ಬಿಜೆಪಿಯವರು ಮಹಿಳಾ ಮೀಸಲಾತಿ ವಿರುದ್ಧವಾಗಿದ್ದು, ಸುಮ್ಮನೆ ನಾಟಕ ಆಡುತ್ತಿದ್ದಾರೆ

KannadaprabhaNewsNetwork |  
Published : Apr 27, 2026, 01:15 AM IST
8 | Kannada Prabha

ಸಾರಾಂಶ

2026ರ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಸಂಬಂಧಿಸಿದಂತೆ ವಿಶೇಷ ಅಧಿವೇಶನ ಕರೆದರು. ಈ ಮಧ್ಯೆ ಡಿಲಿಮಿಟೇಷನ್ ಬಿಲ್ ಮದ್ಯೆ ತಂದು ಗೊಂದಲ ಮೂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿಯವರು ಮಹಿಳಾ ಮೀಸಲಾತಿ ವಿರುದ್ಧವಾಗಿದ್ದು, ಸುಮ್ಮನೆ ನಾಟಕ ಆಡುತ್ತಿದ್ದಾರೆ. ಅಷ್ಟಕ್ಕೂ ಮಹಿಳಾ ಮೀಸಲಿಗೆ ಯಾರು ವಿರೋಧಿಗಳು ಎಂಬುದನ್ನು ಬಿಜೆಪಿಯವರು ಹೇಳಲಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದರು.

ನಗರದ ಇಂದಿರಾ ಗಾಂಧಿ ಕಾಂಗ್ರೆಸ್‌ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, ಮೊದಲು ಮಹಿಳಾ ಮೀಸಲಾತಿ ಗೆಜೆಟ್ ನೋಟಿಫಿಕೇಷನ್ ಮಾಡಬೇಕಿತ್ತು. ಆದರೆ, ಜನಗಣತಿಯ ನಂತರದಲ್ಲಿ ಅನುಷ್ಠಾನ ಮಾಡುವುದಾಗಿ ಅಮಿತ್ ಶಾ ಹೇಳಿದ್ದರು ಎಂದರು.

2026ರ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಸಂಬಂಧಿಸಿದಂತೆ ವಿಶೇಷ ಅಧಿವೇಶನ ಕರೆದರು. ಈ ಮಧ್ಯೆ ಡಿಲಿಮಿಟೇಷನ್ ಬಿಲ್ ಮದ್ಯೆ ತಂದು ಗೊಂದಲ ಮೂಡಿಸಿದ್ದಾರೆ. ಅಲ್ಲದೆ, ದೇಶದಲ್ಲಿನ ಎಲ್ಲಾ ವಿರೋಧ ಪಕ್ಷಗಳು ಕ್ಷೇತ್ರ ಪುನರ್‌ ವಿಂಗಡಣೆಯನ್ನು ವಿರೋಧಿಸಿದ್ದಾರೆ. ಅದರಲ್ಲೂ ಸೌಥ್ ಇಂಡಿಯಾಗೆ ಅನ್ಯಾಯ ಆಗಲಿದೆ ಎಂದು ಅವರು ಆರೋಪಿಸಿದರು.

‌ಒಳ ಮೀಸಲಾತಿ ಜಾರಿ ಮಾಡಿರುವ ಕಾಂಗ್ರೆಸ್ ಸರ್ಕಾರವು ಕಳೆದ 35 ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿಸಿ ಕೊಟ್ಟಿದೆ. ಬೊಮ್ಮಾಯಿ ಸರ್ಕಾರ ಮೀಸಲಾತಿಯನ್ನು 17 ಮಾಡಿ 9ನೇ ಶೆಡ್ಯೂಲ್ ಗೆ ಸೇರಿಸದೆ ಸುಳ್ಳು ಆಶ್ವಾಸನೆ ಮೂಲಕ ಜನರನ್ನು ದಿಕ್ಕು ತಪ್ಪಿಸಿದ್ದರು. ಮೀಸಲಾತಿಗೆ ವಿರುದ್ಧವಾಗಿರುವ ಮನೋಭಾವ ಇರುವ ಪಕ್ಷ ಎಂದರೆ ಬಿಜೆಪಿ ಎಂದು ಅವರು ದೂರಿದರು.

ಕರ್ನಾಟಕದಲ್ಲಿ ಲೋಕಲ್ ಬಾಡಿ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಕಾಂಗ್ರೆಸ್ ಪಕ್ಷ ಕೊಟ್ಟಿದೆ. ಮಹಿಳಾ ಮೀಸಲಾತಿ ಪರವಾಗಿ ಕಾಂಗ್ರೆಸ್ ಪಕ್ಷ ಇದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸತತ 3ನೇ ದಿನವೂ ದಿಲ್ಲೀಲಿ ಡಿಕೆಶಿ ರಾಜ್ಯಾಭಿವೃದ್ಧಿ ಮಂತ್ರ
27 ಪಡಿತರ ಗೋದಾಮುಗಳ ಮೇಲೆ ಲೋಕಾಯುಕ್ತ ದಾಳಿ