ಹೊಸಪೇಟೆ: ಇಂದಿರಾ ಕ್ಯಾಂಟೀನ್ ಬಡ ಜನರಿಗೆ ಅನುಕೂಲವಾಗಿದೆ. ಇಂದಿರಾ ಕ್ಯಾಟೀನ್ ಯೋಜನೆ ರಾಜ್ಯ ಸರ್ಕಾರದ ಉತ್ತಮ ಕಾರ್ಯಕ್ರಮವಾಗಿದ್ದು, ರಾಜ್ಯದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂಸದ ಈ. ತುಕಾರಾಂ ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಾದಯಾತೆ ಮಾಡುವ ಮೊದಲು ಕೇಂದ್ರ ಸರ್ಕಾರದ ಸಾಕಷ್ಟು ವೈಫಲ್ಯಗಳಿದ್ದು, ಅವುಗಳನ್ನು ಪ್ರಶ್ನಿಸುವ ಕೆಲಸ ಬಿಜೆಪಿಗರು ಮಾಡಬೇಕು. ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಸೇರಿದಂತೆ ಸಾಕಷ್ಟು ಸಮಸ್ಯೆ ತಾಂಡವಾಡುತ್ತಿವೆ. ಅವುಗಳನ್ನು ವಿರೋಧಿಸುವ ಕೆಲಸ ಬಿಜೆಪಿಗರು ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರಸಭಾ ಪೌರಾಯುಕ್ತ ಎರಗುಡಿ ಶಿವಕುಮಾರ್, ತಹಸೀಲ್ದಾರ್ ಶೃತಿ ಎಂ. ಮಳ್ಳಪ್ಪಗೌಡ್ರು, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ, ನಗರಸಭಾ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ನಗರಸಭಾ ಸದಸ್ಯೆ ಮುನ್ನಿ ಖಾಸಿಂ, ತಾಲೂಕು ಗ್ಯಾರಂಟಿ ಯೋಜನಾ ಅನುಷ್ಟಾನ ಸಮಿತಿ ಅಧ್ಯಕ್ಷ ಡಿ.ವೆಂಕಟರಮಣ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಸಿದ್ದನಗೌಡ, ನಗರಸಭಾ ಎಇಇ ಮನ್ಸೂರ್ ಅಹಮ್ಮದ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.ಸಂಸದ ಈ. ತುಕಾರಾಂ ಇಂದಿರಾ ಕ್ಯಾಟೀನ್ ಊಟ ರುಚಿ ಸವಿದರು. ಮುಖಂಡರು, ಅಧಿಕಾರಿಗಳು ಸಹ ಊಟದ ರುಚಿ ಸವಿದರು.