಯವನ್ನು ತುಂಬುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆ ಯಶಸ್ವಿಯಾಯಿತು.

ಪಟ್ಟಣದ ರೈಲು ನಿಲ್ದಾಣದಿಂದ ಹೋರಾಟ ತಿರಂಗಾ ಯಾತ್ರೆಯೂ ಬಸವೇಶ್ವರ ವೃತ್ತದ ಮೂಲಕ ಕನಕ ವೃತ್ತವನ್ನು ತಲುಪಿತು. ಈ ವೇಳೆ ಕಡೇಚೂರು ಸಂಸ್ಥಾನ ಮಠದ ಪೀಠಾಧಿಪತಿ ಗುರುಮೂರ್ತಿ ಶಿವಾಚಾರ್ಯರು, ಸೈದಾಪುರದ ಸಿದ್ಧ ಚೇತನಾಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾಂದ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಯುವ ಮುಖಂಡ ಮಹೇಶರೆಡ್ಡಿಗೌಡ ಮುದ್ನಾಳ, ಎಪಿಎಂಸಿ ಮಾಜಿ ಅಧ್ಯಕ್ಷ ಭೀಮನಗೌಡ ಕ್ಯಾತನಾಳ, ಪ್ರಕಾಶಗೌಡ ಸೈದಾಪುರ, ಮಲ್ಲನಗೌಡ ದುಪ್ಪಲ್ಲಿ, ನರಸಿಂಹಲು ನೀರಟ್ಟಿ, ಸುರೇಶ ಆನಂಪಲ್ಲಿ, ನಿತಿನ್ ತಿವಾರಿ, ಭೀಮಣ್ಣ ಮಡಿವಾಳ, ಮಲ್ಲರೆಡ್ಡಿ ಖಾನಾಪುರ, ಶರಣು ಯಲ್ಹೇರಿ, ಮಲ್ಲುಗೌಡ ಸೈದಾಪುರ, ಪರ್ವತರೆಡ್ಡಿ ದದ್ದಲ್, ಕೆ.ಬಿ ಗೋವರ್ಧನ್, ಗ್ರಾಪಂ ಮಾಜಿ ಅಧ್ಯಕ್ಷ ಮಾಳಪ್ಪ ಅರಕೇರಿ, ರಾಜು ದೊರೆ, ಮಲ್ಲೇಶ ನಾಯಕ ಕೂಡ್ಲೂರು, ವಿಶ್ವನಾಥ ಯಾದವ ಬದ್ದೇಪಲ್ಲಿ, ಮಧುಸೂದನರಾವ ಕುಲ್ಕರ್ಣಿ, ಹಳ್ಳೆಪ್ಪ ಕಿಲ್ಲನಕೇರಾ, ಆನಂದ ಮೀರಿಯಲ, ಸಿದ್ದು ಪೂಜಾರಿ, ಅರ್ಜುನ ಚವ್ಹಾಣ, ಜಿತೇಂದ್ರ ಬಾಡಿಯಾಳ, ಪ್ರಭು ಗೂಗಲ್, ಬಸ್ಸು ನಾಯಕ್, ಸುರೇಶ ಬೆಳಗುಂದಿ, ಸಾಗರ ಹುಲ್ಲೇರ ಇತರರು ಇದ್ದರು.

ಮಾಜಿ ಸೈನಿಕ ಮಲ್ಲರೆಡ್ಡಿಗೆ ಸನ್ಮಾನ:

ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಮಾಜಿ ಸೈನಿಕ ಮಲ್ಲರೆಡ್ಡಿ ಅವರನ್ನು ಸಿದ್ದಚೇತನಾಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮೀಜಿ ಸನ್ಮಾನಿಸಿ ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸೈನಿಕ ಮಲ್ಲರೆಡ್ಡಿ, ಗಡಿಯಲ್ಲಿ ಊಟ ನೀರು ಬಿಟ್ಟು ದೇಶಕ್ಕಾಗಿ ಹೋರಾಡ್ತೀವಿ, ಆಗ ನಮ್ಮ ಗುರಿ ಎದುರಾಳಿಗಳನ್ನು ನೆಲೆಕ್ಕೆ ಉರುಳಿಸುವುದು ಮಾತ್ರ ಆಗಿರುತ್ತದೆ. ಮನೆ, ಮಠ, ಹೆಂಡತಿ, ಮಕ್ಕಳು ಎಲ್ಲರನ್ನೂ ಮರೆತು ದೇಶದ ರಕ್ಷಣೆಯೇ ನಮ್ಮ ಕರ್ತವ್ಯ ಎಂದು ಜೀವದ ಹಂಗು ತೊರೆದು ಯುದ್ಧಭೂಮಿಯಲ್ಲಿ ಹೋರಾಡುತ್ತೇವೆ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ತಾಯಿ ಭಾರತಿ ಅಶ್ರಯವನ್ನು ಕೊಟ್ಟು ಅನ್ನ, ನೀರು, ಗಾಳಿ ಸರ್ವವನ್ನು ಕೊಟ್ಟು ಕಾಪಾಡುತ್ತಿರುವಾಗ ಸಂಕಷ್ಟ ಸಂದರ್ಭದಲ್ಲಿ ರಕ್ಷಣೆಗೆ ನಿಲ್ಲುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.